ಆ್ಯಪ್ನಗರ

ಜನಪದ ಮಾನವನ ಅವಿಭಾಜ್ಯ ಅಂಗ

ನರಗುಂದ : ಜನಪದ ಸಾಹಿತ್ಯ ಮಾನವನ ಅವಿಭಾಜ್ಯ ಅಂಗ ಮಾನವನನ್ನು ಮಹಾಮಾನನ್ನಾಗಿಸುವ ಹಾಗೂ ಸಂಸ್ಕೃತಿಯನ್ನು ಕಲಿಸುವ ಶಕ್ತಿ ಜನಪದಕ್ಕಿದೆ ಎಂದು ಪ್ರೊ.ಆರ್‌.ಬಿ.ಚಿನಿವಾಲರ ಹೇಳಿದರು.

Vijaya Karnataka 3 Mar 2019, 5:00 am
ನರಗುಂದ : ಜನಪದ ಸಾಹಿತ್ಯ ಮಾನವನ ಅವಿಭಾಜ್ಯ ಅಂಗ ಮಾನವನನ್ನು ಮಹಾಮಾನನ್ನಾಗಿಸುವ ಹಾಗೂ ಸಂಸ್ಕೃತಿಯನ್ನು ಕಲಿಸುವ ಶಕ್ತಿ ಜನಪದಕ್ಕಿದೆ ಎಂದು ಪ್ರೊ.ಆರ್‌.ಬಿ.ಚಿನಿವಾಲರ ಹೇಳಿದರು.
Vijaya Karnataka Web GDG-2NRD2A
ನರಗುಂದ ತಾಲೂಕು ಭೈರನಹಟ್ಟಿಯಲ್ಲಿ ನಡೆದ ಶಿವಾನುಭದಲ್ಲಿ ಪ್ರಗತಿಪರ ರೈತ ಬಸವರಾಜ ಚಿಕ್ಕನಗೌಡ್ರ ಅವರನ್ನು ಸನ್ಮಾನಿಸಲಾಯಿತು.


ತಾಲೂಕಿನ ಭೈರನಹಟ್ಟಿ ಗ್ರಾಮದ ದೊರೆಸ್ವಾಮಿ ವಿರಕ್ತಮಠದಲ್ಲಿ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಆಶ್ರಯದಲ್ಲಿ ಹಮ್ಮಿಕೊಂಡ 291ನೇ ಮಾಸಿಕ ಶಿವಾನುಭವದ ಹಾಗೂ ಜನಪದ ತಜ್ಞ ಡಾ.ಬಿ.ಎಸ್‌,ಗದ್ದಗಿಮಠರ 103 ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಭಾರತ ದೇಶದಲ್ಲಿಯೇ ಕರ್ನಾಟಕ ಜನಪದ ಸಾಹಿತ್ಯ ಶ್ರೀಮಂತವಾದುದು. ಅಂತಹ ಭವ್ಯ ಪರಂಪರೆ ಹೊಂದಿರುವ ಜಾನಪದ ಸಾಹಿತ್ಯದ ಬಗ್ಗೆ ಇಡೀ ದೇಶದಲ್ಲಿಯೇ ಪ್ರಥಮಬಾರಿಗೆ ಪಿಎಚ್‌ಡಿ ಮಹಾಪ್ರಬಂಧÜ ಮಂಡಿಸಿದ ಕೀರ್ತಿ ಡಾ.ಬಿ.ಎಸ್‌.ಗದ್ದಗಿಮಠರಿಗೆ ಸಲ್ಲುತ್ತದೆ ಎಂದರು.

ಜನಪದ ಸಾಹಿತ್ಯ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಿ ಇದೊಂದು ವಿಜ್ಞಾನ ಎಂದು ಹೇಳಿದವರು. ಬಾಲ ಬಾಯಿಯಲ್ಲಿ ಬ್ರಹ್ಮಾಂಡವು ಅಡಗಿರುವಂತೆ ಜಾನಪದದಲ್ಲಿ ಎಲ್ಲವೂ ಅಡಗಿದೆ .ಜನಪದ ಎಲ್ಲ ಕಲೆಗಳ ತಾಯಿಬೇರು ಇದ್ದಂತೆ. ಅಂತಹ ಜನಪದ ಸೊಗಡನ್ನು ಇಂದಿನ ಯುವಪೀಳಿಗೆ ಉಳಿಸಿಬೆಳೆಸುವ ಕಾರ್ಯ ಮಾಡಬೇಕಿದೆ ಎಂದರು.

ಶ್ರೀ ಶಾಂತಲಿಂಗ ಸ್ವಾಮಿಗಳು ಸಾನ್ನಿಧ್ಯವಹಿಸಿ,ಜಾನಪದ ನಿರ್ಲಕ್ಷ್ಯಕ್ಕೆ ಒಳಗಾದ ಕಾಲದಲ್ಲಿ ಪ್ರತಿ ಹಳ್ಳಿ-ಹಳ್ಳಿಗಳಿಗೂ ತಿರುಗಿ ಜನಪದ ಗೀತೆ ಸಂಗ್ರಹಿಸಿ ಅವುಗಳನ್ನು ಸಂರಕ್ಷಿಸಿದರು. ಕನ್ನಡ ಜಾನಪದ ಕ್ಷೇತ್ರದಲ್ಲಿ ನಕ್ಷ ತ್ರದಂತೆ ಮಿನುಗಿದ ಡಾ.ಬಿ.ಎಸ್‌.ಗದ್ದಗಿಮಠರ ಅವರ ಕೊಡುಗೆ ಅಮೂಲ್ಯವಾದದ್ದು ಎಂದರು.

ಮನುಷ್ಯನು ತಾನು ಮಾಡುವ ಕೆಲಸಗಳಲೆಲ್ಲಾ ತನ್ಮಯತೆ ತುಂಬಲು ಮಾಡಿದ ಪ್ರಯತ್ನಗಳ ಸರಮಾಲೆಯೇ ಜಾನಪದ. ಅದು ಮಾನವನಿಗೆ ಸಂಸ್ಕಾರ ಕಲಿಸುವುದರ ಜತೆಗೆ ಮಾನವೀಯ ಮೌಲ್ಯ ಬಿತ್ತುವಂತಹ ಕಾರ್ಯ ಮಾಡುತ್ತದೆ. ಜನಪದವನ್ನು ರಚಿಸಿದವರೇನು ಯಾವುದೇ ವಿಶ್ವವಿದ್ಯಾಲಯದಿಂದ ಪಿಎಚ್‌ಡಿ ಪಡೆದವರಲ್ಲ, ನಮ್ಮ ಹಿರಿಯರು ಅನುಭವದ ಮುಖಾಂತರ ಹೇಳಿದ್ದೆ ಜಾನಪದ ಎಂದರು.

ಭೈರನಹಟ್ಟಿಯ ಪ್ರಗತಿಪರ ರೈತ ಬಸವರಾಜ ಚಿಕ್ಕನಗೌಡ್ರ ಅವರನ್ನು ಸನ್ಮಾನಿಸಲಾಯಿತು. ವೇದಿಕೆ ಮೇಲೆ ಡಾ.ವೈ.ಎಂ. ಭಜಂತ್ರಿ, ಎಸ್‌.ಎನ್‌.ಪೂಜಾರ, ಯಾವಗಲ್‌ ಗ್ರಾಪಂ ಅಧ್ಯಕ್ಷೆ ಲಕ್ಷ್ಮೀಬಾಯಿ ಯಾವಗಲ್‌, ಡಾ.ಬಸವರಾಜ ಹಲಕುರ್ಕಿ, ಡಾ.ಪ್ರಭಾವತಿ ಹಲಕುರ್ಕಿ, ವೀರಭದ್ರಪ್ಪ ಪಟ್ಟಣಶೆಟ್ಟಿ ಉಪಸ್ಥಿತರಿದ್ದರು. ಕೊಣ್ಣೂರಿನ ಮಾರುತೇಶ್ವರ ಭಜನಾ ಮಂಡಳಿ ಕೊಣ್ಣೂರ ಅವರಿಂದ ವಚನ ಸಂಗೀತ ಹಾಗೂ ಕೊಣ್ಣೂರಿನ ಜೈಕಿಸಾನ್‌ ಕಲಾತಂಡದಿಂದ ಜಾನಪದ ನೃತ್ಯ ಕಾರ್ಯಕ್ರಮ ಜರುಗಿತು. ರಮೇಶ ಐನಾಪುರ ನಿರೂಪಿಸಿದರು. ಮಹಾಂತೇಶ ಹಿರೇಮಠ ಸ್ವಾಗತಿಸಿ,ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ