ಆ್ಯಪ್ನಗರ

ಆರ್ಥಿಕ ಸದೃಢತೆ ಸ್ವಾವಲಂಬನೆಗೆ ದಾರಿ

ಮುಂಡರಗಿ: ಮಹಿಳೆಯರು ಕೇವಲ ಹತ್ತು ರೂ. ಸಂಗ್ರಹ ಮಾಡುವ ಮೂಲಕ ಆರಂಭಿಸಿದ ಪ್ರಗತಿ ಮಹಿಳಾ ಸೇವಾ ಸಂಘ ಇಂದು ಕೋಟ್ಯಂತರ ವಹಿವಾಟು ನಡೆಸುವುದರ ಜತೆಗ ಯುವತಿಯರಿಗೆ ಸ್ವಾವಲಂಬನೆ ಬದುಕು ನೀಡಲು ಹಲವು ರೀತಿಯ ತರಬೇತಿ ಕೊಡಲಾಗುತ್ತಿದೆ. ಇದು ಮಹಿಳೆಯರಲ್ಲಿರುವ ಪ್ರಗತಿ ಮನೋಭಾವ ತೋರಿಸುತ್ತದೆ ಎಂದು ಶಾಸಕ ರಾಮಕೃಷ್ಣ ದೊಡ್ಡಮನಿ ಹೇಳಿದರು.

Vijaya Karnataka 26 Mar 2018, 5:00 am
ಮುಂಡರಗಿ: ಮಹಿಳೆಯರು ಕೇವಲ ಹತ್ತು ರೂ. ಸಂಗ್ರಹ ಮಾಡುವ ಮೂಲಕ ಆರಂಭಿಸಿದ ಪ್ರಗತಿ ಮಹಿಳಾ ಸೇವಾ ಸಂಘ ಇಂದು ಕೋಟ್ಯಂತರ ವಹಿವಾಟು ನಡೆಸುವುದರ ಜತೆಗ ಯುವತಿಯರಿಗೆ ಸ್ವಾವಲಂಬನೆ ಬದುಕು ನೀಡಲು ಹಲವು ರೀತಿಯ ತರಬೇತಿ ಕೊಡಲಾಗುತ್ತಿದೆ. ಇದು ಮಹಿಳೆಯರಲ್ಲಿರುವ ಪ್ರಗತಿ ಮನೋಭಾವ ತೋರಿಸುತ್ತದೆ ಎಂದು ಶಾಸಕ ರಾಮಕೃಷ್ಣ ದೊಡ್ಡಮನಿ ಹೇಳಿದರು.
Vijaya Karnataka Web economic stability leads to self reliance
ಆರ್ಥಿಕ ಸದೃಢತೆ ಸ್ವಾವಲಂಬನೆಗೆ ದಾರಿ


ಇಲ್ಲಿಯ ಪ್ರಗತಿ ಮಹಿಳಾ ವಿವಿಧೋದ್ದೇಶಗಳ ಸೇವಾ ಸಂಘ ಆಶ್ರಯದಲ್ಲಿ ಮಂಜುನಾಥ ಸಮುದಾಯ ಭವನದಲ್ಲಿ ನಡೆದ ಕೈಮಗ್ಗ ಬಳಸಿ ಹ್ಯಾಂಡ್‌ವರ್ಕ್‌ ಡಿಸೈನ್‌ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಹಿಳೆಯರು ಆರ್ಥಿಕ ಸದೃಢತೆ ಹೊಂದಿದರೆ ಸ್ವಾವಲಂಬನೆಗೆ ದಾರಿಯಾಗುತ್ತದೆ ಅದಕ್ಕೆ ಮೂಲ ಮಾರ್ಗ ನಾನಾ ತರಬೇತಿಗಳನ್ನು ಪಡೆದು ಆ ಮೂಲಕ ಎಲ್ಲ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು, ಉದ್ಯೋಗ, ಸಹಕಾರ, ರಾಜಕೀಯ, ಸಾಹಿತ್ಯ, ಸಾಂಸ್ಕೃತಿಕ, ಔದ್ಯೋಗಿಕರಣ, ಸಾಮಾಜಿಕ ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ಮಹಿಳೆ ಮುಂದುವರೆದಿದ್ದಾಳೆ, ಸಹಕಾರ ರಂಗದಲ್ಲಿ ಯಾವದೇ ಜಾತಿ ಮತ ಬೇಧ ಇಲ್ಲದೆ ಏಕತೆಯನ್ನು ಬಿಂಬಿಸುತ್ತದೆ, ಮಾರುಕಟ್ಟೆಯ ಸಂಪೂರ್ಣ ಅರಿವು ಪಡೆದು ತಾವು ಪಡೆದ ತರಬೇತಿಯನ್ನು ಇನ್ನಷ್ಟು ವಿಸ್ತಾರಗೊಳಿಸಬೇಕು, ಮನುಷ್ಯನಿಗೆ ಆರ್ಥಿಕ ಪ್ರಗತಿಯೂ ಮುಖ್ಯ ಇದರಿಂದ ಅನೇಕ ಸವಾಲುಗಳನ್ನು ಎದುರಿಸಿ ಹಣಕಾಸು ಪರಿಸ್ಥಿತಿಯನ್ನು ಸುಧಾರಣೆ ಮಾಡಿಕೊಳ್ಳಬೇಕು, ರಾಜ್ಯ ಕೇಂದ್ರ ಸರಕಾರ ಮಹಿಳೆಯ ಆರ್ಥಿಕ ಮತ್ತಯ ಶೈಕ್ಷ ಣಿಕ ಸ್ವಾವಲಂಬನೆಗೆ ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ, ಎಲ್ಲರಿಗೂ ತಲುಪುವಂತಾಗಬೇಕು ಎಂದರು.

ಪ್ರಗತಿ ಮಹಿಳಾ ವಿವಿದೋದ್ದೇಶಗಳ ಸೇವಾ ಸಂಘದ ಅಧ್ಯಕ್ಷೆ ಪ್ರತಿಭಾ ಹೊಸಮನಿ ಮಾತನಾಡಿ, ಮೂರು ತಿಂಗಳ ತರಬೇತಿ ಪಡೆದ ಯುವತಿಯರು ಈಗಾಗಲೇ ಸ್ವಂತ ಉದ್ಯೋಗಗಳನ್ನು ಮಾಡುತ್ತ ಸ್ವಾವಲಂಬನೆ ಪಡೆಯುತ್ತಿದ್ದಾರೆ, ಇಲ್ಲಿ ಕೇವಲ ತರಬೇತಿ ಪಡೆಯುವದಷ್ಟೆ ಅಲ್ಲ ತಾವು ತಯಾರಿಸಿದ ವಸ್ತುಗಳನ್ನು ಮಾರಾಟ ಮಾಡುವ ಜ್ಞಾನ ಪಡೆಯುತ್ತಾರ, ಮದುವೆಯಲ್ಲಿ ಬ್ಯೂಟಿಷಿಯನ್‌ ತರಬೇತಿ ಪ್ರಯೋಜನಕ್ಕೆ ಬರುತ್ತಿದೆ, ಸಿದ್ದ ವಸ್ತುಗಳ ಉಡುಪು ತಯಾರಿಸಿದ್ದಾರೆ, ಹೀಗಾಗಿ ಎರಡನೇಯ ಹಂತದ ಕೈಮಗ್ಗ ಬಳಸಿ ಹ್ಯಾಂಡ್‌ವರ್ಕ್‌ ಡಿಸೈನ್‌ ತರಬೇತಿ ನೀಡಲಾಗುತ್ತಿದೆ. ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.

ಜಿಪಂ ಸದಸ್ಯೆ ಶೋಭಾ ಮೇಟಿ ಮಾತನಾಡಿ ಮಹಿಳೆಯರು ಸಮಕೋಚ ಬಿಟ್ಟು ಹೊಸ ವಿಷಯಗಳನ್ನು ಅರಿತುಕೊಳ್ಳುವದರ ಜತೆಗೆ ಮನೆಯಲ್ಲಿಯೇ ಮೆಹಂದಿ, ಮನೆ ಅಲಂಕಾರ ವಸ್ತುಗಳ ತರಬೇತಿ ಪಡೆದು ಆರ್ಥಿಕ ಪ್ರಗತಿ ಸಾಧಿಸಬೇಕು, ಇದರಿಂದ ಕುಟುಂಬದ ಆರ್ಥಿಕ ಹೊರೆ ಕಡಿಮೆ ಮಾಡಿಕೊಳ್ಳಲು ಇಂತಹ ತರಬೇತಿಗಳು ಸಹಾಯವಾಗುತ್ತವೆ ಎಂದರು.

ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಸೀತಾ ಬಸಾಪೂರ, ಚೈತನ್ಯ ಗ್ರಾಮೀಣ ಅಭಿವೃದ್ಧಿ ಹಾಗೂ ಶೈಕ್ಷ ಣಿಕ ತರಬೇತಿ ಸಂಸ್ಥೆ ಅಧ್ಯಕ್ಷೆ ವೀಣಾ ಪಾಟೀಲ ಮಾತನಾಡಿದರು. ಕಾರ್ಯಕ್ರಮದ ಆರಂಭದಲ್ಲಿ ಸಾವಿತ್ರಿಬಾವಿ ಫುಲೆ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಗೌರವ ಸಲ್ಲಿಸಲಾಯಿತು.

ಸಿಡಿಪಿಒ ಶಾಂತಾ ವಾರದ, ಕಲ್ಪನಾ ಸವಣೂರ, ಪುರಸಭೆ ಸದಸ್ಯೆ ದಾನೇಶ್ವರಿ ಭಜಂತ್ರಿ, ಶಾಂತಾ ಬಳ್ಳಾರಿ, ಜ್ಯೋತಿ ಕುರಿಯವರ, ಲಕ್ಷ್ಮಿ ರಾಮೇನಹಳ್ಳಿ, ರೇಖಾ ಯಾವಗಲ್‌, ದೀಪಾ, ಹುಸೇನ ಗಂಗಾವತಿ ಇತರರು ಪಾಲ್ಗೊಂಡಿದ್ದರು.

ನಂದಿನಿ ಕುಂಬಾರ ಸ್ವಾಗತಿಸಿದರು. ಶ್ರೀದೇವಿ ಗೋಡಿ ನಿರೂಪಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ