ಆ್ಯಪ್ನಗರ

ಸಹಕಾರ ಸಂಘಗಳ ಅಭಿವೃದ್ಧಿಗೆ ಸಹಕಾರ ಅಗತ್ಯ

ರೋಣ : ಮಲ್ಲಾಪುರದ ವ್ಯವಸಾಯ ಸೇವಾ ಸಹಕಾರಿ ಸಂಘ ಅನೇಕ ಏಳು ಬೀಳುಗಳೊಂದಿಗೆ ಮತ್ತು ಅನೇಕ ಮಹನೀಯರ ಶ್ರಮದಿಂದ ಇಂದು ಹೆಮ್ಮರವಾಗಿ ಬೆಳೆದಿದೆ. ಸಹಕಾರ ಸಂಘಗಳ ಅಭಿವೃದ್ಧಿಗೆ ಜನರ ಸಹಕಾರ ಅಗತ್ಯ ಎಂದು ಶಾಸಕ ಸಿ.ಸಿ.ಪಾಟೀಲ ಹೇಳಿದರು

Vijaya Karnataka 16 Dec 2022, 5:47 pm
ರೋಣ : ಮಲ್ಲಾಪುರದ ವ್ಯವಸಾಯ ಸೇವಾ ಸಹಕಾರಿ ಸಂಘ ಅನೇಕ ಏಳು ಬೀಳುಗಳೊಂದಿಗೆ ಮತ್ತು ಅನೇಕ ಮಹನೀಯರ ಶ್ರಮದಿಂದ ಇಂದು ಹೆಮ್ಮರವಾಗಿ ಬೆಳೆದಿದೆ. ಸಹಕಾರ ಸಂಘಗಳ ಅಭಿವೃದ್ಧಿಗೆ ಜನರ ಸಹಕಾರ ಅಗತ್ಯ ಎಂದು ಶಾಸಕ ಸಿ.ಸಿ.ಪಾಟೀಲ ಹೇಳಿದರು
Vijaya Karnataka Web Sahakara


ಅವರು ತಾಲೂಕಿನ ಮಲ್ಲಾಪುರದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಇದರ ನೂತನ ಕಚೇರಿ ಹಾಗೂ ಗುದಾಮು ಉದ್ಘಾಟಿಸಿ ಮಾತನಾಡಿದರು

ಸಹಕಾರಿ ಸಂಘಗಳು ಕೆಲವು ಅಭಿವೃದ್ಧಿ ಹೊಂದಿವೆ ಇನ್ನೂ ಕೆಲವು ಅಭಿವೃದ್ಧಿ ಹೊಂದುತ್ತಿಲ್ಲ. ಇದಕ್ಕೆ ಕಾರಣ ಸಹಕಾರಿ ಸಂಘಗಳಲ್ಲಿನ ಲೋಪದೋಷ ಕಾರಣ. ಅದನ್ನು ನಿಷ್ಠೆ, ಪ್ರಾಮಾಣಿಕ, ಹೊಸತನ ವಿಶೇಷ ಸವಲತ್ತುಗಳನ್ನು ರೈತರಿಗೆ ತಲುಪಿಸುವ ಮೂಲಕ ಅಭಿವೃದ್ಧಿ ಹೊಂದಬೇಕಾಗಿದೆ. ಸಹಕಾರಿ ಸಂಘಗಳು ಬರಿ ಸಾಲ ಕೊಡುವುದಕ್ಕೆ ಅಷ್ಟೇ ಸೀಮಿತವಾಗಿರಬಾರದು. ರೈತರಿಗೆ ರಸಗೊಬ್ಬರ, ಕ್ರೀಮಿನಾಶಕ ಔಷಧಗಳು,ಪಹಣಿ ಸೇರಿದಂತೆ ಇತರೆ ರೈತರಿಗೆ ಸುಗಮವಾಗಿ ಸಿಗುವಂತ ಸೌಲಭ್ಯಗಳನ್ನು ಸಹಕಾರಿ ಸಂಘಗಳಿಂದ ಕೊಡುವ ಮೂಲಕ ಬೆಳೆಸಬೇಕು.ಆ ನಿಟ್ಟಿನಲ್ಲಿ ಸಿಬ್ಬಂದಿ ಶ್ರಮವಹಿಸಿ ಕೆಲಸ ಮಾಡಬೇಕು.ರೈತರ ಆದಾಯಕ್ಕೆ ತಕ್ಕಂತೆ ರೈತರಿಗೆ ಸಾಲ ನೀಡಿ ಸಾಲ ಮನ್ನಾದಂತಾ ಕಾರ್ಯಗಳು ನಿಗದಿತ ಸಮಯದಲ್ಲಿ ನೋಡಿಕೊಳ್ಳಬೇಕು. ರೈತರೊಂದಿಗೆ ಉತ್ತಮ ಸಂಪರ್ಕ ಹೊಂದಿ ಯಾವುದೇ ಹೊರೆಯಾಗದಂತೆ ನೋಡಿಕೊಳ್ಳಬೇಕು ಎಂದರು.

ಇಂದು ಸಹಕಾರಿ ಸಂಘಗಳ ಜತೆಗೆ ರಾಷ್ಟ್ರೀಯ,ಅಂತಾರಾಷ್ಟ್ರೀಯ ಬ್ಯಾಂಕುಗಳು ದೊಡ್ಡ ಪೈಪೋಟಿ ನಡೆಸುತ್ತಿವೆ. ಆದರೂ ಸಹಕಾರಿ ಸಂಘಗಳನ್ನು ಹಿಂದಕ್ಕೆ ಹಾಕಲು ಸಾಧ್ಯವಾಗುತ್ತಿಲ್ಲ. ಸಹಕಾರಿ ಸಂಘಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪುತ್ತಿರುವುದರಿಂದ ಸಹಕಾರಿ ಕ್ಷೇತ್ರದಲ್ಲಿನ ಗಣನೀಯ ಬೆಳೆಯುತ್ತಿವೆ. ವೃತ್ತಿಪರತೆ ಅಳವಡಿಸಿಕೊಳ್ಳದಿದ್ದರೆ ಗ್ರಾಮೀಣ ಪ್ರದೇಶದಲ್ಲಿ ಸಹಕಾರ ಪತ್ತಿನ ಸಂಘಗಳು ಬೆಳೆಯುವುದು ಕಷ್ಟ. ಸಹಕಾರ ಸಂಘಗಳ ಪ್ರತಿನಿಧಿಗಳು ವೃತ್ತಿಪರತೆ, ಶಿಸ್ತು ಹಾಗೂ ಬದ್ದತೆ ಮೈಗೂಡಿಸಿಕೊಳ್ಳಬೇಕು ಎಂದರು.

ಜಿಪಂ ಸದಸ್ಯ ಶಿವಕುಮಾರ ನೀಲಗುಂದ ಮಾತನಾಡಿ, ರಾಷ್ಟ್ರೀಕೃತ ಬ್ಯಾಂಕುಗಳಿಗೆ ಹೋಲಿಸಿದರೆ ಸಹಕಾರ ಸಂಘಗಳ ಮೂಲಕ ತ್ವರಿತಗತಿಯಲ್ಲಿ ಸಾಲ ಸೌಲಭ್ಯ ಪಡೆದುಕೊಳ್ಳಬಹುದು. ಸಹಕಾರ ಸಂಘಗಳ ಮೂಲಕ ಸದಸ್ಯರು ತಾವು ಪಡೆದ ಸಾಲವನ್ನು ಸಮರ್ಪಕವಾಗಿ ಸಕಾಲದಲ್ಲಿ ಮರುಪಾವತಿ ಮಾಡಿದಲ್ಲಿ ಸಂಘ ಅಭಿವೃದ್ಧಿ ಹೊಂದಲು ಸಾಧ್ಯ. ಎಲ್ಲ ಸಮಾಜದ ಬಡ,ಮಧ್ಯಮ ವರ್ಗದವರಿಗೆ ಅತಿ ಸರಳ ಹಾಗೂ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ನೀಡುವ ಮೂಲಕ ಸಹಕಾರ ಸಂಘಗಳು ಮಾಡುತಿರುವ ನಿಶ್ವಾರ್ಥ ಸೇವೆ ನಿಜಕ್ಕೂ ಶ್ಲಾಘನೀಯ ಎಂದರು.

ಧಾರವಾಡ ಕೆಸಿಸಿ ನಿರ್ದೇಶಕ ಜಿ.ಪಿ.ಪಾಟೀಲ ಮಾತನಾಡಿ, ರೈತರನ್ನು ಆರ್ಥಿಕವಾಗಿ ಸಬಲರನ್ನಾಗಿಸುವುದು ಮತ್ತು ಅವರ ಏಳಿಗೆಗೆ ಶ್ರಮಿಸುವುದು ಸಹಕಾರ ಸಂಘಗಳ ಮೂಲ ಉದ್ದೇಶ. ಮಳೆ ಕೊರತೆ,ಬೆಳೆನಷ್ಟಗಳಿಂದ ರೈತ ಸಾಲ ಬಾಧೆ ಅನುಭವಿಸುತ್ತಿದ್ದಾನೆ. ಮಳೆ ನಂಬಿ ವ್ಯವಸಾಯ ಮಾಡುವ ರೈತ ಆರ್ಥಿಕವಾಗಿ ಕುಗ್ಗುತ್ತಿದ್ದಾನೆ. ಈ ನಿಟ್ಟಿನಲ್ಲಿ ಸಂಕಷ್ಟಕ್ಕೊಳಗಾದ ರೈತರಿಗೆ ಸಹಕಾರ ಸಂಘಗಳು ಕಡಿಮೆ ಬಡ್ಡಿದರದಲ್ಲಿ ಸಾಲ ನೀಡುವ ಮೂಲಕ ಅವರನ್ನು ಆರ್ಥಿಕವಾಗಿ ಸಬಲರನ್ನಾಗುವಂತೆ ಮಾಡಬೇಕು ಎಂದರು.

ಕಾಶಿಜ್ಞಾನ ಸಿಂಹಾಸನಾಧೀಶ್ವರ ಡಾ.ಚಂದ್ರಶೇಖರ ಶಿವಾಚಾರ್ಯರು ಸಾನ್ನಿಧ್ಯ ವಹಿಸಿ, ಸಕಲ ಜೀವರಾಶಿಗಳಲ್ಲಿ ಚಿಂತನ ಮಂಥನ ಮಾಡುವ ಏಕೈಕ ಜೀವಿಯಾಗಿರುವ ಮನುಷ್ಯ ತನ್ನ ಜೀವಿತಾವಧಿಯಲ್ಲಿ ಸತ್ಯ, ಪ್ರಾಮಾಣಿಕ, ನ್ಯಾಯ, ನೀತಿಯ ದಾರಿಯಲ್ಲಿಯೇ ಸಾಗಿ ಉತ್ತಮ ಹೆಸರು ಮಾಡಬೇಕು. ಇಂತಹ ಮಹತ್ತರ ಕಾರ್ಯವನ್ನು ಸಂಘದ ಕಾರ್ಯದರ್ಶಿ 2 ಲಕ್ಷ ರೂ.ಬಂಡವಾಳವನ್ನು 2 ಕೋಟಿ ರೂ.ವಹಿವಾಟಿಗೆ ಏರಿಸಿರುವುದು ಒಳ್ಳೆಯ ಸಮಾಜಮುಖಿ ಕೆಲಸ. ದೇಶದ ರೈತರು ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸಹಕಾರ ಸಂಘಗಳ ಪಾತ್ರ ಪ್ರಮುಖವಾಗಿದೆ ಎಂದರು.

ಗುಲಗಂಜಿಮಠದ ಗುರುಪಾದ ಶ್ರೀಗಳು, ಆಲಮೇಲದ ಚಂದ್ರಶೇಖರ ಶಿವಾಚಾರ್ಯರು, ಶಾಖಾ ನಿಡಗುಂದಿಕೊಪ್ಪದ ಸಿದ್ದರಾಮದೇವರು, ತಾಪಂ ಸದಸ್ಯ ವೀರುಪಾಕ್ಷ ಗೌಡ ಪಾಟೀಲ, ಸುನಂದಾ ಕೆಲೂಡಿ, ವಿ.ಎಸ್‌.ಪಾಟೀಲ, ವೆಂಕಟೇಶ ತಟಗಾರ, ಕೆ.ವಿ.ಪಾಟೀಲ, ಬಸವರಾಜ ಉಗಲವಾಟ, ಶಿವಪ್ಪ ಹುಲಕೋಟಿ, ಜಿ.ಎ.ಅಯ್ಯನಗೌಡ್ರ, ಈರಪ್ಪ ಗಾರವಾಡ, ಮುತ್ತನಗೌಡ ಕಲ್ಲನಗೌಡ್ರ, ಈರಪ್ಪ ಗಾರವಾಡ, ಶಶಿಕಲಾ ಹಿರೇಗೌಡ್ರ, ಜಯಶ್ರೀ ಪಾಟೀಲ, ಯಲ್ಲಪ್ಪ ಅರಹುಣಸಿ, ಬಿ.ವಿ.ಹಿರೇಗೌಡ್ರ, ಐ.ಆರ್‌.ಅಂಗಡಿ, ವಿ.ಕೆ.ಚಳಗೇರಿ, ಕಾರ್ಯದರ್ಶಿ ಕುಬೇರಗೌಡ ಹಿರೇಗೌಡ್ರ ಇತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ