ಆ್ಯಪ್ನಗರ

ಆರೋಗ್ಯ ಕಾಪಾಡಿಕೊಳ್ಳಲು ನಿರ್ಲಕ್ಷ್ಯ ಬೇಡ

ಗದಗ: ಸದೃಢ ಸಮಾಜಕ್ಕೆ ಸದೃಢÜ ವ್ಯಕ್ತಿ ಕೊಡಲು ತಾಯಿ ಮೊದಲು ಸದೃಢವಾಗಬೇಕು. ತಾಯಿ ಆರೋಗ್ಯವೇ ಮಗುವಿನ ಬೆಳವಣಿಗೆಗೆæ ನಾಂದಿ ಎಂದು ಜಿಲ್ಲಾಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಎಸ್‌.ಜಿ. ಸಲಗೆರೆ ಹೇಳಿದರು.

Vijaya Karnataka 17 Sep 2019, 5:00 am
ಗದಗ: ಸದೃಢ ಸಮಾಜಕ್ಕೆ ಸದೃಢÜ ವ್ಯಕ್ತಿ ಕೊಡಲು ತಾಯಿ ಮೊದಲು ಸದೃಢವಾಗಬೇಕು. ತಾಯಿ ಆರೋಗ್ಯವೇ ಮಗುವಿನ ಬೆಳವಣಿಗೆಗೆæ ನಾಂದಿ ಎಂದು ಜಿಲ್ಲಾಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಎಸ್‌.ಜಿ. ಸಲಗೆರೆ ಹೇಳಿದರು.
Vijaya Karnataka Web do not neglect to maintain health
ಆರೋಗ್ಯ ಕಾಪಾಡಿಕೊಳ್ಳಲು ನಿರ್ಲಕ್ಷ್ಯ ಬೇಡ


ತಾಲೂಕಿನ ಹುಲಕೋಟಿಯಲ್ಲಿಜಿಲ್ಲಾಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾನ್ಯಾಯವಾದಿಗಳ ಸಂಘ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಆಶ್ರಯದಲ್ಲಿರಾಷ್ಟ್ರೀಯ ಪೌಷ್ಟಿಕತೆ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಒಂದು ಹೆಣ್ಣು ಮಗಳು ತಾಯಿಯಾಗಲು ಪ್ರತಿದಿನ ಪೌಷ್ಟಿಕ ಆಹಾರ ಸೇವಿಸಬೇಕು. ತನ್ನ ಪರಿಸರದಲ್ಲಿಸಿಗುವ ಹಣ್ಣು ಹಂಪಲು, ಸೊಪ್ಪು ,ತರಕಾರಿ ತಿನ್ನಬೇಕು ಎಂದು ಸಲಹೆ ನೀಡಿದರು.

ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೇಲ್ವಿಚಾರಕಿ ಮಾತನಾಡಿ, ವಿಜಯಲಕ್ಷ್ಮೇ ಗುರುಬಸನಗೌಡ್ರ ಮಾತನಾಡಿ, ಪ್ರತಿದಿನ ಸೊಪ್ಪು ತರಕಾರಿ ಸೇವಿಸುವುದರಿಂದ ಮಹಿಳೆಯರು ಮತ್ತು ಗರ್ಭಿಣಿ, ಬಾಣಂತಿಯರು ಸದೃಢವಾಗಿ ಮನೆಯ ಮತ್ತು ಮಕ್ಕಳ ಜವಾಬ್ದಾರಿ ತೆಗೆದುಕೊಳ್ಳಲು ಸಮರ್ಥರಾಗುತ್ತಾರೆ. ಮಕ್ಕಳಿಗೆ ಯಾವ ರೀತಿ ಆಹಾರ ಕೊಡಬೇಕು ಹಾಗೂ ಯಾವ ತರಕಾರಿ-ಸೊಪ್ಪಿನಲ್ಲಿಯಾವ ಪೌಷ್ಟಿಕಾಂಶಗಳು ಇರುತ್ತವೆ. ಇಲಾಖೆಯಿಂದ ಬರುವಂತಹ ಸೌಲಭ್ಯ ಪಡೆದುಕೊಳ್ಳಲು ಹಾಗೂ ಅಂಗನವಾಡಿಯಿಂದ ದೊರೆಯುವ ಪೌಷ್ಟಿಕ ಆಹಾರ ತಿನ್ನುವ ಲಾಭಗಳ ಬಗ್ಗೆ ತಿಳಿಸಿದರು.

ರೇಣುಕಾ ಹಡಪದ, ಶ್ರೀದೇವಿ ಕೋರಿ ಅವರು ಸದಸ್ಯರು ಪೌಷ್ಟಿಕ ಆಹಾರದ ಕುರಿತು ಮಾತನಾಡಿದರು. ಸಾವಿತ್ರಿ ಗಾಳಿ, ಆರ್‌.ಎಸ್‌. ಈಳಗೇರ, ದೀಪಾ ಭಜಂತ್ರಿ, ಎ.ಎಲ್‌.ಮಂಜುಳಾ, ಸಾವಿತ್ರಿ ಕೌಜಗೇರಿ, ಜಯಲಕ್ಷ್ಮೇ ಕೆರಿಮಠ, ರೇಣುಕಾ ಕುಕನೂರ, ಓಲೆಕಾರ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ