ಆ್ಯಪ್ನಗರ

ಕರ್ತವ್ಯ ನಿರ್ವಹಿಸಿದ ಪೌರಕಾರ್ಮಿಕರು

ಗದಗ: ಕೊರೊನಾ ಭೀತಿಯಿಂದ ಇಡೀ ದೇಶವೇ ಸ್ತಬ್ಧವಾಗಿದ್ದರೂ ಗದಗ -ಬೆಟಗೇರಿ ನಗರಸಭೆ ಪೌರಕಾರ್ಮಿಕರು ಎಂದಿನಂತೆ ಭಾನುವಾರ ಬೆಳಗ್ಗೆ ಸ್ವಚ್ಛತಾ ಕಾರ್ಯ ಕೈಗೊಂಡರು.

Vijaya Karnataka 23 Mar 2020, 5:00 am
ಗದಗ: ಕೊರೊನಾ ಭೀತಿಯಿಂದ ಇಡೀ ದೇಶವೇ ಸ್ತಬ್ಧವಾಗಿದ್ದರೂ ಗದಗ -ಬೆಟಗೇರಿ ನಗರಸಭೆ ಪೌರಕಾರ್ಮಿಕರು ಎಂದಿನಂತೆ ಭಾನುವಾರ ಬೆಳಗ್ಗೆ ಸ್ವಚ್ಛತಾ ಕಾರ್ಯ ಕೈಗೊಂಡರು.
Vijaya Karnataka Web duty bound civilians
ಕರ್ತವ್ಯ ನಿರ್ವಹಿಸಿದ ಪೌರಕಾರ್ಮಿಕರು


ಮಾಸ್ಕ್‌, ಕೈಗವಸ ಹಾಗೂ ಸ್ವಚ್ಛತಾ ಸಲಕರಣೆ ಹಿಡಿದು ಎಂದಿನಿಂತೆ ಬೀದಿಗಿಳಿದ ಪೌರ ಕಾರ್ಮಿಕರು, ರಸ್ತೆ ಕಸ ಗೂಡಿಸಿ, ಕಸದ ವಾಹನದಲ್ಲಿಹಾಕಿ ಕರ್ತವ್ಯ ಪ್ರಜ್ಞೆ ಮೆರೆದರು.

ಈ ಸಂದರ್ಭದಲ್ಲಿಮಾತನಾಡಿದ ಪೌರ ಕಾರ್ಮಿಕರು, ಸ್ವಚ್ಛತೆ ಕಾಪಾಡಿಕೊಂಡರೆ ಹೋಗ ಬರುವುದಿಲ್ಲಎನ್ನುತ್ತಿದ್ದಾರೆ. ಹೀಗಾಗಿ ಎಂದಿನಂತೆ ಸ್ವಚ್ಛತಾ ಕಾರ್ಯ ಮಾಡುತ್ತಿದ್ದೇವೆ. ಜನಸಂದಣಿ ಇಲ್ಲದ ಕಾರಣ ಬೇಗ ಬೇಗ ಕೆಲಸ ಮುಗಿಸಿ ಮನೆಗೆ ಹೋಗುತ್ತೇವೆ ಎಂದು ಪೌರ ಕಾರ್ಮಿಕರು ಹೇಳಿದರು.

ಅದೇ ರೀತಿ ಪೊಲೀಸರು, ಟ್ರಾಫಿಕ್‌ ಪೊಲೀಸರು ಸಹ ಜನಸಂಚಾರ ಇಲ್ಲದಿದ್ದರೂ ನಿಯೋಜಿದ ಸ್ಥಳಗಳಲ್ಲಿಇದ್ದು ಕರ್ತವ್ಯ ನಿರ್ವಹಿಸಿದರು. ಪತ್ರಿಕಾ ವಿತರಕರು, ಮಾರಾಟಗಾರರು ಬೆಳಗ್ಗೆಯೇ ಪತ್ರಿಕೆ ವಿತರಣೆ ಪೂರ್ಣಗೊಳಿಸಿ ಮನೆಗೆ ತೆರಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ