ಆ್ಯಪ್ನಗರ

ಹತ್ತಿ ಕ್ಷೇತ್ರಕ್ಕೆ ಪ್ರಶಿಕ್ಷಣಾರ್ಥಿಗಳ ಕ್ಷೇತ್ರ ಭೇಟಿ

ಗದಗ: ನಗರದಲ್ಲಿರುವ ಇತ್ತೀಚೆಗೆ ಹಾಲಪ್ಪ ಗುಂಡಿಕೇರಿ ಅವರ ಜಮೀನಿನಲ್ಲಿಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ವತಿಯಿಂದ ದೇಶಿ ಕಾರ್ಯಕ್ರಮದಡಿ ಹತ್ತಿ ಕ್ಷೇತ್ರಕ್ಕೆ 5ನೇ ತಂಡದ ಪ್ರಶಿಕ್ಷಣಾರ್ಥಿಗಳ ಕ್ಷೇತ್ರ ಭೇಟಿ ನೀಡಿ ಹತ್ತಿ ಬೆಳೆ ಪರಿಶೀಲಿಸಿದರು.

Vijaya Karnataka 26 Sep 2019, 5:00 am
ಗದಗ: ನಗರದಲ್ಲಿರುವ ಇತ್ತೀಚೆಗೆ ಹಾಲಪ್ಪ ಗುಂಡಿಕೇರಿ ಅವರ ಜಮೀನಿನಲ್ಲಿಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ವತಿಯಿಂದ ದೇಶಿ ಕಾರ್ಯಕ್ರಮದಡಿ ಹತ್ತಿ ಕ್ಷೇತ್ರಕ್ಕೆ 5ನೇ ತಂಡದ ಪ್ರಶಿಕ್ಷಣಾರ್ಥಿಗಳ ಕ್ಷೇತ್ರ ಭೇಟಿ ನೀಡಿ ಹತ್ತಿ ಬೆಳೆ ಪರಿಶೀಲಿಸಿದರು.
Vijaya Karnataka Web 25RUDRAGOUD3_25
ಗದಗ ಹೊರವಲಯದಲ್ಲಿರುವ ಹಾಲಪ್ಪ ಗುಂಡಿಕೇರಿ ಅವರ ಜಮೀನಿಗೆ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ತಂಡ ಭೇಟಿ ನೀಡಿತು.


ಕಂಪನಿ ಪ್ರತಿನಿಧಿ ಡಾ.ಶಂಭು ಹಾದಿಮನಿ ಮಾತನಾಡಿ, ಬಿಟಿ ಹತ್ತಿಯಲ್ಲಿಗುಲಾಬಿ ಕಾಯಿಕೊರಕದ ಬಾಧೆ ಜ್ವಲಂತ ಸಮಸ್ಯೆಯಾಗಿದ್ದು ಅದರ ನಿಯಂತ್ರಣ ಈ ಘಟ್ಟದಲ್ಲಿಅತಿ ಅವಶ್ಯವಾಗಿರುತ್ತದೆ. ಆದ್ದರಿಂದ ರೈತ ಹೊಲಕ್ಕೆ ಹೋಗಿ ಪ್ರಶಿಕ್ಷಣಾರ್ಥಿಗಳಿಗೆ ಬಿಟಿ ಹತ್ತಿ ಕಾಯಿಕೊರಕ ನಿಯಂತ್ರಣದ ಬಗ್ಗೆ ಮಾಹಿತಿ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕೀಟದ ಭಾದೆಯಿಂದ ಹತ್ತಿಯ ಗುಣಮಟ್ಟ ಕೆಡುವುದರಿಂದ ರೈತರಿಗೆ ಆದಾಯದಲ್ಲಿನಷ್ಟವಾಗುತ್ತದೆ ಎಂದರು. ಕೆ.ಐ. ಕುರುಗೋಡ, ಎಸ್‌.ಎ. ಸೂಡಿಶೆಟ್ಟರ್‌, ಜಿಲ್ಲೆಯ ಸುಮಾರು 37 ಕೃಷಿ ಪರಿಕರ ಮಾರಾಟಗಾರರು ಈ ಕ್ಷೇತ್ರ ಭೇಟಿಯಲ್ಲಿಪಾಲ್ಗೊಂಡು ತಮ್ಮ ಕಾರ್ಯವ್ಯಾಪ್ತಿಯಲ್ಲಿಬರುವ ಹತ್ತಿ ಬೆಳೆಗಾರರಿಗೆ ಸೂಕ್ತ ಮಾರ್ಗದರ್ಶನ ನೀಡಲಿದ್ದಾರೆಂದು ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಮುಖ್ಯಸ್ಥ ಡಾ.ಸಿ.ಎಂ. ರಫಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ