ಆ್ಯಪ್ನಗರ

ಆರೋಗ್ಯಯುತ ಜೀವನ ಅಳವಡಿಸಿಕೊಳ್ಳಿ

ಗದಗ: ಇಂದಿನ ಒತ್ತಡದ ಜೀವನ ಚಕ್ರದಲ್ಲಿಎಲ್ಲರೂ ಆರೋಗ್ಯಯುತ ಜೀವನ ಶೈಲಿ ಅಳವಡಿಸಿಕೊಂಡು ನಿರೋಗಿಗಳಾಗಬೇಕಿದೆ ಎಂದು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ.ಆನಂದ ಹೇಳಿದರು.

Vijaya Karnataka 28 Nov 2019, 5:00 am
ಗದಗ: ಇಂದಿನ ಒತ್ತಡದ ಜೀವನ ಚಕ್ರದಲ್ಲಿಎಲ್ಲರೂ ಆರೋಗ್ಯಯುತ ಜೀವನ ಶೈಲಿ ಅಳವಡಿಸಿಕೊಂಡು ನಿರೋಗಿಗಳಾಗಬೇಕಿದೆ ಎಂದು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ.ಆನಂದ ಹೇಳಿದರು.
Vijaya Karnataka Web embrace healthy living
ಆರೋಗ್ಯಯುತ ಜೀವನ ಅಳವಡಿಸಿಕೊಳ್ಳಿ


ನಗರದ ಆದರ್ಶ ಶಿಕ್ಷಣ ಸಮಿತಿಯ ಪದವಿ ಪೂರ್ವ ಕಾಲೇಜಿನಲ್ಲಿಬುಧವಾರ ಜಿಪಂ, ಜಿಲ್ಲಾಆಯುಷ್‌ ಇಲಾಖೆ ಹಾಗೂ ಆದರ್ಶ ಶಿಕ್ಷಣ ಸಮಿತಿಯ ಆಶ್ರಯದಲ್ಲಿನಡೆದ ಆರೋಗ್ಯಕ್ಕಾಗಿ ಆಯುರ್ವೇದ ಜೀವನ ಶೈಲಿ ಜಿಲ್ಲಾಮಟ್ಟದ ಆಯುಷ್‌ ಸೆಮಿನಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರೋಗಗಳು ಬರದಂತೆ ಮುನ್ನೆಚ್ಚರಿಕೆಯಾಗಿ ಆರೋಗ್ಯ ಕಾಪಾಡಿಕೊಳ್ಳಲು ಆಯರ್ವೇದವು ಹೆಚ್ಚು ಸಹಕಾರಿ ಆಗಿದೆ ಎಂದರು.

ಜಿಲ್ಲಾಪೊಲೀಸ್‌ ವರಿಷ್ಠಾಧಿಕಾರಿ ಶ್ರೀನಾಥ ಜೋಶಿ ಮಾತನಾಡಿ, ಆಧುನಿಕ ಯುಗದಲ್ಲಿಪ್ರತಿಯೊಬ್ಬರೂ ಆರೋಗ್ಯ ರಕ್ಷಣೆ ಬಹಳ ಮುಖ್ಯವಾಗಿದ್ದು ಪ್ರತಿದಿನ ಅರ್ಧಗಂಟೆ ವ್ಯಾಯಾಮ ಹಾಗೂ ಹಿತಕರ ಆಹಾರ ಸೇವನೆ ಮೂಲಕ ಆರೋಗ್ಯವಂತ ಮತ್ತು ಸದೃಢ ವ್ಯಕ್ತಿಗಳಾಗಬಹುದು. ಜತೆಗೆ ದೈಹಿಕವಾಗಿ ಬಲಿಷ್ಠರಾಗಲು ಸಾಧ್ಯವಾಗುತ್ತಿದೆ ಎಂದರು.

ಆರೋಗ್ಯಕ್ಕಾಗಿ ಆಯುರ್ವೇದ ಜೀವನ ಶೈಲಿ ಕುರಿತು ನಡೆದ ಸೆಮಿನಾರನಲ್ಲಿಹಿರಿಯ ವೈದ್ಯಾಧಿಕಾರಿ ಡಾ.ಬಿ.ಜಿ ಪಾಟೀಲ ಆರೋಗ್ಯ ರಕ್ಷಣೆಯಲ್ಲಿದಿನಚರ್ಯ ಮಹತ್ವ ಕುರಿತು, ಡಾ.ಅಶೋಕ ಮತ್ತಿಗಟ್ಟಿ ಯೋಗದಿಂದ ಆರೋಗ್ಯ ರಕ್ಷಣೆ ಕುರಿತು, ಡಾ.ವಿಜಯದತ್ತ ,ಸದಾಚಾರದಿಂದ ಆರೊಗ್ಯ ಕುರಿತು, ಡಾ.ಪ್ರವೀಣ ಸರ್ವದೆ ಮನೆಮದ್ದು ಕುರಿತು ಹಾಗೂ ಡಾ. ಪಿ.ಬಿ.ಹಿರೇಗೌಡರ ಆಧ್ಯಾತ್ಮಿಕತೆ ಹಾಗೂ ಆರೋಗ್ಯಕುರಿತು ಉಪನ್ಯಾಸ ನೀಡಿದರು. ವೈದಾಧಿಕಾರಿ ಡಾ.ಆಶಾ ನಾಯಕ ಅವರು ಮನೆಯಲ್ಲಿಬಳಸಬಹುದಾದ ಸೌಂದರ್ಯ ವರ್ಧಕ ಕುರಿತಾಗಿ ಪ್ರಾಯೋಗಿಕವಾಗಿ ತಿಳಿಸಿಕೊಟ್ಟರು.

ಜಿಲ್ಲಾಆಯುಷ್‌ ಇಲಾಖೆ ಪರವಾಗಿ ಡೆಂಗೆ ಮತ್ತು ಚಿಕೂನ್‌ ಗುನ್ಯಾ ರೋಗ ತಡೆಗಟ್ಟುವ ಹೋಮಿಯೊಪತಿ ಔಷಧಿಗಳನ್ನು ಜಿಪಂ ಕಾರ್ಯನಿರ್ವಾಹಕ ಅಧಿಕಾರಿ ಡಾ.ಆನಂದಕೆ., ಹಾಗೂ ಜಿಲ್ಲಾಪೊಲೀಸ್‌ ವರಿಷ್ಠಾಧಿಕಾರಿ ಶ್ರೀನಾಥ ಜೋಶಿ ವಿದ್ಯಾರ್ಥಿಗಳಿಗೆ ವಿತರಿಸಿದರು.

ಕೆ.ವಿ.ಕುಷ್ಠಗಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಆಯುಷ ಅಧಿಕಾರಿ ಸುಜಾತಾ ಪಾಟೀಲ ಮಾತನಾಡಿದರು.

ವೈದ್ಯಾಧಿಕಾರಿ ಡಾ.ಸಂಜೀವ, ಡಾ.ಶ್ರೀದೇವಿ, ಆದರ್ಶ ಶಿಕ್ಷಣ ಸಮಿತಿ ಪದವಿ ಪೂರ್ವ ಪ್ರಾಚಾರ್ಯ ರವಿ ನಾಯಕ, ಆಡಳಿತಾಧಿಕಾರಿ ಬಿ.ಎಸ್‌. ಗೌಡರ ಪಾಲ್ಗೊಂಡಿದ್ದರು. ಡಾ.ಉಪ್ಪಿನ ಸ್ವಾಗತಿಸಿದರು.ಡಾ.ಆರ್‌.ವಿ.ಹಿರೇಮಠ ವಂದಿಸಿದರು. ಬಸವರಾಜ ಟಿ. ಪಿ. ನಿರೂಪಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ