ಆ್ಯಪ್ನಗರ

ಸ್ವಚ್ಛತೆಯಿಂದ ಮಾತ್ರ ಮಲೇರಿಯಾ ನಿಯಂತ್ರಣ

ಕೊಣ್ಣೂರ: ನಮ್ಮ ಸುತ್ತಮುತ್ತಲಿನ ವಾತವರಣ ಸ್ವಚ್ಚ ವಿದ್ದರೆ ಹಾಗೂ ತಗ್ಗು ಪ್ರದೇಶಗಳಲ್ಲಿ ನೀರು ನಿಲ್ಲುವುದನ್ನು ತಡೆಗಟ್ಟಿದರೆ ಮಾತ್ರ ಮಲೇರಿಯಾ ನಿಯಂತ್ರಣ ಸಾಧ್ಯ ಎಂದು ಗದಗ ಜಿಲ್ಲಾ ಸಹಾಯಕ ಕೀಟ ಶಾಸ್ತ್ರಜ್ಞ ಎಲ್‌.ವಿ.ಹಿರೇಗೌಡ್ರ ಹೇಳಿದರು.

Vijaya Karnataka 9 Jul 2019, 5:00 am
ಕೊಣ್ಣೂರ: ನಮ್ಮ ಸುತ್ತಮುತ್ತಲಿನ ವಾತವರಣ ಸ್ವಚ್ಚ ವಿದ್ದರೆ ಹಾಗೂ ತಗ್ಗು ಪ್ರದೇಶಗಳಲ್ಲಿ ನೀರು ನಿಲ್ಲುವುದನ್ನು ತಡೆಗಟ್ಟಿದರೆ ಮಾತ್ರ ಮಲೇರಿಯಾ ನಿಯಂತ್ರಣ ಸಾಧ್ಯ ಎಂದು ಗದಗ ಜಿಲ್ಲಾ ಸಹಾಯಕ ಕೀಟ ಶಾಸ್ತ್ರಜ್ಞ ಎಲ್‌.ವಿ.ಹಿರೇಗೌಡ್ರ ಹೇಳಿದರು.
Vijaya Karnataka Web control of malaria only by cleaning
ಸ್ವಚ್ಛತೆಯಿಂದ ಮಾತ್ರ ಮಲೇರಿಯಾ ನಿಯಂತ್ರಣ


ಸ್ಥಳೀಯ ಕೆ.ಇ.ಎಸ್‌ ಪ್ರೌಢ ಶಾಲೆಯಲ್ಲಿ ನಡೆದ ತಾಲೂಕು ಮಟ್ಟದ ಮಲೇರಿಯಾ ವಿರೋಧಿ ಮಾಸಾಚಾರಣೆ ಹಾಗೂ ಜಾಥಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಿಂತ ನೀರು ಸೊಳ್ಳೆಗಳ ತವರೂರು. ಯಾವುದೇ ಜ್ವರ ಬಂದರೆ ಮೊದಲು ರಕ್ತ ಪರೀಕ್ಷೆ ಮಾಡಿಸಿ ಎಂಬ ಮಾಹಿತಿಯನ್ನು ಜಾಥಾ ಮೂಲಕ ಜಾಗೃತಿ ಮೂಡಿಸಲಾಯಿತು. 2025 ರ ವೇಳೆಗೆ ಮಲೇರಿಯಾ ಮುಕ್ತ ಭಾರತ ಮಾಡಲು ಎಲ್ಲರ ಸಹಕಾರ ಅಗತ್ಯ ಎಂದರು.

ಶೀರೊಳ ಆರೋಗ್ಯ ಕೇಂದ್ರದ ಅಧಿಕಾರಿ ಡಾ.ಬಿ.ಕೆ.ನಧಾಪ್‌ ಮಾತನಾಡಿ, ಜೂನ್‌ ತಿಂಗಳನ್ನು ಮಲೇರಿಯಾ ವಿರೋಧಿ ಮಾಸಾಚರಣೆ ತಿಂಗಳು ಎಂದು ಆಚರಣೆ ಮಾಡಲಾಗುತ್ತದೆ. ಜೂನ್‌ ತಿಂಗಳಲ್ಲಿ ಮಳೆಗಾಲ ಪ್ರಾರಂಭವಾಗಿ ಅಲ್ಲಲ್ಲಿ ಮಳೆಯ ನೀರು ಸಂಗ್ರಹವಾಗುತ್ತದೆ. ಆ ನೀರಿನಲ್ಲಿ ಸೊಳ್ಳೆಗಳ ಸಂತಾನೋತ್ಪತಿಯಿಂದಾಗಿ ಮಲೇರಿಯಾ ರೋಗ ಹರಡುತ್ತದೆ. ಆದ್ದರಿಂದ ಮಕ್ಕಳು ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದರು.

ಶಾಲಾ ಮುಖ್ಯಪಾಧಾಪಕ ಜಿ.ಎಸ್‌.ಪಾಟೀಲ, ಕೆ.ಬಿ.ಹಾದಿಮನಿ, ಎಂ.ಎಂ.ಅರ್ಭಣದ, ಎಂ.ಎಚ್‌.ಹಂಗನಕಟ್ಟಿ, ಎಂ.ಎಸ್‌.ಬಾಗಲೆ, ಆರೋಗ್ಯ ಇಲಾಖೆಯ ಪಿ.ಕೆ.ಜಿಲ್ಲಾಳ, ವೈ.ವೈ.ಅಕ್ಕಿ, ಪಿ.ಟಿ.ಪತಂಗ, ಎಂ.ಆರ್‌.ಕುಲಕರ್ಣಿ, ಸಿ.ಎಫ್‌.ಕುಂಬಾರ, ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು ಮತ್ತು ಶಾಲಾ ಮಕ್ಕಳು ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ