ಆ್ಯಪ್ನಗರ

ಶಿವಯೋಗ ಮಂದಿರದ ಹಸುಗಳಿಗೆ ಫುಡ್‌ ವಿತರಣೆ

ನರೇಗಲ್ಲ : ಇತ್ತೀಚೆಗೆ ಕೆಲವು ಜಿಲ್ಲೆಗಳಲ್ಲಿನ ಪ್ರವಾಹದಿಂದಾಗಿ ಜನ, ಜಾನುವಾರುಗಳು ಸಮರ್ಪಕ ನೀರು, ಆಹಾರ ಸೇರಿದಂತೆ ಮೂಲ ಸೌಲಭ್ಯಗಳ ಕೊರತೆ ಎದುರಿಸುತ್ತಿರುವ ಪರಿಣಾಮ ಸ್ಥಳೀಯ ಬೀಚಿ ಸಾಹಿತ್ಯ ಬಳಗದವರು ಬದಾಮಿ ತಾಲೂಕಿನ ಶಿವಯೋಗ ಮಂದಿರಕ್ಕೆ ತೆರಳಿ ಹಸುಗಳಿಗಾಗಿ 16 ಬ್ಯಾಗ ಫುಡ್‌ ವಿತರಣೆ ಮಾಡಿದರು.

Vijaya Karnataka 21 Aug 2019, 5:00 am
ನರೇಗಲ್ಲ : ಇತ್ತೀಚೆಗೆ ಕೆಲವು ಜಿಲ್ಲೆಗಳಲ್ಲಿನ ಪ್ರವಾಹದಿಂದಾಗಿ ಜನ, ಜಾನುವಾರುಗಳು ಸಮರ್ಪಕ ನೀರು, ಆಹಾರ ಸೇರಿದಂತೆ ಮೂಲ ಸೌಲಭ್ಯಗಳ ಕೊರತೆ ಎದುರಿಸುತ್ತಿರುವ ಪರಿಣಾಮ ಸ್ಥಳೀಯ ಬೀಚಿ ಸಾಹಿತ್ಯ ಬಳಗದವರು ಬದಾಮಿ ತಾಲೂಕಿನ ಶಿವಯೋಗ ಮಂದಿರಕ್ಕೆ ತೆರಳಿ ಹಸುಗಳಿಗಾಗಿ 16 ಬ್ಯಾಗ ಫುಡ್‌ ವಿತರಣೆ ಮಾಡಿದರು.
Vijaya Karnataka Web GDG-19NRGL2

ಫುಡ್‌ ವಿತರಿಸಿ ಮಾತನಾಡಿದ ಬೀಚಿ ಸಾಹಿತ್ಯ ಬಳಗದ ಅದ್ಯಕ್ಷ ಎಸ್‌. ಜಿ. ಗುಳಗಣ್ಣವರ, ಗದಗ ಮತ್ತು ಬಾಗಲಕೋಟ ಜಿಲ್ಲೆಯ ಕೆಲವು ಗ್ರಾಮಗಳ ಜನರು ಜಾನುವಾರುಗಳು ಪ್ರಕೃತಿ ವಿಕೋಪದಿಂದ ಸಂಕಷ್ಟಕ್ಕಿಡಾಗಿದ್ದು, ಅವುಗಳ ರಕ್ಷ ಣೆ ನಮ್ಮೆಲ್ಲರ ಕರ್ತವ್ಯವಾಗಿದೆ. ಉತ್ತರ ಕರ್ನಾಟಕದಲ್ಲಿನ ವೀರಶೈವ ಪರಂಪರೆಯಲ್ಲಿನ ವೈಶಿಷ್ಠ್ಯತೆ ಹೊಂದಿರುವ ಶಿವಯೋಗ ಮಂದಿರ ಹಸುಗಳ ಸಾಕಣಿಕೆ ಹಾಗೂ ಭಸ್ಮ ತಯಾರಿಸುವ ಪರಂಪರೆಯನ್ನು ಯಥಾವತ್ತಾಗಿ ನಡೆಸಿಕೊಂಡು ಬಂದಿದೆ ಎಂದು ತಿಳಿಸಿದರು.

ಬೀಚಿ ಸಾಹಿತ್ಯ ಬಳಗದ ಸದಸ್ಯರಾದ ನಿವೃತ್ತ ಶಿಕ್ಷ ಕ ರೇವಣಕಿಮಠ, ಎಲ್‌. ಎಲ್‌. ಎಂಕಾನಾಯ್ಕ, ಡಾ. ಎಲ್‌ ಎಸ್‌. ಗೌರಿ, ಎಮ್‌. ವಿ.ವೀರಾಪೂರ, ಈಶ್ವರ ಬೆಟಗೇರಿ, ರೇಣುಕಮಠ ಸೇರಿದಂತೆ ಎಲ್ಲ ಸದಸ್ಯರು ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ