ಆ್ಯಪ್ನಗರ

ಉಚಿತ ರಕ್ತ ತಪಾಸಣೆ ಶಿಬಿರ ಯಶಸ್ವಿ

ಗದಗ : ಭಾವಸಾರ ವ್ಹಿಜನ್‌ ಇಂಡಿಯಾ ನಗರದ ಎಚ್‌ಸಿಈಎಸ್‌ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಏರ್ಪಡಿಸಿದ್ದ ಉಚಿತ ರಕ್ತತಪಾಸಣೆ ಶಿಬಿರದಲ್ಲಿ 250ಕ್ಕೂ ಹೆಚ್ಚು ವಿದ್ಯಾರ್ಥಿ ವಿದ್ಯಾರ್ಥಿನಿಯರ ರಕ್ತ ತಪಾಸಣೆ ನಡೆಸಿತು.

Vijaya Karnataka 22 Jul 2019, 5:00 am
ಗದಗ : ಭಾವಸಾರ ವ್ಹಿಜನ್‌ ಇಂಡಿಯಾ ನಗರದ ಎಚ್‌ಸಿಈಎಸ್‌ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಏರ್ಪಡಿಸಿದ್ದ ಉಚಿತ ರಕ್ತತಪಾಸಣೆ ಶಿಬಿರದಲ್ಲಿ 250ಕ್ಕೂ ಹೆಚ್ಚು ವಿದ್ಯಾರ್ಥಿ ವಿದ್ಯಾರ್ಥಿನಿಯರ ರಕ್ತ ತಪಾಸಣೆ ನಡೆಸಿತು.
Vijaya Karnataka Web GDG-21SALIM12
ಗದಗನಲ್ಲಿ ಭಾವಸಾರ ವಿಜನ್‌ ಇಂಡಿಯಾದಿಂದ ಉಚಿತ ರಕ್ತತಪಾಸಣೆ ಶಿಬಿರ ನಡೆಯಿತು.


ಮಹಾವಿದ್ಯಾಲಯದ ಎನ್‌ಎಸ್‌ಎಸ್‌ ಸ್ವಯಂ ಸೇವಕರಿಗೆ ಹಾಗೂ ಎನ್‌ಸಿಸಿ ಕೆಡೆಟ್‌ಗಳಿಗೆ ಡಾ.ದತ್ತಾತ್ರೇಯ ವೈಕುಂಠೆ ರಕ್ತತಪಾಸಣೆ ನಡೆಸಿ ರಕ್ತಗುಂಪಿನÜ ಚೀಟಿ ವಿತರಿಸಿ ರಕ್ತದಾನದ ಮಹತ್ವ ಹಾಗೂ ಅದರಿಂದ ಆರೋಗ್ಯಕ್ಕೆ ಆಗುವ ಲಾಭ ವಿವರಿಸಿದರು.

ಪ್ರಾ.ಎಸ್‌.ಜಿ.ಉಳಿಗೇರ ಅವರು ಆರೋಗ್ಯಕರ ಜೀವನದಲ್ಲಿ ರಕ್ತದ ಪಾತ್ರ ವಿಷಯವಾಗಿ ಮಾತನಾಡಿದರು. ಎನ್‌ಎಸ್‌ಎಸ್‌ ಅಧಿಕಾರಿ ಪ್ರೊ.ಬಿ.ಸಿ.ಜೋಗಿನ ಸ್ವಾಗತಿಸಿದರು. ಉಪನ್ಯಾಸಕ ಡಾ.ಎಂ.ಬಿ.ಮಡ್ಡಿ ನಿರೂಪಿಸಿದರು. ಎನ್‌ಸಿಸಿ ಅಧಿಕಾರಿ ಪ್ರೊ.ವಿ.ಟಿ.ಮೂಲಿಮನಿ ವಂದಿಸಿದರು.

ಸುರೇಂದ್ರ ಜಾಧವ, ಪರಶುರಾಮ ನವಲೆ, ವಿಜಯಾ ನವಲೆ, ಹರೀಶ ವೈಕುಂಠೆ, ರುದ್ರಪ್ಪ ಚವ್ಹಾಣ, ಮುತ್ತಣ್ಣ ಅರಸಿಕೇರಿ, ಜಿ.ಎನ್‌.ಹಿರೇಮಠ ಇತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ