ಆ್ಯಪ್ನಗರ

ಗೋವಿನಜೋಳ, ಹತ್ತಿ ಖರೀದಿ ಕೇಂದ್ರ ತೆರೆಯಲು ಆಗ್ರಹ

ರೋಣ: ತಾಲೂಕಿನ ಎಲ್ಲಹೋಬಳಿ, ಕೇಂದ್ರಗಳಲ್ಲಿಹತ್ತಿ ಹಾಗೂ ಗೋವಿನಜೋಳವನ್ನು ಬೆಂಬಲ ಬೆಲೆಗೆ ಖರೀದಿಸುವ ಕೇಂದ್ರ ತೆರೆಯಬೇಕು ಎಂದು ಒತ್ತಾಯಿಸಿ ರೈತ ಸಂಘದಿಂದ ತಹಸೀಲ್ದಾರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.

Vijaya Karnataka 21 Nov 2019, 5:00 am
ರೋಣ: ತಾಲೂಕಿನ ಎಲ್ಲಹೋಬಳಿ, ಕೇಂದ್ರಗಳಲ್ಲಿ ಹತ್ತಿ ಹಾಗೂ ಗೋವಿನಜೋಳವನ್ನು ಬೆಂಬಲ ಬೆಲೆಗೆ ಖರೀದಿಸುವ ಕೇಂದ್ರ ತೆರೆಯಬೇಕು ಎಂದು ಒತ್ತಾಯಿಸಿ ರೈತ ಸಂಘದಿಂದ ತಹಸೀಲ್ದಾರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.
Vijaya Karnataka Web demand to open bovine cotton buying center
ಗೋವಿನಜೋಳ, ಹತ್ತಿ ಖರೀದಿ ಕೇಂದ್ರ ತೆರೆಯಲು ಆಗ್ರಹ


ರೈತ ಸಂಘದ ಉಪಾಧ್ಯಕ್ಷ ಮಹಾದೇವಗೌಡ ಪಾಟೀಲ ಮಾತನಾಡಿ, ಈ ಹಿಂದೆ ತಾಲೂಕಿನ ರೈತರು ಸತತ ನಾಲ್ಕು ವರ್ಷಗಳ ಬರದ ಸಂಕಷ್ಟ ಅನುಭವಿಸಿದ್ದಾರೆ. ಪ್ರಸಕ್ತ ವರ್ಷದ ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ ತಾಲೂಕಿನ ರೈತರು ಕಂಗಾಲಾಗಿದ್ದಾರೆ. ಅಲ್ಪಸ್ವಲ್ಪ ಉಳಿದ ಗೋವಿನಜೋಳ ಹಾಗೂ ಹತ್ತಿ ಫಸಲನ್ನು ದಲ್ಲಾಳಿಗಳು ಬಾಯಿಗೆ ಬಂದ ದರಕ್ಕೆ ಕೇಳುತ್ತಿದ್ದಾರೆ. ಹೀಗಾಗಿ ತಾಲೂಕಿನ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಆದ್ದರಿಂದ ಸರಕಾರ ಹೋವಿನಜೋಳ ಮತ್ತು ಹತ್ತಿಗೆ ಬೆಂಬಲ ಬೆಲೆ ನಿಗದಿ ಮಾಡಿ ಪ್ರತಿ ಹೊಬಳಿಯಲ್ಲಿಖರೀದಿ ಕೇಂದ್ರ ತೆರೆಯಬೇಕು ಎಂದರು.

ಮಾರುಕಟ್ಟೆಯಲ್ಲಿಹತ್ತಿ ಮತ್ತು ಗೋವಿನಜೋಳದ ಬೆಲೆ ಕುಸಿತ ಕಾಣುತ್ತಿದ್ದು,ರೈತರು ಹೆಚ್ಚು ಹಾನಿ ಅನುಭವಿಸುವಂತಾಗಿದೆ. ಇದೇ ಸಂದರ್ಭದಲ್ಲಿಹೊಣೆಗಾರಿಕೆಯನ್ನು ಕೇಂದ್ರ ಮತು ರಾಜ್ಯ ಸರಕಾರದ ಹೆಗಲಿಗೇರಿಸಿ ಅಧಿಕಾರಿಗಳು ಜಾರಿಕೊಳ್ಳುವ ತಂತ್ರ ಮಾಡಬಾರದು. ಇಲ್ಲಿನ ವಾಸ್ತವ ಸ್ಥಿತಿಯನ್ನು ಸರಕಾರಕ್ಕೆ ಮನವರಿಕೆ ಮಾಡಬೇಕು. ಬೆಲೆ ಆಯೋಗದ ಸಲಹೆ ಪಡೆದು ಹತ್ತಿ ಮತ್ತು ಗೋವಿನಜೋಳಕ್ಕೆ ವೈಜ್ಞಾನಿಕ ಬೆಲೆ ನಿಗದಿ ಮಾಡಿ ತಕ್ಷಣವೇ ಖರೀದಿ ಕೇಂದ್ರ ತೆರೆಯಬೇಕು. ಈ ವರ್ಷ ಮುಂಗಾರು ಹಂಗಾಮಿನಲ್ಲಿಅತಿವೃಷ್ಟಿಯಿಂದ ಗೋವಿನಜೋಳ, ಹತ್ತಿ, ಈರುಳ್ಳಿ, ಹೆಸರು ಮುಂತಾದ ಬೆಳೆ ನಾಶವಾಗಿವೆ. ಕೇಂದ್ರ ತನಿಖಾ ತಂಡ ಕ್ಷೇತ್ರ ಸಮೀಕ್ಷೆ ನಡೆಸಿದೆ. ಆದರೆ ಇಲ್ಲಿಯವರೆಗೂ ರೈತರಿಗೆ ಬೆಳೆ ನಷ್ಟ ಪರಿಹಾರ ಸಿಕ್ಕಿಲ್ಲ.ಇಂಥ ಪರಿಸ್ಥಿತಿಯಲ್ಲಿಬೆಳೆ ನಷ್ಟ ಪರಿಹಾರವಾದರೂ ರೈತನಿಗೆ ಸಿಗುವಂತಾದರೇ ಅವರಿಗೆ ನೆರವಾಗುತ್ತದೆ. ಕೂಡಲೇ ಖರೀದಿ ಕೇಂದ್ರ ತೆರೆಯುವ ಜತೆಗೆ ವೈಜ್ಞಾನಿಕ ಬೆಲೆ ಹಾಗೂ ಬೆಳೆ ನಷ್ಟ ಪರಿಹಾರ ಸರಕಾರ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ರೈತ ಮುತ್ತನಗೌಡ ಚೌಡರೆಡ್ಡಿ ಮಾತನಾಡಿ, ತಾಲೂಕಿನಲ್ಲಿಮಳೆಯಿಂದ ಹಾಗೂ ನೆರೆ ಹಾವಳಿಯಿಂದ ರೈತರು ಬಹಳಷ್ಟು ಸಂಕಷ್ಟ ಅನುಭವಿಸುತ್ತಿದ್ದಾರೆ. ಇಂತಹ ಪರಿಸ್ಥಿಯಲ್ಲಿಗದಗ, ಲಕ್ಷೆತ್ರ್ಮೕಶ್ವರದಲ್ಲಿಗೋವಿನಜೋಳ ಮತ್ತು ಹತ್ತಿ ಖರೀದಿ ಕೇಂದ್ರ ತೆರೆದಂತೆ ರೋಣ ತಾಲೂಕಿನಲ್ಲೂತಕ್ಷಣವೇ ಖರೀದಿ ಕೇಂದ್ರ ಆರಂಭಿಸಬೇಕು. ಖರೀದಿ ಕೇಂದ್ರ ಆರಂಭಿಸುವಲ್ಲಿವಿಳಂಭ ನೀತಿ ಅನುಸರಿಸಿದರೆ ರಾಜ್ಯ ಹೆದ್ದಾರಿ ಬಂದ್‌ ಮಾಡಿ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಉಪ ತಹಸೀಲ್ದಾರ ನದಾಫ್‌ ಮನವಿ ಸ್ವೀಕರಿಸಿದರು. ಎಂ.ಬಿ.ಪಾಟೀಲ, ಪಿ.ಐ.ಪಟ್ಟಣಶೆಟ್ಟಿ, ಜಿ.ಎಸ್‌. ಗೌಡರ, ಗುದ್ನೆಪ್ಪನವರ, ಕೋಳ್ಳಿ ಇತರರು ಪಾಲ್ಗೊಂಡಿದ್ದರು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ