ಆ್ಯಪ್ನಗರ

ಮಹಿಳೆಗೆ ಸ್ವಾತಂತ್ರ್ಯ ನೀಡಿದ ಶರಣರು

ಗದಗ :ಕೇವಲ ಕೌಟುಂಬಿಕ ಸಂಕೋಲೆಯಲ್ಲಿ ಬಂಧಿತಳಾಗಿದ್ದ ಮಹಿಳೆಗೆ ಪುರುಷರಷ್ಟೇ ಸ್ವಾತಂತ್ರ್ಯ ನೀಡಿದ ಕೀರ್ತಿ 12ನೇ ಶತಮಾನದ ಬಸವಾದಿ ಶರಣರಿಗೆ ಸಲ್ಲುವುದು. ಮಹಿಳೆಯರನ್ನು ಸಂಪೂರ್ಣವಾಗಿ ಸಮಾಜದ ಮುನ್ನೆಲೆಗೆ ತರಲು ಪ್ರಯತ್ನಸಿದವರಲ್ಲಿ 12 ನೇ ಶತಮಾನದ ಬಸವಾದಿ ಶರಣರು ಪ್ರಮುಖರಾಗಿದ್ದಾರೆ ಎಂದು ಸಂಶೋಧಕಿ ಹನುಮಾಕ್ಷಿ ಗೋಗಿ ಹೇಳಿದರು.

Vijaya Karnataka 14 May 2019, 5:00 am
ಗದಗ :ಕೇವಲ ಕೌಟುಂಬಿಕ ಸಂಕೋಲೆಯಲ್ಲಿ ಬಂಧಿತಳಾಗಿದ್ದ ಮಹಿಳೆಗೆ ಪುರುಷರಷ್ಟೇ ಸ್ವಾತಂತ್ರ್ಯ ನೀಡಿದ ಕೀರ್ತಿ 12ನೇ ಶತಮಾನದ ಬಸವಾದಿ ಶರಣರಿಗೆ ಸಲ್ಲುವುದು. ಮಹಿಳೆಯರನ್ನು ಸಂಪೂರ್ಣವಾಗಿ ಸಮಾಜದ ಮುನ್ನೆಲೆಗೆ ತರಲು ಪ್ರಯತ್ನಸಿದವರಲ್ಲಿ 12 ನೇ ಶತಮಾನದ ಬಸವಾದಿ ಶರಣರು ಪ್ರಮುಖರಾಗಿದ್ದಾರೆ ಎಂದು ಸಂಶೋಧಕಿ ಹನುಮಾಕ್ಷಿ ಗೋಗಿ ಹೇಳಿದರು.
Vijaya Karnataka Web GDG-13RUDRAGOUD7
ಗದಗ ತೋಂಟದಾರ್ಯ ಮಠದಲ್ಲಿ ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ಹಾಸ್ಯ ಕಲಾವಿದೆ ಇಂದುಮತಿ ಸಾಲಿಮಠ ಮಾತನಾಡಿದರು.


ನಗರದ ತೋಂಟದಾರ್ಯ ಮಠದಲ್ಲಿ ಜರುಗಿದ 12ನೇ ಶತಮಾನವು ಮಹಿಳೆಯರ ದಾಸ್ಯ ವಿಮೋಚನೆಯ ಪರ್ವಕಾಲ ಕುರಿತು ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಹೆಣ್ಣು ಮಾಯೆ ಎಂಬ ಮನು-ವೈದಿಕರ ಪರಿಕಲ್ಪನೆಯನ್ನು ಅಲ್ಲಗಳೆದ ಶರಣರು, ಹೆಣ್ಣು ಮಾಯೆಯಲ್ಲ ಮನದ ಮುಂದಣ ಆಸೆಯೆ ಮಾಯೆ ಎಂದು ಅನುಭವ ಮಂಟಪದಲ್ಲಿ ಮುಕ್ತವಾಗಿ ಪಾಲ್ಗೊಳ್ಳಲು ಮಹಿಳೆಯರಿಗೆ ಅವಕಾಶ ಮಾಡಿಕೊಡಲಾಯಿತು. ಅವಳಿಗೆ ಲಿಂಗಧಾರಣೆ ಮಾಡಿ ಧಾರ್ಮಿಕ ಸ್ವಾತಂತ್ರ್ಯ ನೀಡುವುದರ ಜತೆಗೆ ಶೈಕ್ಷ ಣಿಕ ಸ್ವಾತಂತ್ರ್ಯ ನೀಡಿದರು. ಮಹಿಳೆಯರು ಇಂದು ಎಲ್ಲ ಕ್ಷೇತ್ರಗಳಲ್ಲಿ ಮುಂದುವರಿದಿದ್ದಾರೆ ಎಂದರೆ ಅದಕ್ಕೆ ಬಸವಾದಿ ಶರಣರು ತೋರಿದ ಸ್ವಾತಂತ್ರ್ಯದ ದಾರಿಯೇ ಕಾರಣ. ಸುಮಾರು 900 ವರ್ಷಗಳ ಹಿಂದೇಯೆ ಸ್ತ್ರೀ ಸ್ವಾತಂತ್ರ್ಯಕ್ಕೆ ಬುನಾದಿ ಹಾಕಿದ್ದ ಬಸವಾದಿ ಶರಣರ ಕೊಡುಗೆಯನ್ನು ನಾವು ಎಂದಿಗೂ ಮರೆಯಬಾರದು ಎಂದರು.ಹಾಸ್ಯ ಕಲಾವಿದೆ ಇಂದುಮತಿ ಸಾಲಿಮಠ ಮಾತನಾಡಿದರು.

ತೋಂಟದಾರ್ಯ ಜಾತ್ರಾ ಮಹೋತ್ಸವ ಸಮಿತಿ ಉಪಾಧ್ಯಕ್ಷೆ ಅಕ್ಕಮಹಾದೇವಿ ಚಟ್ಟಿ, ಎಸ್‌.ಎಸ್‌ ಪಟ್ಟಣಶೆಟ್ಟಿ, ಜಾತ್ರಾ ಸಮಿತಿ ಉಪಾಧ್ಯಕ್ಷ ಅಮರೇಶ ಅಂಗಡಿ, ಸಹ ಕಾರ್ಯದರ್ಶಿ ಮೋಹನ ಗಜಾಕೋಶ, ಕೋಶಾಧ್ಯಕ್ಷ ಈರಣ್ಣ ಬಾಳಿಕಾಯಿ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ