ಆ್ಯಪ್ನಗರ

ಪರೀಕ್ಷೆಯನ್ನು ಧೈರ್ಯದಿಂದ ಎದುರಿಸಿ

ಮುಂಡರಗಿ : ಇಲ್ಲಿಯ ಸ್ವಾಮಿ ವಿವೇಕಾನಂದ ಪ್ರೌಢ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ನಡೆಯಿತು. ಸಮಾರಂಭದಲ್ಲಿ ಬಿಆರ್‌ಪಿ ಆರ್‌.ಎಲ್‌.ಬದಾಮಿ ಮಾತನಾಡಿ, ವಿದ್ಯಾರ್ಥಿಗಳಿಗೆ ಎಸ್‌.ಎಸ್‌.ಎಲ್‌.ಸಿ ಪರೀಕ್ಷೆ ಮಹತ್ವದ ಹಂತವಾಗಿದ್ದು ಕೆಲವೇ ದಿನಗಳಿರುವುದರಿಂದ ತಾವು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಸತತ ಅಭ್ಯಾಸದಿಂದ ಹೆಚ್ಚಿನ ವಿಷಯವನ್ನು ಮನನ ಮಾಡಿಕೊಂಡು ಕೇಳಿದ ಪ್ರಶ್ನೆಗೆ ಸಮರ್ಪಕ ಉತ್ತರ ಬರೆಯಬೇಕು ಎಂದರು.

Vijaya Karnataka 20 Mar 2019, 5:00 am
ಮುಂಡರಗಿ : ಇಲ್ಲಿಯ ಸ್ವಾಮಿ ವಿವೇಕಾನಂದ ಪ್ರೌಢ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ನಡೆಯಿತು. ಸಮಾರಂಭದಲ್ಲಿ ಬಿಆರ್‌ಪಿ ಆರ್‌.ಎಲ್‌.ಬದಾಮಿ ಮಾತನಾಡಿ, ವಿದ್ಯಾರ್ಥಿಗಳಿಗೆ ಎಸ್‌.ಎಸ್‌.ಎಲ್‌.ಸಿ ಪರೀಕ್ಷೆ ಮಹತ್ವದ ಹಂತವಾಗಿದ್ದು ಕೆಲವೇ ದಿನಗಳಿರುವುದರಿಂದ ತಾವು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಸತತ ಅಭ್ಯಾಸದಿಂದ ಹೆಚ್ಚಿನ ವಿಷಯವನ್ನು ಮನನ ಮಾಡಿಕೊಂಡು ಕೇಳಿದ ಪ್ರಶ್ನೆಗೆ ಸಮರ್ಪಕ ಉತ್ತರ ಬರೆಯಬೇಕು ಎಂದರು.
Vijaya Karnataka Web GDG-19MDR2 SW SSLC
ಮುಂಡರಗಿ ವಿವೇಕಾನಂದ ಶಾಲೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಬಿಆರ್‌ಪಿ ಆರ್‌.ಎಲ್‌.ಬದಾಮಿ ವಿದ್ಯಾರ್ಥಿಗಳಿಗೆ ಪ್ರಶ್ನೆ ಪತ್ರಿಕೆ ಮಾದರಿ ವಿತರಿಸಿದರು.

ಅತಿಥಿ ಸಿಆರ್‌ಪಿ ಎಸ್‌.ಡಿ.ಬಸೇಗೌಡ್ರ ಮಾತನಾಡಿ, ಪರೀಕ್ಷೆಯನ್ನು ಯಾವುದೇ ಅಂಜಿಕೆ ಇಲ್ಲದೆ ಎದುರಿಸಬೇಕು. ನಿಮ್ಮ ಭವಿಷ್ಯದ ಶಿಲ್ಪಿಗಳು ನೀವೇ ಎಂದರು. ಇಸಿಒ ಬಿ.ವಿ.ನಂದಗಾವಿ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಗಳು ಎಲ್ಲಾ ವಿಷಯಗಳಿಗೆ ಸಮಾನ ಮಹತ್ವ ನೀಡಬೇಕು. ಅದಕ್ಕೊಂದು ನಿಮ್ಮದೇ ವೇಳಾಪಟ್ಟಿ ತಯಾರಿಸಿಕೊಂಡು ಓದಿನಲ್ಲಿ ತಲ್ಲೀನರಾಗಬೇಕು ಎಂದರು. ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಶಿಕ್ಷ ಕರು ಪರೀಕ್ಷಾ ಭಯ ಹೋಗಲಾಡಿಸಲು ರಾಮರಕ್ಷಾಸ್ತೋತ್ರ ಪುಸ್ತಕ, ಪುಷ್ಪ, ಲೇಖನಿಕೆ, ಸಿಹಿಯೊಂದಿಗೆ ಪ್ರವೇಶ ಪತ್ರ ವಿತರಿಸಿದರು. 10ನೇ ವರ್ಗದ ಶಿಕ್ಷ ಕಿ ಬಿ.ಡಿ.ನದಾಫ ಹಾಗೂ ಜೆ.ಎಮ್‌.ವಡ್ಡಟ್ಟಿ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಪ್ರಧಾನಗುರು ಎಸ್‌.ಎಸ್‌.ಮುಂಡರಗಿ ಹಾಗೂ ಶಿಕ್ಷ ಕ ವೃಂದದವರು ಹಾಜರಿದ್ದರು. ಅಧ್ಯಕ್ಷ ತೆಯನ್ನು ಮುಖ್ಯೋಪಾಧ್ಯಾಯ ಡಿ.ಟಿ.ಇಮ್ರಾಪೂರ ವಹಿಸಿದ್ದರು. ಕುಮಾರಿ ರಂಜಿತಾ ಹಡಪದ ನಿರೂಪಿಸಿದಳು. ತೇಜಸ್ವಿನಿ ಮಾಗಳ ವಂದಿಸಿದಳು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ