ಆ್ಯಪ್ನಗರ

ವಚನಗಳಿಂದ ನೆಚ್ಚಿ ಕತ್ತಲೆ ಮಾಯ

ಗದಗ: ಜನವಾಣಿಯನ್ನು ದೇವವಾಣಿಯ ಮಟ್ಟಕ್ಕೆ ತೆಗೆದುಕೊಂಡು ಹೋಗಿ ಸರಳ ಮತ್ತು ಸುಲಲಿತವಾದ ಕನ್ನಡದಲ್ಲಿಅನುಭಾವದ ನುಡಿಗಳನ್ನು ವಚನರೂಪದಲ್ಲಿರಚಿಸಿದ ಬಸವಾದಿ ಶರಣರು ಜೀವನಮಾರ್ಗ ಬೋಧಿಸಿದರು ಎಂದು ಡಾ.ತೋಂಟದ ಸಿದ್ಧರಾಮ ಸ್ವಾಮೀಜಿ ಹೇಳಿದರು.

Vijaya Karnataka 23 Feb 2020, 5:00 am
ಗದಗ: ಜನವಾಣಿಯನ್ನು ದೇವವಾಣಿಯ ಮಟ್ಟಕ್ಕೆ ತೆಗೆದುಕೊಂಡು ಹೋಗಿ ಸರಳ ಮತ್ತು ಸುಲಲಿತವಾದ ಕನ್ನಡದಲ್ಲಿಅನುಭಾವದ ನುಡಿಗಳನ್ನು ವಚನರೂಪದಲ್ಲಿರಚಿಸಿದ ಬಸವಾದಿ ಶರಣರು ಜೀವನಮಾರ್ಗ ಬೋಧಿಸಿದರು ಎಂದು ಡಾ.ತೋಂಟದ ಸಿದ್ಧರಾಮ ಸ್ವಾಮೀಜಿ ಹೇಳಿದರು.
Vijaya Karnataka Web darkness disappears from the oaths
ವಚನಗಳಿಂದ ನೆಚ್ಚಿ ಕತ್ತಲೆ ಮಾಯ


ಲಿಂಗಾಯತ ಪ್ರಗತಿಶೀಲ ಸಂಘದ ಆಶ್ರಯದಲ್ಲಿಎಡೆಯೂರು ಜ. ತೋಂಟದಾರ್ಯ ಮಠದಲ್ಲಿಜರುಗಿದ 2472 ನೇ ಶಿವಾನುಭವದಲ್ಲಿವಚನ ಶಿಖರ ಪುಸ್ತಕ ಲೋಕಾರ್ಪಣೆ ಮಾಡಿ ಮಾತನಾಡಿದರು.

ಗದ್ಯ ಪದ್ಯ ಮಿಶ್ರಿತ ವಚನಗಳು ಜನಸಾಮಾನ್ಯರನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತವೆ. ಸಿದ್ಧಯ್ಯ ಪುರಾಣಿಕರಾದಿಯಾಗಿ ಅನೇಕ ಕವಿಗಳು ಆಧುನಿಕ ವಚನ ರಚಿಸಿದ್ದಾರೆ. ಡಾ.ಮಹಾಂತದೇವರು ರಚಿಸಿದ ವಚನಗಳು ಸಾಧಕರಿಗೆ ಸನ್ಮಾರ್ಗ ತೋರುವಂತಿದೆ. ವಚನ ಶಿಖರದಲ್ಲಿನಿರೂಪಿತವಾಗಿರುವ ವಚನಗಳು ವಾಸ್ತವಿಕ ಬದುಕಿನ ಅಂಶ ಪ್ರಸ್ತಾಪಿಸಿ, ಜೀವನದ ಸಾರ್ಥಕತೆ ಕಂಡುಕೊಳ್ಳುವ ಮಾರ್ಗ ತಿಳಿಸುತ್ತವೆ. ರೂಪಕಗಳ ಮೂಲಕ ನೆತ್ತಿಯ ಕತ್ತಲೆ ಕಳೆಯುವ ದಾರಿ ತೋರುತ್ತವೆ ಎಂದರು.

ಎಸ್‌.ಎ.ಮುಗದ ಪುಸ್ತಕ ಕುರಿತು ಮಾತನಾಡಿ, ಬುದ್ಧಿ, ಮನಸ್ಸನ್ನು ಲಿಂಗಯೋಗದಲ್ಲಿಸಾಮರಸ್ಯಗೊಳಿಸಿದಾಗ ಆಗುವ ಅನುಭಾವವನ್ನು ವಚನಗಳ ಮಾದರಿಯಲ್ಲಿರಚಿಸಿ ನೀಡಿದ್ದಾರೆ. ಭಕ್ತ, ಮಹೇಶ, ಪ್ರಸಾದಿ, ಪ್ರಾಣಲಿಂಗಿ, ಶರಣ ಮತ್ತು ಐಕ್ಯ ಷಟ್‌ಸ್ಥಲವನ್ನಾಧರಿಸಿ ರಚಿಸಿದ ವಚನಗಳು ಮಾದರಿಯಾಗಿವೆ. ಸಾಧನಾಪಥದ ಪಥಿಕರಿಗೆ ಇಲ್ಲಿಯ 200 ವಚನಗಳು ಕೈದೀವಿಗೆಯಾಗಿವೆ. ಜನಮನದಲ್ಲಿಬಸವಾದಿಶರಣರ ತತ್ತ್ವಗಳನ್ನು ಗಟ್ಟಿಗೊಳಿಸಲು ಸಹಾಯಕವಾಗಿವೆ ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ವೀರಯ್ಯಸ್ವಾಮಿ ಹಿರೇಮಠ ಅವರನ್ನು ಸನ್ಮಾನಿಸಲಾಯಿತು. ಕಾರಟಗಿಯ ಸಣ್ಣಸೂಗಪ್ಪನವರ ಮಾತನಾಡಿದರು.ಪ್ರೊ.ನಾರಾಯಣ ಹಿರೇಕೊಳಚಿ ಹಾಗೂ ಗುರುನಾಥ ಸುತಾರ ಅವರಿಂದ ವಯೋಲಿನ್‌ ಹಾಗೂ ತಬಲಾ ಜುಗಲಬಂದಿ ಕಾರ್ಯಕ್ರಮ ಜರುಗಿತು.

ಲೇಖಕ ಡಾ.ಮಹಾಂತದೇವರು, ನಿವೃತ್ತ ಪ್ರಾಚಾರ್ಯ ಬಿ.ಎಸ್‌.ಮೋರೆ ವಿವೇಕಾನಂದಗೌಡ ಪಾಟೀಲ, ಸಂಗಮೇಶ ದುಂದೂರ, ಗೌರಕ್ಕ ಬಡಿಗಣ್ಣವರ, ಶಶಿಧರ ಬೀರನೂರ, ಡಾ. ಪ್ರಭು ಗಂಜಿಹಾಳ, ವಿಜಯಕುಮಾರ ಹಿರೇಮಠ, ಪ್ರಕಾಶ ಅಸುಂಡಿ, ವೀರಣ್ಣ ಗೊಡಚಿ, ಡಾ. ಸುಜಾತ ಪಾಟೀಲ, ಕೆ. ನಾಗಪ್ಪ, ಗಂಗಾಧರ ಗಡ್ಡಿ, ಕೆ. ಲಕ್ಷಿತ್ರ್ಮ, ಚನ್ನಮ್ಮ ರಾಮದುರ್ಗ ಇದ್ದರು. ರತ್ನಕ್ಕ ಪಾಟೀಲ ನಿರೂಪಿಸಿದರು. ಮಲ್ಲಿಕಾರ್ಜುನ ಐಲಿ ಸ್ವಾಗತಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ