ಆ್ಯಪ್ನಗರ

ಸುಳ್ಳು ದೂರು ಆರೋಪ

ಗದಗ: ಜಾತಿ ಪ್ರಮಾಣಪತ್ರ ವಿತರಿಸುವ ವಿಷಯವಾಗಿ ಲಕ್ಷ್ಮೇಶ್ವರ ತಹಸೀಲ್ದಾರ್‌ ಅವರನ್ನು ವಿಚಾರಿಸಲು ಹೋದ ಸಮಾಜದ ಹಿರಿಯರಿಗೆ ಜಾತಿ ನಿಂದನೆ ಮಾಡಿ, ಸುಳ್ಳು ಪ್ರಕರಣ ದಾಖಲು ಮಾಡಿದ್ದಾರೆ ಎಂದು ಆರೋಪಿಸಿ ಶಿರಹಟ್ಟಿ ತಾಲೂಕು ಘಂಟಿಚೋರ್ಸ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ಅಪರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

Vijaya Karnataka 26 Jul 2019, 5:00 am
ಗದಗ: ಜಾತಿ ಪ್ರಮಾಣಪತ್ರ ವಿತರಿಸುವ ವಿಷಯವಾಗಿ ಲಕ್ಷ್ಮೇಶ್ವರ ತಹಸೀಲ್ದಾರ್‌ ಅವರನ್ನು ವಿಚಾರಿಸಲು ಹೋದ ಸಮಾಜದ ಹಿರಿಯರಿಗೆ ಜಾತಿ ನಿಂದನೆ ಮಾಡಿ, ಸುಳ್ಳು ಪ್ರಕರಣ ದಾಖಲು ಮಾಡಿದ್ದಾರೆ ಎಂದು ಆರೋಪಿಸಿ ಶಿರಹಟ್ಟಿ ತಾಲೂಕು ಘಂಟಿಚೋರ್ಸ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ಅಪರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
Vijaya Karnataka Web false complaint allegation
ಸುಳ್ಳು ದೂರು ಆರೋಪ


ಘಂಟಿಚೋರ್ಸ್‌ ಸಮಾಜದ ಪೂರ್ವಜರು ತಮ್ಮ ಹೊಟ್ಟೆಪಾಡಿಗಾಗಿ ಕಳುವು ಮಾಡಿ ಜೀವನ ಸಾಗಿಸುತಿದ್ದರು. ಘಂಟಿಚೋರ್ಸ್‌ ಎಂಬ ಹೆಸರು ಕರೆದುಕೊಳ್ಳುವುದರಿಂದ ಸಾಮಾಜಿಕ ಅವಮಾನವಾಗುತ್ತದೆ. ಆದ್ದರಿಂದ ತಮ್ಮ ಜಾತಿಯನ್ನು ಗಿರಣಿ ವಡ್ಡರ ಹಾಗೂ ಇತ್ಯಾದಿ ಹೆಸರುಗಳಿಂದಲೂ ಕರೆದುಕೊಂಡಿರುತ್ತಾರೆ. 2016ರಲ್ಲಿ ಜಿಲ್ಲಾಧಿಕಾರಿ ಸಮಗ್ರ ಅಧ್ಯಯನ ಮಾಡಿ ಜಿಲ್ಲಾ ಜಾತಿ ಪರಿಶೀಲನಾ ಸಮಿತಿ ಅಂತಿಮ ಆದೇಶ ನೀಡಿರುತ್ತಾರೆ. ಆದರೂ 2014 ರಿಂದ ತಹಸೀಲ್ದಾರರು ಜಾತಿ ಪತ್ರ ದಾಖಲಾತಿ ಪರಿಶೀಲಿಸದೆ ವಿಚಾರಣೆ ಮಾಡದೆ ನಿರಾಕರಿಸುತ್ತಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿ, ತಹಸೀಲ್ದಾರಲ್ಲಿ ವಿನಂತಿಸಿದರೂ ಪ್ರಯೋಜನವಾಗಿಲ್ಲ. ವಿದ್ಯಾರ್ಥಿಗಳು ಶಿಕ್ಷ ಣದಿಂದ, ಸರಕಾರಿ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ. ಅದಲ್ಲದೆ ಖೊಟ್ಟಿ ದಾಖಲೆಗಳನ್ನು ಸೃಷ್ಟಿಸಿಕೊಂಡು ನಮಗೆ ತಿಳಿಯದಂತೆ ನಮ್ಮ ಜಮೀನಿನಲ್ಲಿಯ ಹಕ್ಕು ಬದಲಾವಣೆ ಮಾಡಿರುತ್ತಾರೆ. ಇದರಿಂದ ಸಮಾಜದ ಮೇಲೆ ದೌರ್ಜನ್ಯ ನಡೆಯುತ್ತಿದೆ. ಈ ರೀತಿಯ ಅಧಿಕಾರಿಗಳ ದುಂಡಾವರ್ತನೆಯಿಂದ ನಾವು ಮಾನಸಿಕ ಹಿಂಸೆ ಅನುಭವಿಸುತ್ತಿದ್ದೇವೆ. ಲಕ್ಷ್ಮೇಶ್ವರ ತಹಸೀಲ್ದಾರ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಹಾಗೂ ಇನ್ನುಳಿದ ಸಿಬ್ಬಂದಿ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಶಿರಹಟ್ಟಿ ತಾಲೂಕ ಘಂಟಿಚೋರ್ಸ್‌ ಸಮಾಜ ಕ್ಷೇಮಾಭಿವೃದ್ಧಿ ಸಂಘ ಬಾಲೆಹೊಸೂರ ಪದಾಧಿಕಾರಿಗಳು ಮತ್ತು ಸದಸ್ಯರು ಒತ್ತಾಯಿಸಿದ್ದಾರೆ.

ಈ ಸಂದರ್ಭದಲ್ಲಿ ಮಲ್ಲೇಶಪ್ಪ ಚಪ್ಪರಮನಿ, ಸಿದ್ದಪ್ಪ ನೆನಗಿನಹಳ್ಳಿ, ಅಶೋಕ ಚಿಕ್ಕಅಣಚಗಿ, ಯಮನಪ್ಪ ಕಡೇಮನಿ, ಭೀಮಣ್ಣ ಗಂಗಾಪುತ್ರ, ಗೊಣಪಾಲ ಸಾಲಿ ಮುಂತಾದವರು ಉಪಸ್ಥಿತರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ