ಆ್ಯಪ್ನಗರ

ಅಭ್ಯರ್ಥಿಗಳ ಚುನಾವಣಾ ಪ್ರಚಾರ: ಜಿಲ್ಲಾಧಿಕಾರಿ ಸೂಚನೆ

ಗದಗ: ಲೋಕಸಭಾ ಚುನಾವಣೆ ಅಭ್ಯರ್ಥಿಗಳ ಪ್ರಚಾರಕ್ಕೆ ಸಂಬಂಧಿಸಿದಂತೆ ಅಭ್ಯರ್ಥಿಗಳ ಅಥವಾ ಪಕ್ಷ ದ ವಿಶೇಷವಾಗಿ ವಿನ್ಯಾಸಗೊಳಿಸಲಾದ ಪ್ರಚಾರ ವಾಹನಗಳಿಗೆ ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿಗಳಿಂದ ಕಡ್ಡಾಯವಾಗಿ ಪರವಾನಗಿ ಪಡೆಯಬೇಕು. ಪ್ರಚಾರ ಸಂದರ್ಭದಲ್ಲಿ ವಾಹನಗಳ ಬಳಕೆ ಅದಕ್ಕೆ ಬ್ಯಾನರ್‌, ಫ್ಲ್ಯಾ ಅಳವಡಿಕೆಗೆ ಇರುವ ಮಿತಿಗಳನ್ನು ತಪ್ಪದೇ ಪಾಲನೇ ಮಾಡಲು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದ್ದಾರೆ.

Vijaya Karnataka 8 Apr 2019, 5:00 am
ಗದಗ: ಲೋಕಸಭಾ ಚುನಾವಣೆ ಅಭ್ಯರ್ಥಿಗಳ ಪ್ರಚಾರಕ್ಕೆ ಸಂಬಂಧಿಸಿದಂತೆ ಅಭ್ಯರ್ಥಿಗಳ ಅಥವಾ ಪಕ್ಷ ದ ವಿಶೇಷವಾಗಿ ವಿನ್ಯಾಸಗೊಳಿಸಲಾದ ಪ್ರಚಾರ ವಾಹನಗಳಿಗೆ ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿಗಳಿಂದ ಕಡ್ಡಾಯವಾಗಿ ಪರವಾನಗಿ ಪಡೆಯಬೇಕು. ಪ್ರಚಾರ ಸಂದರ್ಭದಲ್ಲಿ ವಾಹನಗಳ ಬಳಕೆ ಅದಕ್ಕೆ ಬ್ಯಾನರ್‌, ಫ್ಲ್ಯಾ ಅಳವಡಿಕೆಗೆ ಇರುವ ಮಿತಿಗಳನ್ನು ತಪ್ಪದೇ ಪಾಲನೇ ಮಾಡಲು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದ್ದಾರೆ.
Vijaya Karnataka Web election campaign for candidates deputy commissioner notice
ಅಭ್ಯರ್ಥಿಗಳ ಚುನಾವಣಾ ಪ್ರಚಾರ: ಜಿಲ್ಲಾಧಿಕಾರಿ ಸೂಚನೆ

ಚುನಾವಣೆ ಪ್ರಚಾರದ ಕಾರ್ಯಕ್ರಮಗಳಿಗೆ ಮುಂಚಿತವಾಗಿ ಸಂಬಂಧಿತರಿಂದ ಪೂರ್ವಾನುಮತಿ ಪಡೆಯಬೇಕು. ಕಾರ್ಯಕ್ರಮ ನಡೆಯುವ ಎರಡು ಗಂಟೆ ಮುಂಚಿತವಾಗಿ ಬ್ಯಾನರ್‌, ಫ್ಲ್ಯಾಗಳನ್ನು ಹಾಕಬಹುದಾಗಿದ್ದು, ಕಾರ್ಯಕ್ರಮ ಮುಗಿದ 2 ಗಂಟೆಗಳ ನಂತರ ಅವುಗಳನ್ನು ಕಡ್ಡಾಯವಾಗಿ ತೆರವುಗೊಳಿಸಿ ಪ್ರದೇಶವು ಸ್ವಚ್ಛವಾಗಿರುವಂತೆ ನೋಡಿಕೊಳ್ಳಬೇಕು. ರೋಡ್‌ ಶೋಗಳ ಮಾಹಿತಿಯನ್ನು ಒಂದು ದಿನ ಮುಂಚಿತವಾಗಿ ಸಹಾಯಕ ಚುನಾವಣಾಧಿಕಾರಿಗೆ ತಿಳಿಸಬೇಕು.

ಪ್ರಚಾರ ಸಾಮಗ್ರಿಗಳನ್ನು ಅನುಮತಿ ಪಡೆದ ವಾಹನದಲ್ಲಿಯೇ ಸಾಗಿಸಬೇಕು. ಬೇರೆ ಸ್ಥಳಗಳಲ್ಲಿ ಅವುಗಳನ್ನು ಮುದ್ರಣ ಮಾಡಿದ್ದಲ್ಲಿ ಅದರ ವೆಚ್ಚದ ವಿವರ ಸಂಬಂಧಿಸಿದಂತೆ ಹಾಗೂ ಮುದ್ರಣ ಮಾಡಿದ ಬಗ್ಗೆ ಸಂಬಂಧಿತ ಲೋಕಸಭಾ ಚುನಾವಣಾಧಿಕಾರಿ ಕಚೇರಿಗೆ ನಿಗದಿತ ನಮೂನೆಯಲ್ಲಿ ಮಾಹಿತಿ ಸಲ್ಲಿಸಬೇಕು.

ಟಿವಿ ಕೇಬಲ್‌ ಸೇರಿದಂತೆ ಎಲ್ಲಾ ರೀತಿಯ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಪ್ರಕಟಣೆಗೊಳ್ಳುವ ಜಾಹಿರಾತು, ಪ್ರಚಾರ, ಪ್ರದರ್ಶನಗಳಿಗೆ ಎಂಸಿಎಂಸಿಯ ಪೂರ್ವ ದೃಢೀಕರಣ ಪಡೆಯಬೇಕು. ಮುದ್ರಣ ಮಾಧ್ಯಮಗಳಿಗೆ ಪೂರ್ವಾನುಮತಿ ಅಗತ್ಯವಿಲ್ಲ. ಆದರೆ ಚುನಾವಣಾ ಆಯೋಗ ನೀಡಿರುವ ನಿರ್ದೇಶನಗಳನ್ನು ತಪ್ಪದೇ ಪಾಲಿಸಬೇಕು. ಆದರೆ ಅವುಗಳ ಆನ್‌ಲೈನ್‌ ಆವೃತ್ತಿ, ಇ-ಪೇಪರಗಳಲ್ಲಿ ಜಾಹೀರಾತು ಪ್ರಕಟಣೆಗೆ ಅನುಮತಿ ಕಡ್ಡಾಯ. ಮತದಾನ ಪ್ರಾರಂಭಕ್ಕೆ 48 ಗಂಟೆ ಮುನ್ನ ಮುದ್ರಣ ಮಾಧ್ಯಮಗಳಲ್ಲಿ ಪ್ರಕಟವಾಗುವ ಜಾಹೀರಾತುಗಳನ್ನು ಎಂಸಿ, ಎಂ,ಸಿ, ಸಮಿತಿಯಿಂದ ಕಡ್ಡಾಯವಾಗಿ ಪೂರ್ವಾನುಮತಿ ಪಡೆಯಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ