ಆ್ಯಪ್ನಗರ

ಸಂಘದ ಸದಸ್ಯರಿಂದಲೇ ಧರಣಿ

ನರಗುಂದ: 80 ವರ್ಷಗಳ ಇತಿಹಾಸ ಇರುವ ರೇವಣಸಿದ್ದೇಶ್ವರ ಕುರಿ ಸಂಗೋಪನೆ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘವನ್ನು ಅಧ್ಯಕ್ಷ ರು ಸ್ವಂತ ಆಸ್ತಿಯನ್ನಾಗಿ ಮಾಡಿಕೊಂಡು ಸಂಘದ ಹಣವನ್ನು ದುರ್ಬಳಕೆ ಮಾಡಿದ್ದಾರೆ ಎಂದು ಸಂಘದ ಸದಸ್ಯರು ಸೂಕ್ತ ತನಿಖೆಗೆ ಒತ್ತಾಯಿಸಿ ತಹಸೀಲ್ದಾರ ಕಚೇರಿ ಎದುರು ಧರಣಿ ನಡೆಸಿದರು.

Vijaya Karnataka 28 Jun 2019, 5:00 am
ನರಗುಂದ: 80 ವರ್ಷಗಳ ಇತಿಹಾಸ ಇರುವ ರೇವಣಸಿದ್ದೇಶ್ವರ ಕುರಿ ಸಂಗೋಪನೆ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘವನ್ನು ಅಧ್ಯಕ್ಷ ರು ಸ್ವಂತ ಆಸ್ತಿಯನ್ನಾಗಿ ಮಾಡಿಕೊಂಡು ಸಂಘದ ಹಣವನ್ನು ದುರ್ಬಳಕೆ ಮಾಡಿದ್ದಾರೆ ಎಂದು ಸಂಘದ ಸದಸ್ಯರು ಸೂಕ್ತ ತನಿಖೆಗೆ ಒತ್ತಾಯಿಸಿ ತಹಸೀಲ್ದಾರ ಕಚೇರಿ ಎದುರು ಧರಣಿ ನಡೆಸಿದರು.
Vijaya Karnataka Web GDG-28NRD1


ಇಲ್ಲಿನ ಮಿನಿ ವಿಧಾನ ಸೌಧ ಎದುರು ಚಿಕ್ಕನರಗುಂದ ರೇವಣಸಿದ್ದೇಶ್ವರ ಸಹಕಾರ ಸಂಘದಲ್ಲಿ ನಡೆದಿರುವ ಅವ್ಯವಹಾರ ಕುರಿತು ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ಸಂಘದ ಸದಸ್ಯರು, ಗ್ರಾಮಸ್ಥರು ದರಣಿ ನಡೆಸಿದರು. ದರಣಿ ನಿರತ ಗ್ರಾಮಸ್ಥರಿಂದ ಮನವಿ ಸ್ವೀಕರಿಸಿದ ತಹಸೀಲ್ದಾರ ಆಶಪ್ಪ ಪೂಜಾರ ಅವರು ಜು.1, 2 ರಂದು ಗ್ರಾಮಕ್ಕೆ ಭೇಟಿ ನೀಡಿ ಸಂಘದ ವ್ಯವಹಾರ ಪರಿಸೀಲಿಸುವ ಭರವಸೆ ನೀಡಿದರು.

ಕುರಿ ಸಂಗೋಪನಾ ಸಹಕಾರ ಸಂಘದ ಅಧ್ಯಕ್ಷ ಮಹದೇವಪ್ಪ ಕಲಹಾಳ ಅವರು ತಮ್ಮ ಸ್ವಂತ ಆಸ್ತಿಯನ್ನಾಗಿ ಮಾಡಿಕೊಂಡು ಸಂಬಂಧಿತರನ್ನು ಆಡಳಿತ ಮಂಡಳಿ ಸದಸ್ಯರನ್ನಾಗಿ ಮಾಡಿಕೊಂಡು ಅಧಿಕಾರ ಹಾಗೂ ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪ ಕೇಳಿ ಬಂದಿತ್ತು. ಉಣ್ಣೆ ಸಂಘಕ್ಕೆ ಕೋಟಿ ಕೋಟಿ ಅನುದಾನ ಬರುತ್ತದೆ. ಆದರೆ ಫಲಾನುಭವಿ ಆಯ್ಕೆಯಲ್ಲಿ ತಾರತಮ್ಯ ಮಾಡಿ ಸಂಘವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಬಡವರಿಗಾಗಿ ಕಟ್ಟಿದ ಮನೆಗಳನ್ನು ಅರ್ಹ ಪಲಾನುಭವಿಗಳಿಗೆ ತಲುಪಿಸದೆ ಅನ್ಯಾಯ ಮಾಡಿದ್ದಾರೆ ಎಂದು ಪ್ರತಿಭಟನಾನಿರತರು ಆರೋಪಿಸಿದ್ದಾರೆ.

ಪ್ರತಿಭಟನೆಯಲ್ಲಿ ಶಿವಾನಂದ ಹಳಕಟ್ಟಿ, ಪಡಿಯಪ್ಪ ಕುರಿ, ಕರಿಯಪ್ಪ ಕಲಹಾಳ, ಬಸಪ್ಪ ಹಳಕಟ್ಟಿ, ನಿಂಗಪ್ಪ ಚಾವಡಿ, ನೀಲವ್ವ ಮರಿಯಣ್ಣವರ, ರತ್ನವ್ವ ಕುರಿ, ಕಸ್ತೂರಿ ಚಾವಡಿ, ಮುದಕವ್ವ ಗೊಬ್ಬರಗುಂಪಿ, ಅಂದವ್ವ ಕಳಸನ್ನವರ, ಗಂಗವ್ವ ಕಲಹಾಳ, ನಿಂಗವ್ವ ಕಲಹಾಳ, ನಿಂಗಪ್ಪ ಗೊಬ್ಬರಗುಂಪಿ, ರೇಣುಕಾ ಮರಿಯನ್ನವರ, ತಾಯವ್ವ ಕಲಹಾಳ ಸೇರಿದಂತೆ ಮುಂತಾದವರು ಧರಣಿಯಲ್ಲಿ ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ