ಆ್ಯಪ್ನಗರ

ವಿಶೇಷಚೇತನರಿಗೆ ಅನುಕಂಪ ಬೇಡ, ನೆರವು ನೀಡಿ

ಲಕ್ಷ್ಮೇಶ್ವರ : ಸರಕಾರ ವಿಶೇಷಚೇತನರ ಅಭಿವೃದ್ಧಿಗಾಗಿ ಅನೇಕ ಯೋಜನೆ ಜಾರಿಗೆ ತಂದಿದ್ದು, ಅವುಗಳನ್ನು ವಿಶೇಷಚೇತನರಿಗೆ ತಲುಪಿಸಿ ಸಮಾಜದ ಮುಖ್ಯ ವಾಹಿನಿಗೆ ತರಲು ಎಲ್ಲರೂ ಕೈಜೋಡಿಸಬೇಕು ಎಂದು ಹಿರಿಯ ದಿವಾಣಿ ನ್ಯಾಯಾಧೀಶ ಎಂ.ಆರ್‌.ಒಡೆಯರ್‌ ಹೇಳಿದರು.

Vijaya Karnataka 4 Dec 2018, 5:00 am
ಲಕ್ಷ್ಮೇಶ್ವರ : ಸರಕಾರ ವಿಶೇಷಚೇತನರ ಅಭಿವೃದ್ಧಿಗಾಗಿ ಅನೇಕ ಯೋಜನೆ ಜಾರಿಗೆ ತಂದಿದ್ದು, ಅವುಗಳನ್ನು ವಿಶೇಷಚೇತನರಿಗೆ ತಲುಪಿಸಿ ಸಮಾಜದ ಮುಖ್ಯ ವಾಹಿನಿಗೆ ತರಲು ಎಲ್ಲರೂ ಕೈಜೋಡಿಸಬೇಕು ಎಂದು ಹಿರಿಯ ದಿವಾಣಿ ನ್ಯಾಯಾಧೀಶ ಎಂ.ಆರ್‌.ಒಡೆಯರ್‌ ಹೇಳಿದರು.
Vijaya Karnataka Web do not be sympathetic to the specialists
ವಿಶೇಷಚೇತನರಿಗೆ ಅನುಕಂಪ ಬೇಡ, ನೆರವು ನೀಡಿ


ಪಟ್ಟಣದ ಪುರಸಭೆ ಸಭಾಭವನದಲ್ಲಿ ಸೋಮವಾರ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಕಂದಾಯ ಇಲಾಖೆ ಹಾಗೂ ಪುರಸಭೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ವಿಕಲಚೇತನರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿಶೇಷಚೇತನರಿಗೆ ಕೇವಲ ಸಾಂತ್ವನದ ಮಾತು ಹೇಳದೆ ಅವರಿಗೆ ಎಲ್ಲ ರೀತಿಯ ಸಹಾಯ, ಸಹಕಾರ ನೀಡಬೇಕು. ಸರಕಾರ ಪ್ರತ್ಯೇಕ ಇಲಾಖೆ ರೂಪಿಸಿದ್ದು, ಈ ಇಲಾಖೆ ಮುಖಾಂತರ ಸೌಲಭ್ಯ ನೀಡುತ್ತಿದ್ದು, ಸರಕಾರ ಎಲ್ಲ ಅನುದಾನದಲ್ಲಿ ಪ್ರತಿಶತ 3ರಷ್ಟು ನಿಧಿ ಮೀಸಲಿಟ್ಟಿದ್ದು, ಅದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ತಹಸೀಲ್ದಾರ ಕೆ.ಬಿ.ಕೊರಿಶೆಟ್ಟರ ಅಧ್ಯಕ್ಷ ತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ದಿವಾಣಿ ನ್ಯಾಯಾಧೀಶ ಎಚ್‌.ಐ.ಯಾದವಾಡ, ಜಿ.ಎಸ್‌.ಪಾಟೀಲ, ವಿ.ಎಲ್‌.ಪೂಜಾರ, ಮುಖ್ಯಾಧಿಕಾರಿ ರವಿ ಬಾಗಲಕೋಟಿ ಆಗಮಿಸಿದ್ದರು.

ವಿಕಲಚೇತನರ ದಿನಾಚರಣೆ ಕುರಿತು ನ್ಯಾಯವಾದಿ ಆರ್‌.ವಿ.ವರ್ಣಿಕರ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಪುರಸಭೆ ಸದಸ್ಯರು ಇದ್ದರು. ಎಂ.ಎಸ್‌.ಬೆಂತೂರು ಕಾರ್ಯಕ್ರಮ ನಿರ್ವಹಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ