Please enable javascript.ಸರಕಾರಕ್ಕೆ ತಪ್ಪು ಮಾಹಿತಿ: ಎಫ್‌ಡಿಎ ಅಮಾನತು - False information to the government, the FDA suspended - Vijay Karnataka

ಸರಕಾರಕ್ಕೆ ತಪ್ಪು ಮಾಹಿತಿ: ಎಫ್‌ಡಿಎ ಅಮಾನತು

ವಿಕ ಸುದ್ದಿಲೋಕ 27 Nov 2015, 4:08 am
Subscribe

ಗ್ರಾಮೀಣ ಕುಡಿಯುವ ನೀರಿನ ತುರ್ತು ಕಾಮಗಾರಿ, ಟಾಸ್ಕಪೋರ್ಸ್ ಕಾಮಗಾರಿ, ವಿದ್ಯುತ್ ಸಂಪರ್ಕಕ್ಕೆ ಬಿಡುಗಡೆಯಾದ ಅನುದಾನ ವಿನಿಯೋಗ ಕುರಿತು ಸರಕಾರಕ್ಕೆ ತಪ್ಪು ಮಾಹಿತಿ ಸಲ್ಲಿಸಿದ್ದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಪ್ರಥಮ ದರ್ಜೆ ಲೆಕ್ಕ ಸಹಾಯಕನನ್ನು ಜಿಪಂ ಸಿಇಒ ಎಸ್.ಬಿ.ಶೆಟ್ಟೆಣ್ಣವರ ಅಮಾನತು ಮಾಡಿದ್ದಾರೆ.

false information to the government the fda suspended
ಸರಕಾರಕ್ಕೆ ತಪ್ಪು ಮಾಹಿತಿ: ಎಫ್‌ಡಿಎ ಅಮಾನತು
ಗದಗ: ಗ್ರಾಮೀಣ ಕುಡಿಯುವ ನೀರಿನ ತುರ್ತು ಕಾಮಗಾರಿ, ಟಾಸ್ಕಪೋರ್ಸ್ ಕಾಮಗಾರಿ, ವಿದ್ಯುತ್ ಸಂಪರ್ಕಕ್ಕೆ ಬಿಡುಗಡೆಯಾದ ಅನುದಾನ ವಿನಿಯೋಗ ಕುರಿತು ಸರಕಾರಕ್ಕೆ ತಪ್ಪು ಮಾಹಿತಿ ಸಲ್ಲಿಸಿದ್ದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಪ್ರಥಮ ದರ್ಜೆ ಲೆಕ್ಕ ಸಹಾಯಕನನ್ನು ಜಿಪಂ ಸಿಇಒ ಎಸ್.ಬಿ.ಶೆಟ್ಟೆಣ್ಣವರ ಅಮಾನತು ಮಾಡಿದ್ದಾರೆ.

ಎಸ್.ಎ. ಖಂಡಪ್ಪಗೌಡ್ರ ಅವರೇ ಅಮಾನತುಗೊಂಡವರು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಎನ್.ಸಿ. ಬಾಗಲಕೋಟ ಅವರ ಮೇಲೆ ಶಿಸ್ತು ಕ್ರಮ ಜರುಗಿಸುವಂತೆ ಸರಕಾರದ ಪ್ರಧಾನ ಕಾರ್ಯದರ್ಶಿಗೆ ಜಿಪಂ ಸಿಇಒ ಶಿಫಾರಸು ಮಾಡಿದ್ದಾರೆ.

ಜಿಲ್ಲಾ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಪ್ರಗತಿ ಪರಿಶೀಲನೆ ಸಂದರ್ಭದಲ್ಲಿ ಇಲಾಖೆಯಲ್ಲಿ ನಡೆದಿರುವ ಲೋಪದೋಷಗಳು ಜಿಪಂ ಸಿಇಒ ಗಮನಕ್ಕೆ ಬಂದಿವೆ. ಈ ಕೂಡಲೇ ಜಾರಿಗೆ ಬರುವಂತೆ ಖಂಡಪ್ಪಗೌಡ್ರ ವಿರುದ್ಧ ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳ 1957 ನಿಯಮ 10(3) ರಡಿ ಶಿಸ್ತಿನ ಕ್ರಮ ಅಗತ್ಯ ಎಂದು ಪರಿಗಣಿಸಿ ಅವರನ್ನು ಅಮಾನತುಗೊಳಿಸಿ ಸಿಇಒ ಆದೇಶ ಹೊರಡಿಸಿದ್ದಾರೆ.
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ