ಆ್ಯಪ್ನಗರ

ಜಾತ್ರೆ,ಉರುಸು ಭಾವೈಕ್ಯದ ಸಂಕೇತ

ಲಕ್ಷ್ಮೇಶ್ವರ : ಸಮಾಜದಲ್ಲಿಸಾಮರಸ್ಯ ಮೂಡಲಿ ಎಂಬ ಉದ್ದೇಶದಿಂದ ನಮ್ಮ ಹಿರಿಯರು ಜಾತ್ರೆ,ಉತ್ಸವ,ಉರುಸು ಆಚರಣೆ ಮಾಡುತ್ತಾರೆ ಎಂದು ನರಗುಂದ ಪತ್ರಿವನ ಸಂಸ್ಥಾನಮಠದ ಸಿದ್ಧವೀರ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

Vijaya Karnataka 25 Dec 2019, 5:00 am
ಲಕ್ಷ್ಮೇಶ್ವರ : ಸಮಾಜದಲ್ಲಿಸಾಮರಸ್ಯ ಮೂಡಲಿ ಎಂಬ ಉದ್ದೇಶದಿಂದ ನಮ್ಮ ಹಿರಿಯರು ಜಾತ್ರೆ,ಉತ್ಸವ,ಉರುಸು ಆಚರಣೆ ಮಾಡುತ್ತಾರೆ ಎಂದು ನರಗುಂದ ಪತ್ರಿವನ ಸಂಸ್ಥಾನಮಠದ ಸಿದ್ಧವೀರ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
Vijaya Karnataka Web fair a symbol of ursu emotion
ಜಾತ್ರೆ,ಉರುಸು ಭಾವೈಕ್ಯದ ಸಂಕೇತ


ಅವರು ತಾಲೂಕಿನ ಹುಲ್ಲೂರು ಗ್ರಾಮದಲ್ಲಿನಡೆದ ಹಜರತ್‌ ಮೆಹಬೂಬ್‌ ಸುಭಾನಿ ಸಂತರ ಉರುಸು ಕಾರ್ಯಕ್ರಮದಲ್ಲಿಮಾತನಾಡಿದರು.

ಸಮಾಜದಲ್ಲಿಏಕತೆಗೆಂದು ನಮ್ಮ ಹಿರಿಯರು ಜಾತ್ರೆ,ಉತ್ಸವ,ಕಾರ್ಯಕ್ರಮ ಆಚರಿಸುತ್ತ ಬಂದಿದ್ದಾರೆ. ಇದರಿಂದ ಸಮಾಜದಲ್ಲಿನಾವೂ ಎಲ್ಲರೂ ಒಂದೆ ಎಂಬ ಭಾವ ಬರುತ್ತದೆ. ಅದ್ದರಿಂದ ಇಂತಹ ಕಾರ್ಯಕ್ರಮ ನಡೆಯಬೇಕು ಎಂದರು.

ಮಹೇಶ ಲಮಾಣಿ ಮಾತನಾಡಿ, ಹುಲ್ಲೂರ ಗ್ರಾಮದಲ್ಲಿಮೊದಲಿನಿಂದ ಭಾವೈಕ್ಯಕ್ಕೆ ಹೆಸರಾದ ಊರಾಗಿದೆ. ಇಲ್ಲಿಎಲ್ಲಜಾತಿಯ ಜನರು ಸೇರಿ ಉರುಸು ಮಾಡುತ್ತಿರುವುದು ಸಹೋದರತೆಗೆ ಹಿಡಿದ ಕೈಗನ್ನಡಿ ಆಗಿದೆ ಎಂದರು.

ಮಾಜಿ ಶಾಸಕ ಎಸ್‌.ಎನ್‌.ಪಾಟೀಲ್‌,ರಾಮಕೃಷ್ಣ ದೊಡ್ಡಮನಿ, ಯಲ್ಲಪ್ಪ ಸೂರಣಗಿ, ಎಂ.ಎಂ.ಗಾಡಗೋಳಿ, ಹುಮಾಯೂನ ಮಾಗಡಿ, ಪ್ರಮಯ್ಯ ಬಾಳಿಹಳ್ಳಿಮಠ.ಫಿರ್ದೋಶ ಆಡೋರ.ರಾಜಾಭಕ್ಷಿ ಬೇಟಗೇರಿ, ಶರೀಫಸಾಬ್‌ ಛಬ್ಬಿ,ಅಲ್ಲಾಸಾಬ್‌ ನದಾಫ್‌,ಬಸಣ್ಣ ಗಾಣಿಗೇರ,ಬಿ.ಆರ್‌.ರಗಟಿ,

ಬಾಲ ಕಲಾವಿದೆ ರುಬಿನಾ ನದಾಫ್‌ ಅವರನ್ನು ಸನ್ಮಾನಿಸಲಾಯಿತು.ಸಂತೋಷ ಹುದ್ದಾರ ಸ್ವಾಗತಿಸಿದರು.ಸಿದ್ದಲಿಂಗೇಶ ಹಲಸೂರ ನಿರೂಪಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ