ಆ್ಯಪ್ನಗರ

ವಿದ್ಯುತ್‌ ಬಳಕೆ ಸುರಕ್ಷ ತೆ, ಉಳಿತಾಯ ಜಾಗೃತಿ ಸಭೆ

ಹೊಳೆಆಲೂರ : ಹರಿಯುವ ವಿದ್ಯುತ್‌ ತಂತಿಗಳಲ್ಲಿ ಹೈ ವೋಲ್ಟೇಜ್‌ ವಿದ್ಯುತ್‌ ಹರಿಯುತ್ತಿದ್ದು ಅಂತಹ ತಂತಿ ಮೇಲೆ ವಂಕಿ ಹಾಕಿ ಅನಧಿಕೃತವಾಗಿ ವಿದ್ಯುತ್‌ ಕಳ್ಳತನಕ್ಕೆ ಕೈಹಾಕುವುದು ಜೀವದ ಜತೆ ಚೆಲ್ಲಾಟವಾಡಿದಂತೆ. ಅಂತಹ ಕಾನೂನು ವಿರೋಧಿ ಚಟುವಟಿಕೆಗಳಿಗೆ ಬೇಲುರಹಿತ ಜೈಲು ಶಿಕ್ಷೆ ಹಾಗೂ ದಂಡ ಇದೆ ಎಂದು ರೋಣ ಹೆಸ್ಕಾಂ ಎ ಡಬ್ಲ್ಯೂ ಇ ನಿಖಿಲ್‌ ದುಗ್ಗಾಣಿ ಹೇಳಿದರು.

Vijaya Karnataka 29 Jul 2019, 5:00 am
ಹೊಳೆಆಲೂರ : ಹರಿಯುವ ವಿದ್ಯುತ್‌ ತಂತಿಗಳಲ್ಲಿ ಹೈ ವೋಲ್ಟೇಜ್‌ ವಿದ್ಯುತ್‌ ಹರಿಯುತ್ತಿದ್ದು ಅಂತಹ ತಂತಿ ಮೇಲೆ ವಂಕಿ ಹಾಕಿ ಅನಧಿಕೃತವಾಗಿ ವಿದ್ಯುತ್‌ ಕಳ್ಳತನಕ್ಕೆ ಕೈಹಾಕುವುದು ಜೀವದ ಜತೆ ಚೆಲ್ಲಾಟವಾಡಿದಂತೆ. ಅಂತಹ ಕಾನೂನು ವಿರೋಧಿ ಚಟುವಟಿಕೆಗಳಿಗೆ ಬೇಲುರಹಿತ ಜೈಲು ಶಿಕ್ಷೆ ಹಾಗೂ ದಂಡ ಇದೆ ಎಂದು ರೋಣ ಹೆಸ್ಕಾಂ ಎ ಡಬ್ಲ್ಯೂ ಇ ನಿಖಿಲ್‌ ದುಗ್ಗಾಣಿ ಹೇಳಿದರು.
Vijaya Karnataka Web GDG-26HLR1
ಹೊಳೆಆಲೂರದಲ್ಲಿ ಹೆಸ್ಕಾಂನಿಂದ ವಿದ್ಯುತ್‌ ಬಳಕೆ ಸುರಕ್ಷ ತೆ, ಉಳಿತಾಯ ಜಾಗೃತಿ ಸಭೆಯಲ್ಲಿ ನಿಖಿಲ್‌ ದುಗ್ಗಾಣಿ ಮಾತನಾಡಿದರು.


ಅವರು ನಗರದ ಶಿವಪಾರ್ವತಿ ಕಲ್ಯಾಣ ಮಂದಿರದ ಸಭಾಭವನದಲ್ಲಿ ಹೆಸ್ಕಾಂನಿಂದ ವಿದ್ಯುತ್‌ ಬಳಕೆ ಸುರಕ್ಷ ತೆ, ಉಳಿತಾಯ ಜಾಗೃತಿ ಸಭೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಇಂತಹ ಹಲವು ಪ್ರಕರಣಗಳಲ್ಲಿ ಸಾವಿಗೀಡಾದವರು, ಶಿಕ್ಷೆಯಾದವರೂ ಇದ್ದಾರೆ. ಈ ಕುರಿತು ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು ಎಂದರು.

ಹೆಸ್ಕಾಂ ಸಿಬ್ಬಂದಿ ಉಮೇಶ ಗದಗ ಮಾತನಾಡಿ,ಇಂದು ವಿದ್ಯುತ್‌ ಸಂಪರ್ಕವಿರದೆ ಜೀವನ ನಡೆಸುವವರೂ ಯಾರೂ ಇಲ್ಲ. ಇಷ್ಟೊಂದು ಅವಶ್ಯಕವಾದ ವಿದ್ಯುತ್‌ ಎಲ್‌ಇಡಿ ಬಲ್ಬ್ಗಳನ್ನು ಬಳಸಿ, ಅವಶ್ಯಕತೆ ಇಲ್ಲದಿರುವಾಗ ಬಟನ್‌ ಬಂದ್‌ ಮಾಡಿ ಉಳಿತಾಯ ಮಾಡುವುದರ ಕಡೆ ಗಮನ ಹರಿಸಬೇಕು ಎಂದರು.

ಹೊಳೆಆಲೂರು ಹೆಸ್ಕಾಂ ಶಾಖಾಧಿಕಾರಿ ಎಚ್‌.ಎ. ಗಡಾದ ಮಾತನಾಡಿದರು. ಯಚ್ಚರೇಶ್ವರ ಮಠದ ಯಚ್ಚರಸ್ವಾಮಿಗಳು ಸಾನ್ನಿಧ್ಯವಹಿಸಿದ್ದರು.

ಗ್ರಾಪಂ ಅಧ್ಯಕ್ಷೆ ಸುಮಂಗಲಾ ಕಾತರಕಿ ಅಧ್ಯಕ್ಷ ತೆ ವಹಿಸಿದ್ದರು. ಅತಿಥಿಯಾಗಿ ತಾಪಂ ಸದಸ್ಯ ಬಸನಗೌಡ ಶಿರಗುಂಪಿ, ಹೂವಪ್ಪ ಜಂಗಣ್ಣವರ, ಶಿವನಪ್ಪ ಮಂಡಸೊಪ್ಪಿ, ಮೊಕಾಶಿಮಠ, ಎಸ್‌.ಎಸ್‌. ಗುಳೇದಗುಡ್ಡ, ಜಿ. ಎಂ. ಪೊಲೀಸಪಾಟೀಲ, ಪಿ.ವಿ.ರಡ್ಡೇರ, ಶಂಕರಗೌಡ ಬಾಲನಗೌಡ್ರ, ವಿ.ಬಿ. ಸಾಸಳ್ಳಿ, ಗ್ರಾಪಂ ಸದಸ್ಯೆ ಶಾರದಾ ದಳವಾಯಿ, ಶಂಕರಗೌಡ ಗದಗ ಆಗಮಿಸಿದ್ದರು.ಪಿ.ಎನ್‌. ಮೇಟಿ, ರಮೇಶ ಡೊಳ್ಳಿನ,ವೈ.ಎಸ್‌. ಎಸ್‌ ದಾಮೋದರ, ರವಿ ತಿಪ್ಪಶೆಟ್ಟಿ, ಎಂ.ಇ. ಬಡಿಗೇರ, ವೀರೇಶ ಹೊತ್ನಾಳಮಠ, ಎಸ್‌.ಎಸ್‌. ಯಲಿಗಾರ, ಆರ್‌. ಆರ್‌. ಕುಲಕರ್ಣಿ, ಎಂ.ಬಿ. ಹಳ್ಳಿಕೇರಿ, ಭೀಮಪ್ಪ ಕಲ್ಲೇಶ್ಯಾನಿ, ನಾಗೇಶ ಗೌಡರ, ಶಂಕರಗೌಡ ವೆಂಕನಗೌಡ್ರ, ದವಲಸಾಬ್‌ ತಹಶೀಲ್ದಾರ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ