ಆ್ಯಪ್ನಗರ

ಜನಪದ ಕಲೆ ತರಬೇತಿ ಶ್ಲಾಘನೀಯ

ಡಂಬಳ: ನಮ್ಮ ಪೂರ್ವಜರಿಂದ ಜನಜೀವನಾಡಿ ಆಗಿರುವ ಜನಪದ ಕಲೆಯನ್ನು ಪ್ರಸ್ತುತ ದಿನಮಾನಗಳಲ್ಲಿಉಳಿಸಿ ಬೆಳೆಸಬೇಕಾದ ಅಗತ್ಯವಿದೆ. ಅದು ಕೇವಲ ಭಾಷಣದಿಂದ ಸಾಧ್ಯವಿಲ್ಲ, ಕಲಾವಿದರೆ ಯುವ ಪ್ರತಿಭೆಗಳಿಗೆ ತರಬೇತಿ ನೀಡಿ ಜನಪದ ಕಲೆ ಬೆಳಗುತ್ತಿರುವುದು ಶ್ಲಾಘನೀಯವೆಂದು ರಾಚಪ್ಪ ತಳವಾರ ಹೇಳಿದರು.

Vijaya Karnataka 29 Sep 2019, 5:00 am
ಡಂಬಳ: ನಮ್ಮ ಪೂರ್ವಜರಿಂದ ಜನಜೀವನಾಡಿ ಆಗಿರುವ ಜನಪದ ಕಲೆಯನ್ನು ಪ್ರಸ್ತುತ ದಿನಮಾನಗಳಲ್ಲಿಉಳಿಸಿ ಬೆಳೆಸಬೇಕಾದ ಅಗತ್ಯವಿದೆ. ಅದು ಕೇವಲ ಭಾಷಣದಿಂದ ಸಾಧ್ಯವಿಲ್ಲ, ಕಲಾವಿದರೆ ಯುವ ಪ್ರತಿಭೆಗಳಿಗೆ ತರಬೇತಿ ನೀಡಿ ಜನಪದ ಕಲೆ ಬೆಳಗುತ್ತಿರುವುದು ಶ್ಲಾಘನೀಯವೆಂದು ರಾಚಪ್ಪ ತಳವಾರ ಹೇಳಿದರು.
Vijaya Karnataka Web folk art training is commendable
ಜನಪದ ಕಲೆ ತರಬೇತಿ ಶ್ಲಾಘನೀಯ

ಸಮೀಪದ ಡೋಣಿ ಗ್ರಾಮದಲ್ಲಿಕನ್ನಡ ಮತ್ತು ಸಂಸ್ಕೃತಿ ಇಲಾಖೆ ಗದಗ ಹಾಗೂ ಬೀರಲಿಂಗೇಶ್ವರ ಕಲಾತಂಡ ಜನಪದ ಕಲಾತಂಡ ಡೋಣಿ ಇವುಗಳ ಆಶ್ರಯದಲ್ಲಿನಡೆದ ಜನಪದ ಸಂಭ್ರಮ ಕಾರ‍್ಯಕ್ರಮದಲ್ಲಿಅವರು ಮಾತನಾಡಿದರು.

ಲಕ್ಕುಂಡಿ ಗ್ರಾಮದ ಶಿವು ಭಜಂತ್ರಿ ಹಾಗೂ ತಂಡ, ಎಚ್‌.ಎಸ್‌.ವೆಂಕಟಾಪೂರ ಗ್ರಾಮದ ಗಡಪ್ಪಗೌಡ ಬಮ್ಮಪ್ಪನವರ ಹಾಗೂ ತಂಡ, ಡೋಣಿ ಗ್ರಾಮದ ಶರಣಪ್ಪ ಆವಿನ ಹಾಗೂ ತಂಡ, ಜಯಪ್ಪ ಹಡಪದ ಹಾಗೂ ವಿವಿದ ಕಲಾ ತಂಡಗಳಿಂದ ಜನಪದ ಸಮೂಹ ನೃತ್ಯ, ಜನಪದ ಸಂಗಿತ ತತ್ವ ಪದ ಜನಪದ ಕಾರ‍್ಯಕ್ರಮ ಜರುಗಿದವು.

ನಿಂಗಪ್ಪ ಗುಡ್ಡದ ಸ್ವಾಗತಿಸಿ ನಿರೂಪಿಸಿದರು. ಹಾಲಪ್ಪ ಕುರಿ ವಂದಿಸಿದರು. ರಾಘವೇಂದ್ರ ಡೊಳ್ಳಿನ, ಮಳ್ಳಪ್ಪ ಅಳವುಂಡಿ, ದೇವಪ್ಪ ವಾಲ್ಮೀಕಿ ಇತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ