ಆ್ಯಪ್ನಗರ

ಒಳಚರಂಡಿಗಾಗಿ ಕೆರೆ ಮುಚ್ಚಲು ನಿರ್ಧಾರ

ಲಕ್ಕುಂಡಿ: ಗ್ರಾಮದಲ್ಲಿಚರಂಡಿ ನೀರು ಸಂಗ್ರಹವಾಗಿ ತೊಂದರೆಯಾಗುತ್ತಿದ್ದು, ಈ ಕುರಿತು ಒಳ ಚರಂಡಿ ನಿರ್ಮಾಣಕ್ಕೆ ಮಂಗಳವಾರ ನಡೆದ ಸಭೆಯಲ್ಲಿತೀರ್ಮಾನಿಸಲಾಯಿತು.

Vijaya Karnataka 9 Sep 2020, 5:00 am
ಲಕ್ಕುಂಡಿ: ಗ್ರಾಮದಲ್ಲಿಚರಂಡಿ ನೀರು ಸಂಗ್ರಹವಾಗಿ ತೊಂದರೆಯಾಗುತ್ತಿದ್ದು, ಈ ಕುರಿತು ಒಳ ಚರಂಡಿ ನಿರ್ಮಾಣಕ್ಕೆ ಮಂಗಳವಾರ ನಡೆದ ಸಭೆಯಲ್ಲಿತೀರ್ಮಾನಿಸಲಾಯಿತು.
Vijaya Karnataka Web 8LKD1_25
ಲಕ್ಕುಂಡಿ ಗ್ರಾಪಂ ಸಭಾ ಭವನದಲ್ಲಿಭೀಮಾಂಬಿಕಾ ದೇವಸ್ಥಾನದ ಹತ್ತಿರದ ಚರಂಡಿ ನೀರು ಹೊರ ಹಾಕುವ ಕುರಿತು ಸಭೆ ನಡೆಯಿತು.


ಚರಂಡಿ ನೀರು ಸಂಗ್ರಹದಿಂದ ತೊಂದರೆ ಅನುಭವಿಸುತ್ತಿದ್ದ ಇಲ್ಲಿಯ ನಿವಾಸಿಗಳು 3 ದಿನಗಳಿಂದ ರಸ್ತೆಗೆ ಬೇಲಿ ಹಚ್ಚಿ ಪ್ರತಿಭಟನೆ ನಡೆಸಿದ ಪರಿಣಾಮ ಅಧಿಕಾರಿಗಳ ತಂಡ ಮಂಗಳವಾರ ಗ್ರಾಮದ ಗಣ್ಯರ ಸಭೆ ಕರೆದಿತ್ತು.

ಈ ಸಭೆಯಲ್ಲಿಮೂರು ತೀರ್ಮಾನ ಕೈಗೊಳ್ಳಲಾಯಿತು. ಚರಂಡಿ ನೀರು ಸಂಗ್ರಹವಾಗಲು ಕಾರಣವಾಗಿರುವ ಅಗಳತ ಕೆರೆಯಲ್ಲಿಯ ನೀರನ್ನು ಹೊರ ಹಾಕಿ ಕೆರೆಯನ್ನು ಸಂಪೂರ್ಣ ಮುಚ್ಚುವುದು. ಚರಂಡಿ ನೀರು ಶಾಶ್ವತವಾಗಿ ಹೊರ ಹೋಗಲು ಭೀಮಾಂಬಿಕಾ ದೇವಸ್ಥಾನದಿಂದ ಅತ್ತಿಮಬ್ಬೆ ಮಹಾದ್ವಾರದ ಮುಂದಿನ ರಸ್ತೆಯವರೆಗೂ ಒಳ ಚರಂಡಿ ನಿರ್ಮಾಣ. ಇದೇ ಚರಂಡಿ ವ್ಯವಸ್ಥೆಯನ್ನು ಕಠಿಣ ಹಳ್ಳದವರೆಗೂ ಮುಂದುವರಿಸುವ ಯೋಜನೆ ರೂಪಿಸಬೇಕು ಎಂದ ಸಭೆಯಲ್ಲಿನಿರ್ಧರಿಸಲಾಯಿತು.

ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಡಾ ಎಚ್‌.ಎಸ್‌ ಜನಗಿ ಮಾತನಾಡಿ, ಬುಧವಾರದಿಂದಲೇ ಅಗಳತ ಕೆರೆ ನೀರು ಹೊರಹಾಕಿ ನಂತರ ಯೋಜನೆಯಂತೆ ಒಳ ಚರಂಡಿಯ ಕಾಮಗಾರಿ ಆರಂಭಿಸಲಾಗುವುದು ಎಂದು ಭರವಸೆ ನೀಡಿದರು.

ಸಮಸ್ಯೆ ಬಗೆ ಹರಿಸಿ:
ಒಳ ಚರಂಡಿ ಯೋಜನೆ ಕಾಮಗಾರಿ ಶಾಶ್ವತ ಹಾಗೂ ವೈಜ್ಞಾನಿಕವಾಗಿ ನಡೆಯಬೇಕು. ತಾತ್ಕಲಿಕ ಸಮಸ್ಯೆ ಬಗೆಹರಿಸಿ ಮತ್ತೊಬ್ಬರಿಗೆ ತೊಂದರೆಯಾಗದಂತೆ ನಡೆಯಬೇಕು ಎಂದು ತಾಪಂ ಮಾಜಿ ಸದಸ್ಯ ಮಹೇಶ ಮುಸ್ಕಿನಬಾವಿ, ಗ್ರಾಪಂ ಮಾಜಿ ಅಧ್ಯಕ್ಷ ಕೆ.ಎಸ್‌.ಪೂಜಾರ ,ಗ್ರಾಪಂ ಮಾಜಿ ಸದಸ್ಯ ರುದ್ರಪ್ಪ ಮುಸ್ಕಿನಬಾವಿ, ಲಕ್ಷತ್ರ್ಮಣ ಗುಡಸಲಮನಿ ಹೇಳಿದರು.

ಅನುಕೂಲ ಕಲ್ಪಿಸಿ :
ನೀರು ಹೋಗುವ ಮಾರ್ಗ ಇಟ್ಟುಕೊಂಡು ಈಗಿರುವ ಸಮಸ್ಯೆಯನ್ನು ಇನ್ನೂ ಕಗ್ಗಂಟಾಗಿ ಉಳಿಸದೇ ನೀರು ಹೊರಹಾಕಲು ಉತ್ತಮ ಯೋಜನೆ ಮಾಡಿ ಅಲ್ಲಿಯ ನಿವಾಸಿಗಳಿಗೆ ಅನುಕೂಲ ಕಲ್ಪಿಸಬೇಕೆಂದು ಚನ್ನವೀರಗೌಡ ಪಾಟೀಲ, ಫಕ್ಕೀರಪ್ಪ ನಂದಪ್ಪನವರ, ನಿಂಗನಗೌಡ ರೋಣದ, ಬಸವರಾಜ ಸುರಕೋಡ ಸಲಹೆ ನೀಡಿದರು.

ತಾಪಂ ಮಾಜಿ ಅಧ್ಯಕ್ಷ ಎಂ. ಎನ್‌.ಉಮಚಿಗಿ, ಕೃಷ್ಣ ಹಡಗಲಿ,ಎಂ.ಆರ್‌, ವಡ್ಡರ, ವಿರುಪಾಕ್ಷಿ ಬೆಟಗೇರಿ, ತಾಪಂ ಉಪಾಧ್ಯಕ್ಷೆ ಸುಜಾತಾ ಖಂಡು, ವೀರಪ್ಪ ಕಮತರ, ಇಮಾಮಸಾಬ ನದಾಫ, ಮಹಾಂತೇಶ ಮೆಣಸಿನಕಾಯಿ, ಉಸ್ಮಾನಸಾಬ ನಮಾಜಿ, ಎಇಇ ಬಿ.ಆರ್‌. ದೇಶಪಾಂಡೆ, ಎಂ.ಎಸ್‌.ಕುಲಕರ್ಣೆ, ಪಿಡಿಒ ಮಂಜುಳಾ ಹೊಸಮನಿ, ಕಾರ್ಯದರ್ಶಿ ಬಿ.ಎಲ್‌. ಸವಿತಾ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ