ಆ್ಯಪ್ನಗರ

ಸಂತೆಯಲ್ಲಿ ಬರ ಚಿತ್ರಣ

ಗಜೇಂದ್ರಗಡ : ಪಟ್ಟಣದ ಜಗಜ್ಯೋತಿ ಕೃಷಿ ಉಪಮಾರುಕಟ್ಟೆ ಆವರಣ ಒಳಗಿರುವ ವಾರದ ಮಂಗಳವಾರ ಸಂತೆಯಲ್ಲಿ 'ಬರ ಚಿತ್ರ'ಣ ಕಂಡು ಬಂದಿತು.

Vijaya Karnataka 6 Feb 2019, 5:00 am
ಗಜೇಂದ್ರಗಡ : ಪಟ್ಟಣದ ಜಗಜ್ಯೋತಿ ಕೃಷಿ ಉಪಮಾರುಕಟ್ಟೆ ಆವರಣ ಒಳಗಿರುವ ವಾರದ ಮಂಗಳವಾರ ಸಂತೆಯಲ್ಲಿ 'ಬರ ಚಿತ್ರ'ಣ ಕಂಡು ಬಂದಿತು.
Vijaya Karnataka Web drought depiction in santa
ಸಂತೆಯಲ್ಲಿ ಬರ ಚಿತ್ರಣ


ಸ್ವಲ್ಪ ಒಣಗಿದ ಕೆಲ ಗಿಡಗಳ ಕೆಳಗೆ ರೈತರ ಒಡನಾಡಿ ಜಾನುವಾರು ಮಾರಾಟ ಜೋರಾಗಿತ್ತು. ಎದುರಿಗೆ ಬಿರುಬಿಸಿಲು ಬಿಂಬಿಸುವ ಗುಡ್ಡದಿಂದ ಬಿಸಿ ಕಾವು ಬರ ಚಿತ್ರಣದ ಮುನ್ಸೂಚನೆಯಾಯಿತು.

ದನಗಳು ಹೊಟ್ಟು, ಮೇವಿನ ಕೊರತೆಯಿಂದ ಬಳಲುವುದು ಕಾಣಲಾರದೆ ಮಮ್ಮಲ ಮರಗಿ ಮಾರಾಟ ಮಾಡಲು ಬಂದಿದ್ದೇವೆ ಎಂಬುದು ರೈತರ ಅಳಲು.

ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಹಿಂಗಾರು ಹಂಗಾಮು ಕಣ್ಮರೆಯಾಗಿ ಕೃಷಿ ಚಟುವಟಿಕೆಗಳು ನಿಶಬ್ದಗೊಂಡು ಬರದ ಕರಿಛಾಯೆ ನೆರಳು ಕಾಲೂರಿದೆ. ಗಜೇಂದ್ರಗಡ, ಗೌಡಗೇರಿ, ಕುಂಟೋಜಿ, ಮ್ಯಾಕಲಝರಿ, ಗೋಗೇರಿ, ಮಾಟರಂಗಿ, ರಾಮಾಪುರ, ಪುರ್ತಗೇರಿ, ಕೊಡ ಗಾನೂರ, ವೀರಾಪುರ, ಚಿಲ್‌ಝರಿ, ಕಾಲಕಾಲೇಶ್ವರ, ಬೈರಾಪುರ, ಜಿಗೇರಿ, ರಾಜೂರ, ದಿಂಡೂರ, ಲಕ್ಕಲಕಟ್ಟಿ, ಕಲ್ಲಿಗನೂರ, ಮುಶಿಗೇರಿ, ನಿಡಗುಂದಿ, ಸೂಡಿ, ಮತ್ತಿತರ ಗ್ರಾಮಗಳ ರೈತರು ಕಂಗಾಲಾಗಿದ್ದಾರೆ.

ಮೇವು, ಹೊಟ್ಟು ಕೊರತೆಯ ಆತಂಕದಿಂದ ಸಂತೆಯಲ್ಲಿ ರೈತರು ಎತ್ತುಗಳನ್ನು ಮಾರಾಟ ಮಾಡಿದರು. ಸಂತೆಯಲ್ಲಿ ಜಾನುವಾರುಗಳ ಮಾರಾಟ ಅಧಿಕ ಸಂಖ್ಯೆಯಲ್ಲಿತ್ತು. ದಲ್ಲಾಳಿಗಳಿಗೆ ಮಾತ್ರ ಸಂತೆ ಲಾಭದಾಯಕವಾಗಿತ್ತು.

ಗೋಶಾಲೆ ತೆರೆಯಿರಿ : ಏತನ್ಮಧ್ಯೆ, ಪಟ್ಟಣ ಸೇರಿದಂತೆ ರೋಣ ಮತಕ್ಷೇತ್ರದಲ್ಲಿ ಮಳೆ ಬಾರದೆ ಬರ ಆವರಿಸಿಕೊಂಡಿರುವುದರಿಂದ ನಾಗೇಂದ್ರಗಡದ ಗ್ರಾಮ ಹೋಗರಿ ಕೆರೆಯಲ್ಲಿ ಜಿಲ್ಲಾಡಳಿತ ಗೋಶಾಲೆ ಪ್ರಾರಂಭಿಸಿ ಸಂಕಷ್ಟದಲ್ಲಿರುವ ರೈತರ ನೆರವಿಗೆ ಧಾವಿಸಬೇಕು ಎಂದು ಕೃಷಿಕರು ಆಗ್ರಹಿಸಿದರು.

ಗುಳೆ ತಪ್ಪಿಸಲು ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಪರಿಣಾಮಕಾರಿ ಅನುಷ್ಠಾನ ಅಗತ್ಯವಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಯಿತು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ