ಆ್ಯಪ್ನಗರ

2 ತಿಂಗಳಲ್ಲಿ ಕಾಮಗಾರಿ ಮುಗಿಸದಿದ್ದರೆ ಜೈಲಿಗೆ: ಭೈರತಿ ಬಸವರಾಜ್‌

310 ಎಕರೆ ವಿಸ್ತೀರ್ಣದ ಬೃಹತ್‌ ಕೆರೆಯ ಕಾಮಗಾರಿ ಈಗಾಗಲೇ ಮುಗಿದು ಯೋಜನೆಗೆ ಒಳಪಡುವ ಜನ, ಜಾನುವಾರುಗಳಿಗೆ ನೀರು ಪೂರೈಸಬೇಕಾಗಿತ್ತು. ಈ ಕುಡಿಯುವ ನೀರಿನ ಯೋಜನೆ ತುರ್ತಾಗಿ ಪೂರ್ಣಗೊಳ್ಳದಿದ್ದರೆ ಅಧಿಕಾರಿಗಳನ್ನೇ ನೇರ ಹೊಣೆಯಾಗಿಸಲಾಗುವುದು.

Vijaya Karnataka Web 27 Apr 2022, 9:24 pm
ರೋಣ: ರೋಣ, ನರೇಗಲ್‌, ಗಜೇಂದ್ರಗಡ ಪಟ್ಟಣಗಳು ಸೇರಿದಂತೆ ಇನ್ನುಳಿದ 7 ಗ್ರಾಮಗಳಿಗೆ ಕುಡಿಯುವ ನೀರು ಪೂರೈಸುವ ಮಹತ್ವದ ಕಾಮಗಾರಿಗೆ ಹಲವು ವರ್ಷಗಳ ಹಿಂದೆಯೇ ಚಾಲನೆ ದೊರೆತಿದ್ದರೂ ನಿಧಾನಗತಿಯಲ್ಲಿ ಸಾಗುತ್ತಿರುವುದು ಬೇಸರದ ಸಂಗತಿ. ಮುಂದಿನ ಎರಡು ತಿಂಗಳ ಅವಧಿಯಲ್ಲಿ ಜಿಗಳೂರ ಕೆರೆಯ ಕಾಮಗಾರಿ ಮುಗಿಸದಿದ್ದರೆ ಸಂಬಂಧಿಸಿದ ಅಧಿಕಾರಿಗಳ ಹಾಗೂ ಗುತ್ತಿಗೆದಾರರ ಮೇಲೆ ಕ್ರಿಮಿನಲ್‌ ಪ್ರಕರಣ ದಾಖಲು ಮಾಡಿ ಜೈಲಿಗೆ ಕಳುಹಿಸಲಾಗುವುದು ಎಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ಖಡಕ್‌ ಎಚ್ಚರಿಕೆ ನೀಡಿದರು.
Vijaya Karnataka Web ಕುಡಿಯುವ ನೀರು
ಕುಡಿಯುವ ನೀರು


ಅವರು ಬುಧವಾರ ಬೆಳಗ್ಗೆ ಗದಗ ತಾಲೂಕಿನ ಜಿಗಳೂರ ಕೆರೆಯ ಕಾಮಗಾರಿ ವೀಕ್ಷಿಸಿ ಮಾತನಾಡಿ, ಮುಂದಿನ ಎರಡು ತಿಂಗಳೊಳಗೆ ಕಾಮಗಾರಿ ಮುಗಿಸಬೇಕು. ನಾನು ಮತ್ತೆ ಮುಂದಿನ ತಿಂಗಳು 27ನೇ ತಾರೀಖಗೆ ಬರುವೆ. ಅಷ್ಟರೊಳಗೆ ಈಗ ಸೂಚಿಸಿದ ಕೆಲಸ ಪೂರ್ಣಗೊಳ್ಳಬೇಕು. ಈ ಭಾಗದ ಜನರಿಗೆ ಕುಡಿಯುವ ನೀರನ್ನು ಕೊಡುವ ಬದ್ಧತೆ ನಮಗಿದೆ. ಆದ್ದರಿಂದ ಅಧಿಕಾರಿಗಳು ಕಾರ್ಯ ಪ್ರವೃತ್ತರಾಗಿ ಕೆಲಸ ಮಾಡಬೇಕು. ಮಳೆಗಾಲ ಪ್ರಾರಂಭವಾದರೆ ಇಲ್ಲಿ ಕಪ್ಪು ಮಣ್ಣು ಇರುವುದರಿಂದ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ಹೆಚ್ಚಿನ ಪ್ರಮಾಣದಲ್ಲಿ ಕಾರ್ಮಿಕರನ್ನು, ಯಂತ್ರಗಳನ್ನು ಬಳಕೆ ಮಾಡಿಕೊಂಡು ಕಾಮಗಾರಿಯನ್ನು ತ್ವರಿತವಾಗಿ ಮುಗಿಸಬೇಕು. ಇಲ್ಲವಾದರೆ ಗುತ್ತಿಗೆದಾರರ ಮೇಲೆ ಯಾವುದೇ ಮೂಲಾಜಿಲ್ಲದೆ ಪ್ರಕರಣ ದಾಖಲು ಮಾಡಲಾಗುವುದು ಎಂದರು.

ಮಠದ ಹಣವನ್ನು ಬಿಡ್ತಿಲ್ಲ ಅಂದ್ರೇ ಇವರನ್ನು ದೇವರೇ ಕಾಪಾಡಬೇಕು: ಎಚ್‌ಕೆ ಪಾಟೀಲ್‌ ಕಿಡಿ

310 ಎಕರೆ ವಿಸ್ತೀರ್ಣದ ಬೃಹತ್‌ ಕೆರೆಯ ಕಾಮಗಾರಿ ಈಗಾಗಲೇ ಮುಗಿದು ಯೋಜನೆಗೆ ಒಳಪಡುವ ಜನ, ಜಾನುವಾರುಗಳಿಗೆ ನೀರು ಪೂರೈಸಬೇಕಾಗಿತ್ತು. ಹಲವು ಕಾರಣಗಳಿಂದ ವಿಳಂಬವಾಗಿದೆ. ಇನ್ಮುಂದೆ ಈ ಕುಡಿಯುವ ನೀರಿನ ಯೋಜನೆ ತುರ್ತಾಗಿ ಪೂರ್ಣಗೊಳ್ಳದಿದ್ದರೆ ಅಧಿಕಾರಿಗಳನ್ನೇ ನೇರ ಹೊಣೆಯಾಗಿಸಲಾಗುವುದು. ಸಂಬಂಧಿಸಿದ ಅಧಿಕಾರಿಗಳು ಹಾಗೂ ತಾಂತ್ರಿಕ ಸಿಬ್ಬಂದಿ ನಿತ್ಯ ಸ್ಥಳಕ್ಕೆ ಭೇಟಿ ನೀಡಿ ಕೆಲಸ ವೇಗವಾಗಿ ನಡೆಯುವಂತೆ ನೋಡಿಕೊಳ್ಳಬೇಕು. ಗುತ್ತಿಗೆದಾರರು ಯಾವುದೇ ಸಬೂಬು ಹೇಳುವಂತಿಲ್ಲ. ಮೊದಲು ಕಾಮಗಾರಿ ಪೂರ್ಣಗೊಳಿಸಬೇಕು. ವಿಳಂಬ ನೀತಿ ಅನುಸರಿಸಿದರೆ ಸಹಿಸುವುದಿಲ್ಲಎಂದು ಎಚ್ಚರಿಕೆ ನೀಡಿದರು.

ಅಬ್ಬರದ ಮಳೆಗೆ ಬೆದರಿದ ಗದಗ: ಕುಸಿದ ಮನೆಗಳು, ಉರುಳಿತು ಮರಗಳು- ಭಯಭೀತರಾದ ಜನರು

ಈ ಸಂದರ್ಭದಲ್ಲಿ ರೋಣ ಶಾಸಕ ಕಳಕಪ್ಪ ಬಂಡಿ, ಯೋಜನೆಯ ವ್ಯವಸ್ಥಾಪಕ ಕೆ.ಪಿ.ಮೋಹನರಾಜ್‌, ಗದಗ ಜಿಲ್ಲಾಧಿಕಾರಿ ಎಂ.ಸುಂದರೇಶ ಬಾಬು, ಚೀಫ್‌ ಎಂಜಿನಿಯರ್‌ ಶ್ರೀಕೇಶವ, ಕಾರ್ಯಪಾಲಕ ಜೆ.ಎಚ್‌.ಕೆಂಗಾಳಿ, ಸಹಾಯಕ ಕಾರ್ಯ ಪಾಲಕ ಜಗದೀಶ ಹೊಸಮನಿ, ಸಹಾಯಕ ಎಂಜಿನಿಯರ್‌ ಕರಿಸಿದ್ದಪ್ಪ ಸೇರಿದಂತೆ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ