ಆ್ಯಪ್ನಗರ

ಚೌಡಯ್ಯನವರ ತತ್ವಾದರ್ಶ ಅಳವಡಿಸಿಕೊಳ್ಳಿ

ಮುಳಗುಂದ: ಅಂಬಿಗರ ಚೌಡಯ್ಯ ಅವರ ತತ್ವಾದರ್ಶ ಹಾಗೂ ವಚನ ಸಾಹಿತ್ಯದ ಸಂದೇಶಗಳನ್ನು ಜೀವನದಲ್ಲಿಅಳವಡಿಸಿಕೊಳ್ಳಬೇಕು ಎಂದು ಪಿ.ಎಸ್‌.ಮರಿದೇವರಮಠ ಹೇಳಿದರು.

Vijaya Karnataka 26 Jan 2020, 5:00 am
ಮುಳಗುಂದ: ಅಂಬಿಗರ ಚೌಡಯ್ಯ ಅವರ ತತ್ವಾದರ್ಶ ಹಾಗೂ ವಚನ ಸಾಹಿತ್ಯದ ಸಂದೇಶಗಳನ್ನು ಜೀವನದಲ್ಲಿಅಳವಡಿಸಿಕೊಳ್ಳಬೇಕು ಎಂದು ಪಿ.ಎಸ್‌.ಮರಿದೇವರಮಠ ಹೇಳಿದರು.
Vijaya Karnataka Web embrace chaudaiahs philosophy
ಚೌಡಯ್ಯನವರ ತತ್ವಾದರ್ಶ ಅಳವಡಿಸಿಕೊಳ್ಳಿ


ಪಟ್ಟಣದ ಗಂಗಾಮತ ಸಮಾಜದವರು ಆಯೋಜಿಸಿದ್ದ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮದಲ್ಲಿ ಚೌಡಯ್ಯನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು. 12ನೇ ಶತಮಾನದಲ್ಲಿಚೌಡಯ್ಯ ಜಾತ್ಯತೀತ, ಧರ್ಮಾತೀತ, ಕಾಯಕ, ದಾಸೋಹ, ಶಿಕ್ಷಣಕ್ಕೆ ಒತ್ತು ನೀಡುವ ಮೂಲಕ ಸಮಾಜದಲ್ಲಿಜಾಗೃತಿ ಮೂಡಿಸಿದ ಮಹಾನ್‌ ದಾರ್ಶನಿಕರು. ಬಸವಣ್ಣನವರ ನಡೆ, ನುಡಿ, ತತ್ವ, ಆದರ್ಶಗಳನ್ನು ಪಾಲಿಸಿ ವಚನಗಳ ಮೂಲಕ ಸಮಾಜದ ಅಂಕು-ಡೊಂಕು ತಿದ್ದಿದವರು ಎಂದರು.

ಗಂಗಾಮತ ಸಮಾಜದ ಗುರು ಕಾಶಿನಾಥ ಮರಿದೇವರಮಠ ಮಾತನಾಡಿ, ನಿಜಶರಣರ ತತ್ವ ಸಿದ್ಧಾಂತಗಳನ್ನು ದಿನನಿತ್ಯ ಮಕ್ಕಳಿಗೆ ಹೇಳಿಕೊಡುವುದರ ಮೂಲಕ ಮಕ್ಕಳನ್ನು ಶಿಕ್ಷಣವಂತರಾಗಿ ಮಾಡಬೇಕು ಎಂದರು.

ಗಂಗಾಮತ ಸಮಾಜದ ಅಧ್ಯಕ್ಷ ನಾಗರಾಜ ಬಾರಕೇರ. ಶಂಕ್ರಪ್ಪ ಧರ್ಮಣ್ಣವರ, ಮಹಾಂತೇಶ ವಡ್ನಿಕೊಪ್ಪ, ಮಂಜುನಾಥ ತೋಟದ, ಬಸಪ್ಪ ಸುಣಗಾರ, ಶೇಖಪ್ಪ ಬಾರಕೇರ, ಮಂಜುನಾಥ ಮಂಡೆಣ್ಣವರ, ಬಸವರಾಜ ಮೊಕಾಸಿ, ಮಹಾಂತಪ್ಪ ದಿವಟರ ಹಾಗೂ ಸಮಾಜದ ಮಹಿಳೆಯರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ