ಆ್ಯಪ್ನಗರ

ಬರ ತಾಲೂಕು ಘೋಷಣೆಗೆ ಆಗ್ರಹ

ಮುಂಡರಗಿ: ಈಚೆಗೆ ರಾಜ್ಯ ಸರಕಾರ ವಿವಿಧ ಜಿಲ್ಲೆಗಳಲ್ಲಿಹಲವು ತಾಲೂಕುಗಳನ್ನು ಮಳೆ ಅಭಾವದಿಂದ ಬರಗಾಲ ತಾಲೂಕುಗಳು ಎಂದು ಘೋಷಣೆ ಮಾಡಿ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ, ಜಿಲ್ಲೆಯಲ್ಲಿನರಗುಂದ ತಾಲೂಕನ್ನು ಮಾತ್ರ ಘೋಷಣೆಗೆ ಪರಿಗಣಿಸಿ ಮುಂಡರಗಿ ತಾಲೂಕನ್ನು ಬರ ತಾಲೂಕು ಎಂದು ಘೋಷಣೆ ಮಾಡಬೇಕು ಎಂದು ತಾಲೂಕು ಅಭಿವೃದ್ಧಿ ಹೋರಾಟ ವೇದಿಕೆ ಅಧ್ಯಕ್ಷ ವೈ.ಎನ್‌.ಗೌಡರ ಆಗ್ರಹಿಸಿದರು.

Vijaya Karnataka 27 Oct 2019, 5:00 am
ಮುಂಡರಗಿ: ಈಚೆಗೆ ರಾಜ್ಯ ಸರಕಾರ ವಿವಿಧ ಜಿಲ್ಲೆಗಳಲ್ಲಿಹಲವು ತಾಲೂಕುಗಳನ್ನು ಮಳೆ ಅಭಾವದಿಂದ ಬರಗಾಲ ತಾಲೂಕುಗಳು ಎಂದು ಘೋಷಣೆ ಮಾಡಿ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ, ಜಿಲ್ಲೆಯಲ್ಲಿನರಗುಂದ ತಾಲೂಕನ್ನು ಮಾತ್ರ ಘೋಷಣೆಗೆ ಪರಿಗಣಿಸಿ ಮುಂಡರಗಿ ತಾಲೂಕನ್ನು ಬರ ತಾಲೂಕು ಎಂದು ಘೋಷಣೆ ಮಾಡಬೇಕು ಎಂದು ತಾಲೂಕು ಅಭಿವೃದ್ಧಿ ಹೋರಾಟ ವೇದಿಕೆ ಅಧ್ಯಕ್ಷ ವೈ.ಎನ್‌.ಗೌಡರ ಆಗ್ರಹಿಸಿದರು.
Vijaya Karnataka Web demands for drought taluk declaration
ಬರ ತಾಲೂಕು ಘೋಷಣೆಗೆ ಆಗ್ರಹ


ಈ ಕುರಿತು ಸುದ್ದಿಗಾರರ ಜತೆಗೆ ಮಾತನಾಡಿದ ಅವರು ಮುಂಗಾರಿನಲ್ಲಿಮಳೆಯಾಗಿ ನಂತರ ಹಿಂಗಾರಿನಲ್ಲಿವಿಪರೀತ ಮಳೆಯಿಂದ ಬೆಳೆ ಹಾನಿಯಾಗಿದೆ. ಆದರೆ ಬರದಿಂದ ನೆರೆಯಿಂದ ಮುಂಡರಗಿ ತಾಲೂಕಿನ ರೈತರಿಗೆ ಯಾವುದೇ ಅನುಕೂಲವಾಗಿಲ್ಲ. ಪರಿಹಾರ ದಕ್ಕಿಲ್ಲಎಂದ ಅವರು ಮುಂಗಾರು ಮಳೆಗಳಾದ ಆಶ್ಲೇಷಾ ಕೃತ್ತಿಕಾ, ಭರಣಿ, ರೋಹಿಣಿ, ಮೃಶೀರ, ಆರಿದ್ರ ಆರು ಮಳೆಗಗಳು ಕೈಕೊಟ್ಟು ಹೆಸರು, ಜೋಳ, ಸೂರ್ಯಕಾಂತಿ, ಸಜ್ಜಿ, ಹೈಬ್ರಿಡ್‌ ಜೋಳ ಬರಲಿಲ್ಲಹೀಗಿದ್ದಾಗಲೂ ಸರಕಾರ ಬರಗಾಲ ತಾಲೂಕು ಎಂದು ಘೋಷಣೆ ಮಾಡದಿರುವುದು ದುಃಖಕರ ಸಂಗತಿ. ಸರಕಾರಕ್ಕೆ ಮುಂಗಾರು ಸಂಪೂರ್ಣ ಮಳೆ ಬೆಳೆ ಇಲ್ಲದಿರುವುದನ್ನು ಅರಿಕೆ ಮಾಡಲು ಅಧಿಕಾರಿಗಳು ವಿಫಲರಾಗಿದ್ದಾರೆ. ಜನಪ್ರತಿನಿಧಿಗಳು ಈ ಬಗ್ಗೆ ಗಮನ ಹರಿಸಲಿಲ್ಲ. ಈಗಲೂ ಕಾಲ ಮಿಂಚಿಲ್ಲ, ಸರಕಾರಕ್ಕೆ ಬರ ತಾಲೂಕು ಎಂದು ಘೋಷಣೆಗೆ ಜನಪ್ರತಿನಿಧಿಗಳು ಒತ್ತಾಯಿಸಿ ಕ್ರಮ ಜರುಗಿಸಬೇಕು. ಬರ ಘೋಷಣೆಗೆ ಅನೇಕ ಸೌಲಭ್ಯ ದೊರೆಯಲಿದ್ದು, ಸಮ್ಮಿಶ್ರ ಸರಕಾರ ಸಾಲ ಮನ್ನಾ ಯೋಜನೆಯೂ ಕೈಗೂಡಲಿಲ್ಲ. ರಾಷ್ಟ್ರೀಯ ಬ್ಯಾಂಕುಗಳಲ್ಲಿರೈತರು ಬೆಳೆ ವಿಮೆ ಮಾಡಿಸಿ ಮಂಜೂರಾಗುತ್ತದೆ ಎಂದು ನಂಬಿಕೊಂಡಿದ್ದರು. ರೈತರು ಸಾಲ ಮನ್ನಾ ಆಗದ ಕಾರಣ ಶೇ.3 ರಷ್ಟು ಬಡ್ಡಿ ಕಟ್ಟುವ ಬದಲು ಶೇ. 14 ರಷ್ಟು ತುಂಬುವಂತಾಯಿತು. ಪ್ರಧಾನ ಮಂತ್ರಿ ಫಸಲ ಬಿಮಾ ಯೋಜನೆ ಈವರೆಗೆ ಮಂಜೂರಾಗಿಲ್ಲ. ಪ್ರಧಾನ ಮಂತ್ರಿ ರೈತರ ಖಾತೆಗೆ ಹಾಕುವ 6 ಸಾವಿರ ಎಲ್ಲರೈತರಿಗೆ ಜಮಾ ಆಗಲಿಲ್ಲರಾಜ್ಯ ಸರಕಾರದ 4 ಸಾವಿರ ಹಣವೂ ಇನ್ನು ಕೆಲವರಿಗೆ ಬರಲಿಲ್ಲ. ಕೂಡಲೇ ಮುಂಡರಗಿ ತಾಲೂಕನ್ನು ಬರಗಾಲ ತಾಲೂಕು ಎಂದು ಘೋಷಣೆ ಮಾಡದಿದ್ದರೆ ರೈತರೊಂದಿಗೆ ತಹಸೀಲ್ದಾರ ಕಚೇರಿ ಎದುರು ಅಹೋರಾತ್ರಿ ಸತ್ಯಾಗ್ರಹ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ