ಆ್ಯಪ್ನಗರ

ವಿದ್ಯಾರ್ಥಿನಿಯರಿಗೆ ಕಲಿಕಾ ಸಾಮಗ್ರಿ ವಿತರಣೆ

ಗದಗ: ಹೆಣ್ಣು ಮಕ್ಕಳ ಸಂರಕ್ಷಣೆ ಹಾಗೂ ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಪಾಲಕ ಪೋಷಕರು ಮುಂದಾಗುವುದು ಎಂದಿಗಿಂತ ಇಂದು ಅವಶ್ಯವಿದೆ ಎಂದು ಐಎಂಎ ಅಧ್ಯಕ್ಷೆ ಡಾ.ರಾಧಿಕಾ ಕುಲಕರ್ಣಿ ಹೇಳಿದರು.

Vijaya Karnataka 13 Feb 2020, 5:00 am
ಗದಗ: ಹೆಣ್ಣು ಮಕ್ಕಳ ಸಂರಕ್ಷಣೆ ಹಾಗೂ ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಪಾಲಕ ಪೋಷಕರು ಮುಂದಾಗುವುದು ಎಂದಿಗಿಂತ ಇಂದು ಅವಶ್ಯವಿದೆ ಎಂದು ಐಎಂಎ ಅಧ್ಯಕ್ಷೆ ಡಾ.ರಾಧಿಕಾ ಕುಲಕರ್ಣಿ ಹೇಳಿದರು.
Vijaya Karnataka Web distribution of learning materials to students
ವಿದ್ಯಾರ್ಥಿನಿಯರಿಗೆ ಕಲಿಕಾ ಸಾಮಗ್ರಿ ವಿತರಣೆ


ನಗರದ ಕುಲಕರ್ಣಿ ಆಸ್ಪತ್ರೆ ಪ್ರಾಂಗಣದಲ್ಲಿಐಎಂಎದಿಂದ ಆಂಗ್ಲೊತ್ರ್ಯೕ ಉರ್ದು ಶಾಲೆ ವಿದ್ಯಾರ್ಥಿನಿಯರಿಗೆ ಏರ್ಪಡಿಸಿದ್ದ ಬೇಟಿ ಬಚಾವೋ-ಬೇಟಿ ಪಡಾವೋ ಕಾರ್ಯಕ್ರಮದಲ್ಲಿವಿದ್ಯಾರ್ಥಿನಿಯರಿಗೆ ಕಲಿಕಾ ಸಾಮಗ್ರಿ ವಿತರಿಸಿ ಮಾತನಾಡಿದರು.

ಹೆಣ್ಣು ಮಗುವಿಗೆ ಶಿಕ್ಷಣ ನೀಡುವುದೆಂದರೆ ಆಕೆ ಮುಂದೆ. ತಾಯಿಯಾಗಿ ಇಡೀ ಕುಟುಂಬವನ್ನು ಶಿಕ್ಷಣಮಯ ಮಾಡಬಲ್ಲಳು. ಅಂತೆಯೇ ಹೆಣ್ಣೊಂದು ಕಲಿತರೆ ಶಾಲೆಯೊಂದನ್ನು ತೆರೆದಂತೆ ಎಂಬ ಮಾತು ಅಕ್ಷರಶಃ ಒಪ್ಪುವಂತದ್ದು ಎಂದರು.

ಶಾಲೆಯಲ್ಲಿವಿದ್ಯಾರ್ಥಿನಿಯರ ಕಲಿಕೆಗೆ ಶಿಕ್ಷಕರು ಹೆಚ್ಚಿನ ಒತ್ತು ನೀಡಬೇಕು. ಹಾಗೆಯೇ ಕುಟುಂಬದಲ್ಲಿಪಾಲಕ ಪೋಷಕರು ಹೆಣ್ಣು ಮಕ್ಕಳ ಉನ್ನತ ಶಿಕ್ಷಣಕ್ಕೆ ಮಹತ್ವ ನೀಡಬೇಕೆಂದರು. ಮನೆಯಲ್ಲಿತಾಯಿ ವಿದ್ಯಾವಂತಳಾಗಿದ್ದರೆ ಮನೆಯಲ್ಲಿನ ಮಕ್ಕಳಿಗೆ ಉತ್ತಮ ಪಾಠ-ಶಿಕ್ಷಣ ನೀಡಲು ಸಾಧ್ಯ ಇದರಿಂದ ಮಕ್ಕಳ ಭವಿಷ್ಯ ಉಜ್ವಲವಾಗುವುದು ಎಂದರು.

ಡಾ.ಉದಯ ಕುಲಕರ್ಣಿ ಮಾತನಾಡಿ, ಹೆಣ್ಣೆಂಬ ಕೀಳರಿಮೆ ಬೇಡ, ಹೆಣ್ಣು ಮಗುವಿನ ಬಗ್ಗೆ ಸರ್ವರಲ್ಲಿಯೂ ಜಾಗೃತಿ ಮೂಡಿಸಿ ಮಗುವಿನಲ್ಲಿಆದರ್ಶ ವ್ಯಕ್ತಿತ್ವ ಧೈರ್ಯ ತುಂಬುವ ಕಾರ್ಯವನ್ನು ನಾವು ಮಾಡಿದಾಗ ಬೇಟಿ ಬಚಾವೋ-ಬೇಟಿ ಪಡಾವೋ ಅನುಷ್ಠಾನಗೊಳ್ಳಲು ಸಾಧ್ಯ ಎಂದರು.

ಐಶ್ವರ್ಯ ಕುಲಕರ್ಣಿ ವಿದ್ಯಾರ್ಥಿನಿಯರಿಗೆ ನೋಟ್‌ ಬುಕ್‌, ಪೆನ್ನು ಇತರೆ ಕಲಿಕಾ ಸಾಮಗ್ರಿ ವಿತರಿಸಿದರು. ಲೂಯಿಸ್‌, ರಿಯಾಜ್‌, ಗವಿಮಠ, ಮಹಾದೇವಿ, ಶಮ್‌ಶಾದ್‌ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ