ಆ್ಯಪ್ನಗರ

ಎನ್‌ಸಿಸಿಯಿಂದ ವಿದ್ಯಾರ್ಥಿಗಳಲ್ಲಿ ಶಿಸ್ತು

ಗದಗ: ಸ್ಥಳೀಯ ಹುಲಕೋಟಿ ಸಹಕಾರಿ ಶಿಕ್ಷಣ ಸಂಸ್ಥೆಯ ಪದವಿ ಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಎನ್‌ಸಿಸಿ ದಿನಾಚರಣೆ ನಿಮಿತ್ತ ನಗರದ ಪ್ರಮುಖ ಬೀದಿಗಳಲ್ಲಿರಕ್ತದಾನ ಜಾಗೃತಿ ರಾರ‍ಯಲಿ ನಡೆಸಿದರು.

Vijaya Karnataka 27 Nov 2019, 5:00 am
ಗದಗ: ಸ್ಥಳೀಯ ಹುಲಕೋಟಿ ಸಹಕಾರಿ ಶಿಕ್ಷಣ ಸಂಸ್ಥೆಯ ಪದವಿ ಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಎನ್‌ಸಿಸಿ ದಿನಾಚರಣೆ ನಿಮಿತ್ತ ನಗರದ ಪ್ರಮುಖ ಬೀದಿಗಳಲ್ಲಿರಕ್ತದಾನ ಜಾಗೃತಿ ರಾರ‍ಯಲಿ ನಡೆಸಿದರು.
Vijaya Karnataka Web discipline in students from ncc
ಎನ್‌ಸಿಸಿಯಿಂದ ವಿದ್ಯಾರ್ಥಿಗಳಲ್ಲಿ ಶಿಸ್ತು


ಪ್ರಾಚಾರ್ಯ ಎಸ್‌.ಜಿ.ಉಳಗೇರಿ ಮಾತನಾಡಿ, ಎನ್‌ಸಿಸಿ ವಿದ್ಯಾರ್ಥಿಗಳಲ್ಲಿಶಿಸ್ತು, ಸಮಯ ಪಾಲನೆ ಹಾಗೂ ದೇಶ ಸೇವಾ ಮನೋಭಾವ ಮೂಡಿಸುತ್ತದೆ. ರಕ್ತದಾನ ಅವಶ್ಯಕತೆಯ ಜಾಗೃತಿ ಮೂಡಿಸಲು ಸಲಹೆ ನೀಡಿದರು.

ಎನ್‌ಸಿಸಿ ಅಧಿಕಾರಿ ಕ್ಯಾಪ್ಟನ್‌ ವಸಂತ ಮೂಲಿಮನಿ, ಆರ್ಮಿಯ ಸುಬೇದಾರ ರಮೇಶಕುಮಾರ, ಪ್ರಿಯಾಂಕ ಬೇವಿನಕಟ್ಟಿ, ಕವಿತಾ ದೊಡ್ಡಮನಿ ಇದ್ದರು.

ಜಾಗೃತಿ ರಾರ‍ಯಲಿಯು ನಗರದ ಜಿಲ್ಲಾಕೀಡಾಂಗಣದ ಎದುರಿಗಿರುವ ಹುಲಕೋಟಿ ಸಹಕಾರಿ ಶಿಕ್ಷಣ ಸಂಸ್ಥೆಯಿಂದ ಪ್ರಾರಂಭಗೊಂಡು ಭೂಮರಡ್ಡಿ ವೃತ್ತ, ಗಾಂಧಿವೃತ್ತ, ಕೆ.ಸಿ.ರಾಣಿ ರಸ್ತೆಯ ಮೂಲಕ ರಕ್ತದಾನ ಮಹತ್ವ ಕುರಿತು ಸಂದೇಶಗಳ ಫಲಕಗಳನ್ನು ಹಿಡಿದು ಹಾಗೂ ಬ್ಯಾನರ್‌ಗಳ ಮೂಲಕ ಜಾಗೃತಿ ಮೂಡಿಸುವ ಘೋಷಣೆ ಕೂಗಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ