ಆ್ಯಪ್ನಗರ

ಪರಿಹಾರ ನೀಡಲು ರೈತರ ಆಗ್ರಹ

ಶಿರಹಟ್ಟಿ : ತಾಲೂಕಿನ ಮಾಗಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಾದ ಹೊಳಲಾಪೂರ, ಪರಸಾಪೂರ, ಚನ್ನಪಟ್ಟಣ ಗ್ರಾಮಗಳಲ್ಲಿಅತಿವೃಷ್ಟಿಯಿಂದ ರೈತರ ಬೆಳೆ ಮತ್ತು ಮನೆಗಳು ಬಿದ್ದು ಅಪಾರ ಪ್ರಮಾಣದ ಹಾನಿಯಾಗಿದೆ. ಸರಕಾರ ಇಲ್ಲಿವರೆಗೂ ಪರಿಹಾರ ನೀಡಿಲ್ಲ. ತುರ್ತು ಪರಿಹಾರ ನೀಡಬೇಕು ಎಂದು ಆಗ್ರಹಿಸಿ ತಾಲೂಕು ಕೃಷಿಕ ಸಮಾಜ ಸಂಘಟನೆ ವತಿಯಿಂದ ಸೋಮವಾರ ತಹಸೀಲ್ದಾರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.

Vijaya Karnataka 10 Sep 2019, 5:00 am
ಶಿರಹಟ್ಟಿ : ತಾಲೂಕಿನ ಮಾಗಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಾದ ಹೊಳಲಾಪೂರ, ಪರಸಾಪೂರ, ಚನ್ನಪಟ್ಟಣ ಗ್ರಾಮಗಳಲ್ಲಿಅತಿವೃಷ್ಟಿಯಿಂದ ರೈತರ ಬೆಳೆ ಮತ್ತು ಮನೆಗಳು ಬಿದ್ದು ಅಪಾರ ಪ್ರಮಾಣದ ಹಾನಿಯಾಗಿದೆ. ಸರಕಾರ ಇಲ್ಲಿವರೆಗೂ ಪರಿಹಾರ ನೀಡಿಲ್ಲ. ತುರ್ತು ಪರಿಹಾರ ನೀಡಬೇಕು ಎಂದು ಆಗ್ರಹಿಸಿ ತಾಲೂಕು ಕೃಷಿಕ ಸಮಾಜ ಸಂಘಟನೆ ವತಿಯಿಂದ ಸೋಮವಾರ ತಹಸೀಲ್ದಾರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.
Vijaya Karnataka Web farmers demand for relief
ಪರಿಹಾರ ನೀಡಲು ರೈತರ ಆಗ್ರಹ


ಸ್ಥಳೀಯ ತಾಲೂಕು ಕೃಷಿಕ ಸಮಾಜ ಅಧ್ಯಕ್ಷ ರಮೇಶ ಕೋಳಿವಾಡ, ಜಿಲ್ಲಾಕಾರ್ಯದರ್ಶಿ ಚಂದ್ರಪ್ಪ ಹೊಸಮನಿ ಮಾತನಾಡಿ, ಆಗಸ್ಟ್‌ ತಿಂಗಳಿನಲ್ಲಿಬಿಟ್ಟು ಬಿಡದೆ ಸುರಿದ ದಾಖಲೆ ಮಳೆಗೆ ರೈತರ ಬೆಳೆ, ಹೊಲದ ಒಡ್ಡು, ಮನೆಗಳು ಹಾನಿಗೊಳಗಾಗಿವೆ. ಅಪಾರ ಪ್ರಮಾಣದ ನಷ್ಟ ಅನುಭವಿಸಿದ್ದು, ಅಧಿಕಾರಿಗಳಾಗಲಿ, ಸರಕಾರವಾಗಲಿ ಯಾವುದೇ ಪರಿಹಾರ, ನೆರವು ನೀಡಿಲ್ಲಎಂದು ಆರೋಪಿಸಿದರು.

2016-17ನೇ ಸಾಲಿನ ಬೆಳೆ ವಿಮೆ ಪರಿಹಾರದ ಹಣವೂ ಮಾಗಡಿ ಗ್ರಾಮದ ರೈತರಿಗೆ ಸಿಕ್ಕಿಲ್ಲ. ಈ ಹಿಂದಿನ ರಾಜ್ಯದ ಸಮ್ಮಿಶ್ರ ಸರಕಾರ ರೈತರ ಸಾಲ ಮನ್ನಾ ಮಾಡಿರುವುದಾಗಿ ಘೋಷಣೆ ಮಾಡಿದ್ದು, ರೈತರ ಬೆಳೆ ಸಾಲದ ಖಾತೆಗೆ ಹಣ ಜಮೆ ಆಗಿಲ್ಲ. ಸಾಲ ಪಡೆದಿರುವುದಕ್ಕಿಂತ ಹೆಚ್ಚು ಅಸಲಿಗೆ ಬಡ್ಡಿ ಹಣ ಸೇರಿಸಿದ್ದು, ಈ ಹೊರೆ ತಪ್ಪಿಸಬೇಕೆಂದು ಒತ್ತಾಯಿಸಿದರು.

ಕೃಷಿ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಈ ಹಿಂದೆ ಜಂಟಿಯಾಗಿ ಬೆಳೆ ಹಾನಿ ಸಮೀಕ್ಷೆ ನಡೆಸಿದ್ದು, ಇವತ್ತಿಗೂ ರೈತರಿಗೆ ಬೆಳೆ ವಿಮೆ ಪರಿಹಾರದ ಹಣ ದೊರೆತಿಲ್ಲ. ಸರಕಾರಕ್ಕೆ ಸಲ್ಲಿಕೆಯಾದ ಸಮೀಕ್ಷಾ ವರದಿ ನೀಡುವಂತೆ ಲಿಖಿತವಾಗಿ ಅರ್ಜಿ ಸಲ್ಲಿಸಿ ಕೃಷಿ ಇಲಾಖೆ ಅಧಿಕಾರಿಗಳನ್ನು ಕೇಳಿದರೆ ಯಾವುದೇ ಮಾಹಿತಿ ನೀಡುತ್ತಿಲ್ಲ. ಅಧಿಕಾರಿಗಳ ತಪ್ಪಿನಿಂದ ರೈತರು ತೊಂದರೆ ಅನುಭವಿಸಬೇಕಾಗಿದೆ ಎಂದು ದೂರಿದರು.

ರೈತರಿಗೆ ಪರಿಹಾರ ಮತ್ತು ನೆರವು ನೀಡುವಲ್ಲಿಅಧಿಕಾರಿಗಳು ಮತ್ತು ರಾಜಕಾರಣಿಗಳು ಉದಾಸೀನತೆ ತೋರಿದರೆ ಸಂಘಟನೆ ವತಿಯಿಂದ ರೈತ ಮಹಿಳೆಯರೆಲ್ಲರೂ ಸೇರಿ ಉಗ್ರ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.

ಸಂಘಟನೆಯ ಉಪಾಧ್ಯಕ್ಷ ವಿನೋದಕುಮಾರ ಹನಸಿ, ಗ್ರಾಮ ಘಟಕದ ಅಧ್ಯಕ್ಷ ಶೇಖರಯ್ಯ ವಿಭೂತಿಮಠ, ಮಹಿಳಾ ಗ್ರಾಮ ಘಟಕದ ಅಧ್ಯಕ್ಷೆ ಶಕುಂತಲಾ ಕುಂಡಿ, ಉಡಚಪ್ಪ ಕರಡಿ, ತಿಪ್ಪಣ್ಣ ಗಾಣಗೇರ, ಗೋಪಾಲರಡ್ಡಿ ಶೆಟರಡ್ಡಿ, ರಮೇಶ ಕುಂಡಿ, ವಿರೇಶ ಶಿವಸಿಂಪಿ, ಶಿವರಾಜ ಕುಂಡಿ, ನಿಂಗಪ್ಪ ಕಮ್ಮಾರ, ಚನ್ನಪ್ಪ ನಿಡವಣಿ, ಈರವ್ವ ತಳವಾರ, ಶಾರವ್ವ ಶಿರಹಟ್ಟಿ, ದೇವಕ್ಕ ಹನಕನಹಳ್ಳಿ, ರಾಚವ್ವ ಗಡಗಿ, ರತ್ನವ್ವ ಗಿಡಕಾವು, ಲಕ್ಷತ್ರ್ಮವ್ವ ಸುಣಗಾರ, ಫಕ್ಕೀರವ್ವ ಮಾನೇಗಾರ, ಖೈರುನಬಿ ಮುಲ್ಲಾಮುಂತಾದವರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ