ಆ್ಯಪ್ನಗರ

ಎತ್ತಿನ ಬಂಡಿ ಬದಲು ವಾಹನಗಳದ್ದೇ ಭರಾಟೆ

ನರಗುಂದ: ವರ್ಷದಲ್ಲಿಎರಡು ಬಾರಿ ಸವದತ್ತಿ ರೇಣುಕಾ ಎಲ್ಲಮ್ಮನ ಜಾತ್ರೆ ಆಚರಿಸುವ ಈ ಭಾಗದ ಭಕ್ತರ ಸಂಖ್ಯೆ ಹೆಚ್ಚಾಗಿದೆ. ಆದರೆ ಎತ್ತಿನ ಬಂಡಿ ಹತ್ತಿ ಮನೆ ಮಂದಿಯೊಂದಿಗೆ 'ಎಲ್ಲಮ್ಮ ನಿನ್ನಾಲ್ಕು ಉಧೋ..ಉಧೋ' ಎಂಬ ಉದ್ಘೋಷಣೆ, ಎತ್ತಿನ ಗಂಟೆ ಶಬ್ದ ಕ್ಷೀಣಿಸಿದ್ದು ಧೂಳೆಬ್ಬಿಸಿಕೊಂಡು ಭರ್ರನೆ ಹೋಗುವ, ಕಿವಿಗಿಡಚ್ಚುಕ್ಕುವ ವಾಹನಗಳ ಭರಾಟೆ ಹೆಚ್ಚಾಗಿರುವುದು ಕಂಡು ಬಂದಿತು.

Vijaya Karnataka 10 Jan 2020, 5:00 am
ನರಗುಂದ: ವರ್ಷದಲ್ಲಿಎರಡು ಬಾರಿ ಸವದತ್ತಿ ರೇಣುಕಾ ಎಲ್ಲಮ್ಮನ ಜಾತ್ರೆ ಆಚರಿಸುವ ಈ ಭಾಗದ ಭಕ್ತರ ಸಂಖ್ಯೆ ಹೆಚ್ಚಾಗಿದೆ. ಆದರೆ ಎತ್ತಿನ ಬಂಡಿ ಹತ್ತಿ ಮನೆ ಮಂದಿಯೊಂದಿಗೆ 'ಎಲ್ಲಮ್ಮ ನಿನ್ನಾಲ್ಕು ಉಧೋ..ಉಧೋ' ಎಂಬ ಉದ್ಘೋಷಣೆ, ಎತ್ತಿನ ಗಂಟೆ ಶಬ್ದ ಕ್ಷೀಣಿಸಿದ್ದು ಧೂಳೆಬ್ಬಿಸಿಕೊಂಡು ಭರ್ರನೆ ಹೋಗುವ, ಕಿವಿಗಿಡಚ್ಚುಕ್ಕುವ ವಾಹನಗಳ ಭರಾಟೆ ಹೆಚ್ಚಾಗಿರುವುದು ಕಂಡು ಬಂದಿತು.
Vijaya Karnataka Web crashes on vehicles instead of on carts
ಎತ್ತಿನ ಬಂಡಿ ಬದಲು ವಾಹನಗಳದ್ದೇ ಭರಾಟೆ


ಬನದ ಹುಣ್ಣಿಮೆಯ ಎಲ್ಲಮ್ಮ ಜಾತ್ರೆಗೆ ನರಗುಂದ ನಗರದ ಸವದತ್ತಿ ರಸ್ತೆ ಫುಲ್‌ ಟ್ರಾಫಿಕ್‌ ಜಾಮ್‌ ಆಗಿದ್ದು ಭಕ್ತರ ವಾಹನಗಳ ಭರಾಟೆಯಿಂದ ಬಸ್‌ ನಿಲ್ಲದಾಣದಿಂದ ಹುಡ್ಕೋ ಕಾಲನಿವರೆಗೆ ಗದ್ದಲವೋ ಗದ್ದಲ. ಕಿತ್ತು ಹೋದ ರಸ್ತೆಯಲ್ಲಿವಾಹನಗಳ ಸಂಚರಿಸಿ ಧೂಳೆಬ್ಬಿಸಿ ಉಸಿರುಗಟ್ಟುವ ವಾತಾವರಣ ನಿರ್ಮಾಣವಾಗಿತ್ತು.

ಎಲ್ಲಮ್ಮನ ಜಾತ್ರೆ ಬಂತು ಎಂದರೆ ನಗರದ ಸವದತ್ತಿ ರಸ್ತೆಯಲ್ಲಿಸಾರ್ವಜನಿಕರೂ ಸಂಚರಿಸಲು ಪರದಾಡಬೇಕಾಗುತ್ತದೆ. ಕಳೆದ ಮೂರು ದಿನಗಳಿಂದ ಚಕ್ಕಡಿ, ಟಂಟಂ, ಟ್ರಾತ್ರ್ಯಕ್ಟರ್‌ಗಳು ಸಾಲು ಸಾಲಾಗಿ ಸಂಚರಿಸುತ್ತಿವೆ. ಬಾಗಲಕೋಟ್‌, ರೋಣ, ಬದಾಮಿ, ಗದಗ ಸೇರಿದಂತೆ ದೂರದಿಂದ ಬರುವ ಸಹಸ್ರಾರು ಭಕ್ತರು ನರಗುಂದ ಮೂಲಕ ಗುಡ್ಡಕ್ಕೆ ಹೋಗುತ್ತಾರೆ. ಮಧ್ಯ ಉಪಹಾರ ಸೇವಿಸಲು ನಿಲ್ಲುತ್ತಾರೆ. ಇದರಿಂದ ಇಕ್ಕಟ್ಟಾದ ಸವದತ್ತಿ ರಸ್ತೆಯಿಂದ ಸಾರ್ವಜನಿಕರು ಟ್ರಾಫಿಕ್‌ ಜಾಮ್‌ ಕಿರಿಕಿರಿ ಎದುರಿಸಬೇಕಾಯಿತು.

ಕಾಣದ ಎತ್ತಿನ ಬಂಡಿ: ಗಲ್‌.. ಗಲ್‌.. ಎಂಬ ಶಬ್ದದೊಂದಿಗೆ ಸಿಂಗರಿಸಿದ ಎತ್ತಿನ ಬಂಡಿ ಬಂದವು ಎಂದರೆ ಎಲ್ಲಮ್ಮನ ಜಾತ್ರೆ ಬಂತು ಎಂದು ಹೇಳುತ್ತಿದ್ದ ಕಾಲ ಈಗಿಲ್ಲ. ಎತ್ತುಗಳ ಸಂಖ್ಯೆ ಕಡಿಮೆಯಾಗುವುದರ ಜತೆಗೆ ಎತ್ತಿನ ಬಂಡಿಗಳು ಕಾಣದಾಗಿವೆ. ಎತ್ತಿನ ಬಂಡಿ ಜಾಗಕ್ಕೆ ಟ್ರಾತ್ರ್ಯಕ್ಟರ್‌, ಟಂಟಂ, ಟೆಂಪೋಗಳು ಬಂದು ನಿಂತಿವೆ. ಆದರೆ ಇಂದು ಬೆರಳಣಿಕೆಯಷ್ಟು ಎತ್ತಿನ ಬಂಡಿಗಳು ಮಾತ್ರ ಎಲ್ಲಮ್ಮನ ಜಾತ್ರೆಯಲ್ಲಿಕಂಡು ಬಂದವು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ