ಆ್ಯಪ್ನಗರ

ಪೋಲಿಯೋ ನಿರ್ಮೂಲನೆ ಜಾಗೃತಿ ಜಾಥಾ

ಗಜೇಂದ್ರಗಡ : ಸ್ಥಳೀಯ ಆರೋಗ್ಯ ಮತ್ತು ಕುಟುಂಬ ಇಲಾಖೆ ವತಿಯಿಂದ ಶನಿವಾರ ಸರಕಾರಿ ಶಾಲೆ ಮಕ್ಕಳು ಪೋಲಿಯೋ ನಿರ್ಮೂಲನೆ ಮಾಡೋಣ ಎಂದು ಘೋಷಣೆ ಕೂಗುತ್ತಾ ಜಾಗೃತಿ ಜಾಥಾ ನಡೆಸಿದರು.

Vijaya Karnataka 10 Mar 2019, 5:00 am
ಗಜೇಂದ್ರಗಡ : ಸ್ಥಳೀಯ ಆರೋಗ್ಯ ಮತ್ತು ಕುಟುಂಬ ಇಲಾಖೆ ವತಿಯಿಂದ ಶನಿವಾರ ಸರಕಾರಿ ಶಾಲೆ ಮಕ್ಕಳು ಪೋಲಿಯೋ ನಿರ್ಮೂಲನೆ ಮಾಡೋಣ ಎಂದು ಘೋಷಣೆ ಕೂಗುತ್ತಾ ಜಾಗೃತಿ ಜಾಥಾ ನಡೆಸಿದರು.
Vijaya Karnataka Web folio eradication awareness jatha
ಪೋಲಿಯೋ ನಿರ್ಮೂಲನೆ ಜಾಗೃತಿ ಜಾಥಾ


ವೈದ್ಯಾಧಿಕಾರಿ ಕೆ.ಎ. ಹಾದಿಮನಿ, ಮಾ. 10 ರಂದು ಪೋಲಿಯೋ ಹನಿ ಹಾಕಲಾಗುತ್ತದೆ. ನಗನಗರ, ಲಂಬಾಣಿ ತಾಂಡಾ, ಗರಡಿ ಮನೆ, ಮಾರುತಿ ಗುಡಿ, ಕಾಲಕಾಲೇಶ್ವ ವೃತ್ತ, ಹಿರೇಬಜಾರ್‌ ವಿರುಪಾಕ್ಷೇಶ್ವರ ದೇವಸ್ಥಾನ, ಮರದ ಓಣಿ ಕಟ್ಟಿ ಬಸವೇಶ್ವರ ದೇವಸ್ಥಾನ, ಭೂಮರೆಡ್ಡಿ ಓಣಿಯ ದುರ್ಗಾದೇವಿ ಗುಡಿ, ಉಣಚಗೇರಿಯ ಬಸವೇಶ್ವರ ಗುಡಿ, ಮಸ್ಕಿ ಓಣಿ ಅಂಗನವಾಡಿ ಕೇಂದ್ರ, ಬಣಗಾರ ಓಣಿ ಶಂಕರ್‌ಲಿಂಗ ಗುಡಿ, ಚಲವಾದಿ ಓಣಿ ಲಕ್ಷ್ಮಿ ಗುಡಿ, ಬಸ್‌ನಿಲ್ದಾಣ, ವಾಜಪೇಯಿ ನಗರ ಸೇರಿದಂತೆ ಇನ್ನಿತರ ಸಾರ್ವಜನಿಕ ಸ್ಥಳದಲ್ಲಿ ಪೋಲಿಯೋ ಲಸಿಕೆ ಹಾಕುವ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

ಪಟ್ಟಣದ ಉಣಚಗೇರಿ, ಸರಕಾರಿ ಶಾಲೆ ನಂ 7 ಪುರಸಭೆಯಿಂವ ಪ್ರಾರಂಭಿಸಿದ ಜಾಥಾ ಪ್ರಮುಖ ಬೀದಿಯಲ್ಲಿ ಸಂಚರಿಸಿತು. ಸುನೀಲ ಹಬೀಬ, ಪ್ರವೀಣ ರಾಟೋಡ, ಎಮ್‌. ಬಿ. ಗಡ್ಡಿ, ಶಿಕ್ಷ ಕರಾದ ಎಸ್‌.ಕೆ. ಸರಗಣಾಚಾರಿ, ಎಸ್‌.ಟಿ. ಜಾದವ, ಎಸ್‌.ಎಂ ದಿವಾಣದ, ಪಿ.ಎನ್‌. ಗಂಜಿ, ಎಸ್‌.ಎಸ್‌. ಪಟ್ಟೇದ, ಎಮ್‌.ವಿ. ಹಿರೇಮಠ, ವಿ.ವಿ. ಕಾಡರ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

9ಜಿಜೆಡಿ1 ಗಜೇಂದ್ರಗಡದಲ್ಲಿ ಶನಿವಾರ ಸರಕಾರಿ ಶಾಲೆ ಮಕ್ಕಳು ಪೋಲಿಯೋ ನಿರ್ಮೂಲನೆ ಜಾಗೃತಿ ಜಾಥಾ ನಡೆಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ