ಆ್ಯಪ್ನಗರ

ಅರ್ಹ ಸಂತ್ರಸ್ತರಿಗೆ ಪರಿಹಾರ ಸಿಗಲಿ

ರೋಣ: ಬೆಣ್ಣೆಹಳ್ಳದ ಪ್ರವಾಹದಿಂದ ಆದ ಹಾನಿ ಸಮೀಕ್ಷೆ ನಡೆಸುತ್ತಿರುವ ಗ್ರಾಮ ಲೆಕ್ಕಾಧಿಕಾರಿ, ಪಿಡಿಒಗಳಿಗೆ ಕೆಲವರು ಯಾವುದೇ ಹಾನಿಯಾಗದಿದ್ದರೂ ಪಟ್ಟಿಯಲ್ಲಿಸೇರಿಸುವಂತೆ ಅಧಿಧಿಕಾರಿಗಳ ಮೇಲೆ ಒತ್ತಡ ಹೇರುವುದಲ್ಲದೇ, ನಿಯಮ ಪ್ರಕಾರ ಕರ್ತವ್ಯ ನಿರ್ವಹಿಸಲು

Vijaya Karnataka 28 Aug 2019, 7:56 pm
ರೋಣ: ಬೆಣ್ಣೆಹಳ್ಳದ ಪ್ರವಾಹದಿಂದ ಆದ ಹಾನಿ ಸಮೀಕ್ಷೆ ನಡೆಸುತ್ತಿರುವ ಗ್ರಾಮ ಲೆಕ್ಕಾಧಿಕಾರಿ, ಪಿಡಿಒಗಳಿಗೆ ಕೆಲವರು ಯಾವುದೇ ಹಾನಿಯಾಗದಿದ್ದರೂ ಪಟ್ಟಿಯಲ್ಲಿಸೇರಿಸುವಂತೆ ಅಧಿಧಿಕಾರಿಗಳ ಮೇಲೆ ಒತ್ತಡ ಹೇರುವುದಲ್ಲದೇ, ನಿಯಮ ಪ್ರಕಾರ ಕರ್ತವ್ಯ ನಿರ್ವಹಿಸಲು ಮುಂದಾದರೆ ದಬ್ಬಾಳಿಕೆ ಮಾಡುವ ಮೂಲಕ ಅನರ್ಹರು, ಸುಖಾಸುಮ್ಮನೆ ತಂಟೆ ಮಾಡುತ್ತಿದ್ದು, ಅಂತಹ ಜನರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಯಾ.ಸ.ಹಡಗಲಿ ಗ್ರಾಮದ ಸಂತ್ರಸ್ತರು ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.
Vijaya Karnataka Web eligible victims should be compensated
ಅರ್ಹ ಸಂತ್ರಸ್ತರಿಗೆ ಪರಿಹಾರ ಸಿಗಲಿ


ಅರ್ಹರಿಗೆ ಸರಕಾರದ ಪರಿಹಾರ ತಲುಪುವಲ್ಲಿವಿಳಂಭವಾಗುವಂತೆ ಹುನ್ನಾರು ನಡೆಸಿದ್ದಾರೆ. ಸುಳ್ಳು ಆರೋಪಗಳಿಗೆ ತಾಲೂಕು ಆಡಳಿತ ಕಿವಿಗೊಡದೆ, ಈಗಾಗಲೇ ಗ್ರಾಮಲೆಕ್ಕಾಧಿಧಿಕಾರಿ, ಪಿಡಿಒ ಸಿದ್ದಪಡಿಸಿರುವ ಸಂತ್ರಸ್ತರಿಗೆ ತಕ್ಷಣವೇ ಪರಿಹಾರ ವಿತರಿಸಬೇಕು. ಅಧಿಧಿಕಾರಿಗಳ ಮೇಲೆ ದಬ್ಬಾಳಿಕೆ ಮಾಡುವಂತವರನ್ನು ಗುರುತಿಸಿ ಎಚ್ಚರಿಕೆ ನೀಡಬೇಕು ಎಂದು ಮನವಿ ಮಾಡಿದರು.

ಗ್ರಾಪಂ ಮಾಜಿ ಅಧ್ಯಕ್ಷ ಆನಂದಗೌಡ ಬೆಂಗೇರಿ ಮಾತನಾಡಿ, ತಾಲೂಕು,ಜಿಲ್ಲಾಡಳಿತ ಗ್ರಾಮಲೆಕ್ಕಾಧಿಧಿಕಾರಿ, ಪಿಡಿಒಗಳಿಗೆ ನೀಡಿದ ಸ್ಪಷ್ಟ ಸೂಚನೆಯಂತೆ ಅಧಿಧಿಕಾರಿಗಳು ಖುದ್ದಾಗಿ ಹಾನಿ ಪರಿಶೀಲನೆ ಮಾಡುವ ಮೂಲಕ ಸಂತ್ರಸ್ತರ ಪಟ್ಟಿ ಸಿದ್ದಪಡಿಸಿದ್ದಾರೆ. ಇದೇ ರೀತಿ ಪರಿಹಾರದ ಚೆಕ್‌ ಪಟ್ಟಿಯೂ ಸಿದ್ದಗೊಂಡಿದ್ದು, ಯಾವುದೇ ಹಾನಿಯಾಗದೆ, ನಡು ಊರಿನಲ್ಲಿಮನೆ ಹೊಂದಿರುವ ಕೆಲವು ಜನರು ಅಧಿಧಿಕಾರಿಗಳ ಮೇಲೆ ಒತ್ತಡ ಹಾಕಿ ತಮಗೂ ಪರಿಹಾರ ನೀಡಲಬೇಕೆಂದು ಒತ್ತಾಯಿಸುತ್ತಿದ್ದಾರೆ. ಇದರಿಂದ ಅಧಿಧಿಕಾರಿಗಳಿಗೆ ಕಿರಿಕಿರಿಯಾಗಿದೆ. ಅರ್ಹರಲ್ಲದವರಿಗೆ ಪರಿಹಾರ ನೀಡಿದರೆ, ಹಾನಿ ಅನುಭವಿಸಿದ ಬಡವರ ಗತಿಏನು ? ತಾಲೂಕು ಆಡಳಿತ ಪ್ರಸ್ತುತ ಅಧಿಧಿಕಾರಿಗಳು ಸಿದ್ದ ಮಾಡಿರುವ ಪಟ್ಟಿಯಲ್ಲಿಯಾವುದೇ ದೋಷವಿಲ್ಲ, ಹಾನಿಯಾಗದೇ ಪರಿಹಾರ ಬಯಸಿದ ಕೆಲವರಿಗೆ ಅಸಮಾಧಾನವಾಗಿದ್ದು, ಅರ್ಹರಿಗೂ ತಲುಪದಂತೆ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಜಿಲ್ಲಾಧಿಧಿಕಾರಿಗಳು, ತಹಸೀಲ್ದಾರರು ಕಿವಿಗೊಡದೇ ಅಧಿಧಿಕಾರಿಗಳ ಮೇಲೆ ಭರವಸೆ ಇಟ್ಟು, ಅವರು ಮಾಡಿದ ಕಾರ್ಯ ನ್ಯಾಯ ಸಮ್ಮತವಾಗಿದ್ದು, ಹಾನಿ ಅನುಭವಿಸಿರುವ ಜನರಿಗೆ ನೆರವಾಗಬೇಕು ಎಂದು ವಿನಂತಿಸಿಕೊಂಡರು.

ಜಿಪಂ ಮಾಜಿ ಸದಸ್ಯ ಫಕೀರಪ್ಪ ಚಲವಾದಿ ಮಾತನಾಡಿ, ಪ್ರವಾಹ ನೀರು ಮನೆಯೊಳಗೆ ನುಗ್ಗಿ ಜನ ಸಾಕಷ್ಟು ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಇಂತಹ ಸಮಯದಲ್ಲಿಅರ್ಹರಿಗೆ ನೆರವು ಸಿಗುತ್ತಿದೆ ಎಂದರು

ತಹಸೀಲ್ದಾರ ಶರಣಮ್ಮ ಕಾರಿ ಮಾತನಾಡಿ, ಅಧಿಧಿಕಾರಿಗಳು,ಸಿಬ್ಬಂದಿ ನ್ಯಾಯ ಸಮ್ಮತ ಕೆಲಸ ಮಾಡಿರುವ ಬಗ್ಗೆ ಗೊತ್ತಿದೆ. ಸಣ್ಣಪುಟ್ಟ ಲೋಪಗಳಿದ್ದರೆ ಅವುಗಳನ್ನು ಸರಿಪಡಿಸಲು ಸೂಚಿಸುವುದಾಗಿ ಹೇಳಿದರು.

ನಿಂಗಯ್ಯ ಸೋರೆಬಾನ, ದೊಣ್ಣೆಪ್ಪಗೌಡ ಸುರಕೋಡ, ಶಿವಪ್ಪ ಉಳ್ಳಾಗಡ್ಡಿ, ವೀರಪ್ಪ ಅಳ್ಳೋಳ್ಳಿ, ಶರಣಪ್ಪ ಅಳ್ಳೋಳ್ಳಿ, ಸುರೇಶ ರೋಣದ, ಯಲ್ಲಪ್ಪ ಬಾರಕೇರ, ದೇವಪ್ಪ ಚಲವಾದಿ, ರಮೇಶ, ನಿಂಗಪ್ಪ, ಚಂದ್ರಶೇಖರ ಮಾದರ, ಬೈಲಪ್ಪ ಹಡಗಲಿ ಇತರರು ಇದ್ದರು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ