ಆ್ಯಪ್ನಗರ

ಕೇಸರಿ ಭಯೋತ್ಪಾದನೆ ನಿಗ್ರಹ ಪಡೆ ರಚಿಸಿ: ಸೂಳಿಭಾವಿ

ಗದಗ :ದೇಶದಲ್ಲಿ ನಡೆದ ವೈಚಾರಿಕ ಚಿಂತಕರ ಹತ್ಯೆಗಳಿಗೆ ಕೇಸರಿ ಭಯೋತ್ಪಾದನೆ ಕಾರಣ ಎನ್ನುವುದು ಸ್ಪಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ನಕ್ಸಲ್‌ ನಿಗ್ರಹ ಪಡೆ ರೀತಿಯಲ್ಲಿಯೇ ಕೇಸರಿ ಭಯೋತ್ಪಾದನೆ ನಿಗ್ರಹ ಪಡೆ ರಚನೆಗೆ ರಾಜ್ಯ ಸರಕಾರ ಮುಂದಾಗಬೇಕು ಎಂದು ಗೌರಿ, ಕಲ್ಬುರ್ಗಿ, ದಾಬೋಲ್ಕರ್‌, ಪಾನ್ಸಾರೆ ಹತ್ಯಾ ವಿರೋಧಿ ಸಮಿತಿಯ ಬಸವರಾಜ ಸೂಳಿಭಾವಿ ಒತ್ತಾಯಿಸಿದರು.

Vijaya Karnataka 24 Jun 2018, 6:39 pm
ಗದಗ :ದೇಶದಲ್ಲಿ ನಡೆದ ವೈಚಾರಿಕ ಚಿಂತಕರ ಹತ್ಯೆಗಳಿಗೆ ಕೇಸರಿ ಭಯೋತ್ಪಾದನೆ ಕಾರಣ ಎನ್ನುವುದು ಸ್ಪಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ನಕ್ಸಲ್‌ ನಿಗ್ರಹ ಪಡೆ ರೀತಿಯಲ್ಲಿಯೇ ಕೇಸರಿ ಭಯೋತ್ಪಾದನೆ ನಿಗ್ರಹ ಪಡೆ ರಚನೆಗೆ ರಾಜ್ಯ ಸರಕಾರ ಮುಂದಾಗಬೇಕು ಎಂದು ಗೌರಿ, ಕಲ್ಬುರ್ಗಿ, ದಾಬೋಲ್ಕರ್‌, ಪಾನ್ಸಾರೆ ಹತ್ಯಾ ವಿರೋಧಿ ಸಮಿತಿಯ ಬಸವರಾಜ ಸೂಳಿಭಾವಿ ಒತ್ತಾಯಿಸಿದರು.
Vijaya Karnataka Web create saffron terrorist suppression sulebhavi
ಕೇಸರಿ ಭಯೋತ್ಪಾದನೆ ನಿಗ್ರಹ ಪಡೆ ರಚಿಸಿ: ಸೂಳಿಭಾವಿ


ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ''ದೇಶದಲ್ಲಿ ಕೇಸರಿ ಭಯೋತ್ಪಾದನೆ ಹೆಚ್ಚಾಗುತ್ತಿದೆ. ರಾಜ್ಯ ಮತ್ತು ಕೇಂದ್ರ ಸರಕಾರಗಳು ಹಿಂದೂ ಸಂಘಟನೆಗಳ ಈ ಭಯೋತ್ಪಾದನೆ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು. ಗೌರಿ ಲಂಕೇಶ ಹಂತಕರನ್ನು ಎಸ್‌ಐಟಿ ಪೊಲೀಸರು ಬಂಧಿಸಿರುವುದು ಸ್ವಾಗತಾರ್ಹ. ಅದೇ ರೀತಿ ಗೌರಿ ಹತ್ಯೆ ಹಿಂದಿನ ಕೇಸರಿ ಭಯೋತ್ಪಾದನೆ ಶಕ್ತಿಗಳನ್ನು ತಕ್ಷಣವೇ ಬಹಿರಂಗಪಡಿಸಬೇಕು'' ಎಂದು ಆಗ್ರಹಿಸಿದರು.

ಕಲ್ಬುರ್ಗಿ ಹತ್ಯೆ ತನಿಖೆ ಎಸ್‌ಐಟಿಗೆ ವಹಿಸಿ

ಡಾ.ಎಂ.ಎಂ. ಕಲ್ಬುರ್ಗಿ ಹತ್ಯೆ ಪ್ರಕರಣವನ್ನು ಗೌರಿ ಲಂಕೇಶ ಹತ್ಯೆಯ ತನಿಖೆ ನಡೆಸಿದ ಎಸ್‌ಐಟಿ ತಂಡಕ್ಕೆ ವಹಿಸಬೇಕು ಎಂದು ಆಗ್ರಹಿಸಿದ ಸೂಳಿಭಾವಿ, ''ಚಿಂತಕರ ಹತ್ಯೆಗಳ ಹಿಂದೆ ಹಿಂದೂ ಪರ ಸಂಘಟನೆಗಳ ಬೆಂಬಲ ಇರುವುದು ಗೌರಿ ಹಂತಕರ ಬಂಧನದಿಂದ ಸ್ಪಷ್ಟವಾಗಿದೆ. ಹಿಂದೂ ಸಂಘಟನೆಗಳ ಭಯೋತ್ಪಾದನೆ ದೇಶದ ಆಂತರಿಕ ಭದ್ರತೆಗೆ ಸವಾಲಾಗಿ ಪರಿಣಮಿಸಿವೆ. ಎಸ್‌ಐಟಿ ಪೊಲೀಸರು ತಕ್ಷಣ ಹಿಂದೂ ಸಂಘಟನೆಗಳ ಕಾರ್ಯಕರ್ತರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಬೇಕು. ಅಂದಾಗ ದೇಶದಲ್ಲಿ ನಡೆದ ಇನ್ನುಳಿದ ವಿಚಾರವಾದಿಗಳ ಹತ್ಯೆಯ ಹಿಂದಿನ ಸತ್ಯ ಹೊರಬರಲು ಸಾಧ್ಯ'' ಎಂದು ವಿಶ್ವಾಸ ವ್ಯಕ್ತಪಡಿಸಿದರು.

ವೇದಿಕೆಯ ಶರೀಫ್‌ ಬಿಳಿಯಲಿ, ವಸಂತ ಚೌಡನ್ನವರ, ಯಲ್ಲಪ್ಪ ರಾಮಗಿರಿ, ಮುತ್ತು ಬಿಳಿಯಲಿ, ರಾಮಚಂದ್ರ ಹಂಸನೂರ, ಬಸವರಾಜ ಈರಣ್ಣವರ ಇತರರು ಉಪಸ್ಥಿತರಿದ್ದರು.

ಮುತಾಲಿಕ್‌ ಬಂಧಿಸಿ

''ರಾಜ್ಯದಲ್ಲಿ ಕ್ರೌರ್ಯವನ್ನು ಹೆಚ್ಚಿಸುತ್ತಿರುವ, ಹಿಂಸಾ ಪ್ರವೃತ್ತಿ ಬೆಳೆಸುತ್ತಿರುವ ಶ್ರೀರಾಮಸೇನೆಯ ಪ್ರಮೋದ ಮುತಾಲಿಕರನ್ನು ಪೊಲೀಸರು ತಕ್ಷಣ ಬಂಧಿಸಿ ವಿಚಾರಣೆಗೆ ಒಳಪಡಿಸಬೇಕು'' ಎಂದು ಬಸವರಾಜ ಸೂಳಿಭಾವಿ ಆಗ್ರಹಿಸಿದರು.

ಮುತಾಲಿಕರನ್ನು ಅನುಚಿತ ಹಾಗೂ ಕಟು ಶಬ್ಧಗಳಲ್ಲಿ ಟೀಕಿಸಿದ ಸೂಳಿಭಾವಿ, ''ಗೌರಿ ಲಂಕೇಶ ಹತ್ಯೆ ಪ್ರಕರಣದಲ್ಲಿ ಬಂಧಿತನಾದ ವ್ಯಕ್ತಿಗೂ ಶ್ರೀರಾಮಸೇನೆಗೂ ಯಾವುದೇ ಸಂಬಂಧ ಇಲ್ಲ ಎನ್ನುತ್ತಾರೆ. ಇನ್ನೊಂದೆಡೆ ಗೌರಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತನಾಗಿರುವ ವಿಜಯಪುರದ ಶ್ರೀರಾಮಸೇನೆ ಮುಖಂಡ ಪರಶುರಾಮ ವಾಗ್ಮೋರೆ ಕುಟುಂಬ ಆರ್ಥಿಕ ಸಂಕಷ್ಟದಲ್ಲಿದೆ, ನೆರವು ನೀಡಿ ಎಂದು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಳ್ಳುತ್ತಿರುವುದು ಅನುಮಾನಕ್ಕೆ ಕಾರಣವಾಗಿದೆ'' ಎಂದರು.

''ಮತ್ತೊಂದೆಡೆ ಬಿಜೆಪಿ ನಾಯಕ ಜಗದೀಶ ಶೆಟ್ಟರ್‌ ಸಹ ಪರಶುರಾಮ ವಾಗ್ಮೋರೆಗೂ ಬಿಜೆಪಿಗೂ ಯಾವುದೇ ಸಂಬಂಧ ಇಲ್ಲ ಎಂದು ಹೇಳಿಕೆ ನೀಡುತ್ತಿದ್ದರೆ, ವಿಜಯಪುರದ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆಯೊಬ್ಬರು ಪರಶುರಾಮ ಬೆಂಬಲಕ್ಕೆ ನಿಂತಿದ್ದಾರೆ. ಈ ಎಲ್ಲ ಘಟನೆಗಳನ್ನು ಎಸ್‌ಐಟಿ ಅಧಿಕಾರಿಗಳು ಸಮಗ್ರವಾಗಿ ತನಿಖೆ ನಡೆಸಿದಾಗ ಹತ್ಯೆ ಹಿಂದಿನ ಶಕ್ತಿಗಳ ನಿಜ ಬಣ್ಣ ಬಯಲಾಗಲಿದೆ'' ಎಂದು ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ