ಆ್ಯಪ್ನಗರ

ಕೊಬ್ಬಿನಾಂಶ ಕರಗಿಸಲು ರಕ್ತದಾನ ಮಾಡಿ: ಡಾ.ಬೊಮ್ಮನಹಳ್ಳಿ

ಗದಗ : ಜೀವನದ ಪರಮೋಚ್ಛ ಕೆಲಸಕ್ಕೆ ರಕ್ತದಾನಿಗಳಿಂದ ಅನುಪಮ ಸೇವೆ ಸಲ್ಲುತ್ತದೆ ಎಂದು ಜಿಮ್ಸ್‌ನ ಪ್ಯಾಥ್ಯಾಲಜಿ ವಿಭಾಗದ ಮುಖ್ಯಸ್ಥ ಡಾ.ಬಸವರಾಜ ಬೊಮ್ಮನಹಳ್ಳಿ ಹೇಳಿದರು.

Vijaya Karnataka 18 Mar 2019, 5:00 am
ಗದಗ :ಜೀವನದ ಪರಮೋಚ್ಛ ಕೆಲಸಕ್ಕೆ ರಕ್ತದಾನಿಗಳಿಂದ ಅನುಪಮ ಸೇವೆ ಸಲ್ಲುತ್ತದೆ ಎಂದು ಜಿಮ್ಸ್‌ನ ಪ್ಯಾಥ್ಯಾಲಜಿ ವಿಭಾಗದ ಮುಖ್ಯಸ್ಥ ಡಾ.ಬಸವರಾಜ ಬೊಮ್ಮನಹಳ್ಳಿ ಹೇಳಿದರು.
Vijaya Karnataka Web GDG-17Rudragoud10
ಹುಲಕೋಟಿಯ ರೂರಲ್‌ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಘಟಕದ ಆಶ್ರಯದಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ವಿದ್ಯಾರ್ಥಿಗಳು ರಕ್ತದಾನ ಮಾಡಿದರು.


ತಾಲೂಕಿನ ಹುಲಕೋಟಿಯ ರೂರಲ್‌ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ದಿ.ಕೆ.ಎಚ್‌.ಪಾಟೀಲರ 95 ನೇ ಜನ್ಮದಿನೋತ್ಸವ ನಿಮಿತ್ತ ರೂರಲ್‌ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಕೆ.ಎಚ್‌.ಪಾಟೀಲ ಆಸ್ಪತ್ರೆ ಮತ್ತು ಸಂಶೋಧನಾ ಸಂಸ್ಥೆ, ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಐಎಂಎ ತಾಂತ್ರಿಕ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಘಟಕದ ಆಶ್ರಯದಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ಅವರು ಮಾತನಾಡಿದರು.

ಸಂಸ್ಥಾಪಕರ ದಿನಾಚರಣೆ ಅಂಗವಾಗಿ ರಕ್ತದಾನ ಶಿಬಿರ ಹಮ್ಮಿಕೊಂಡಿದ್ದು ಬಹಳ ಪ್ರಸ್ತುತವಾಗಿದೆ. ಮನುಷ್ಯನ ದೇಹದಲ್ಲಿ 5.5 ಲೀಟರ್‌ ರಕ್ತ ಸಂಗ್ರಹಣೆಯಾಗಿರುತ್ತದೆ. ಅದರಲ್ಲಿ 0.5 ಲೀಟರ್‌ ದೇಹದಲ್ಲಿ ವಿಶೇಷವಾಗಿ ಸಂಗ್ರಹವಾಗಿರುತ್ತದೆ. ಮನುಷ್ಯನ ದೇಹದಿಂದ ರಕ್ತದಾನಕ್ಕೆ 350 ಮಿ.ಲೀ. ರಕ್ತ ತೆಗೆದುಕೊಂಡರೆ ಆ ವ್ಯಕ್ತಿಗೆ ಕೇವಲ ನಾಲ್ಕು ತಾಸಿನಲ್ಲಿ ಮತ್ತೇ ದೇಹದಲ್ಲಿ ಕೇಂದ್ರಿಕೃತಗೊಳ್ಳುತ್ತದೆ. ರಕ್ತದಾನ ಮಾಡುವುದರಿಂದ ದೇಹದಲ್ಲಿರುವ ಕೊಬ್ಬಿನ ಅಂಶ ಹಾಗೂ ಹೆಚ್ಚಿನ ಕಬ್ಬಿಣ ಅಂಶ ಕಡಿಮೆಗೊಳಿಸಬಹುದಾಗಿದೆ ಎಂದರು.

ಡಾ.ಆರ್‌.ಟಿ.ಪವಾಡಶೆಟ್ಟರ ಮಾತನಾಡಿ, ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡುವುದರಿಂದ ಅನಾರೋಗ್ಯಕ್ಕೆ ತುತ್ತಾದ ಹಲವಾರು ಜೀವ ಉಳಿಸಬಹುದಾಗಿದೆ. ಸಧೃಡವಾದ ವ್ಯಕ್ತಿಯು 18 ರಿಂದ 65 ವಯಸ್ಸಿನವರೆಗೆ 188 ಸಲ ರಕ್ತದಾನ ಮಾಡಬಹುದಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಸುಮಾರು 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ರಕ್ತದಾನ ಮಾಡಿದರು. ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಚಾರ್ಯ ಡಾ.ವಿ.ಎಂ.ಪಾಟೀಲ, ಡಾ.ನಾಗನೂರ, ಡಾ.ವಿ.ಎಂ.ಪಾಟೀಲ್‌, ಡಾ.ಎಸ್‌.ಟಿ.ವಾಸನ್‌, ಪ್ರೊ.ಎ.ಬಿ.ನಿಡಗುಂದಿ, ಪ್ರೊ.ಎಲ್‌.ಟಿ.ದೇಸಿ, ಎಲ್‌.ಎ.ಕವಲೂರ, ಪ್ರೊ.ಪುನೀತ್‌ಗೌಡ ಪಾಟೀಲ್‌, ಪ್ರೊ.ಎಸ್‌.ಎಚ್‌. ಗುರ್ಲ್‌ಹೊಸೂರ, ಪ್ರೊ.ರಮೇಶ ಕರಿಕಟ್ಟಿ, ಪ್ರೊ.ಉಮೇಶ ಸಜ್ಜನರ, ಪ್ರೊ.ಎಂ.ವಿ.ಜೇರಬಂಡಿ, ಎಸ್‌.ಎಂ.ಚಿಕ್ಕೋಪ್ಪ, ನಾಗನಗೌಡ ವಿ.ಆರ್‌., ಡಾ.ಹರೀಶ ಪರ್ಮಿ, ಡಾ.ಶ್ವೇತಾ ಪಾಟೀಲ ಇದ್ದರು. ಐಶ್ವರ್ಯ ಸವಣೂರ ಸ್ವಾಗತಿಸಿದರು. ಥೀಯೋಡರ್‌ ತಡಪಟ್ಟಿ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ