ಆ್ಯಪ್ನಗರ

ಕಳ್ಳತನವಾದ ₹64.55 ಲಕ್ಷ ಮೌಲ್ಯದ ವಸ್ತುಗಳನ್ನು ಹಸ್ತಾಂತರ ಮಾಡಿದ ಗದಗ ಪೊಲೀಸರು

ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಕಳ್ಳತನ ಹೆಚ್ಚಾಗುತ್ತಿದೆ. ಕಳ್ಳತನ ತಡೆಗೆ ಜನರ ಸಹಕಾರ ಅಗತ್ಯವಾಗಿದೆ. ತುಂಬಾ ದಿನಗಳ ವರೆಗೆ ಮನೆಗೆ ಬೀಗ ಹಾಕುವ ಅನಿವಾರ್ಯತೆ ಎದುರಾದಲ್ಲಿ ಸಮೀಪದ ಪೊಲೀಸ್‌ ಠಾಣೆಗೆ ಮಾಹಿತಿ ನೀಡಬೇಕು. ಆಗ ಬೀಟ್‌ ಪೊಲೀಸರು ಅಲ್ಲಿಗಸ್ತು ನಡೆಸುವುದರಿಂದ ಕಳ್ಳತನ ತಡೆಯಲು ಸಾಧ್ಯ. ಅದೇ ರೀತಿ ಎಲ್ಲರೀತಿಯ ತುರ್ತು ಸೇವೆಗೆ 112 ಸೇವೆಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಕರೆ ಮಾಡಿದ ಕೆಲವೇ ನಿಮಿಷಗಳಲ್ಲಿ 112 ನೆರವಿಗೆ ಬರಲಿದೆ ಎಂದು ಎಸ್ಪಿ ಶಿವಪ್ರಕಾಶ ದೇವರಾಜ್‌ ತಿಳಿಸಿದರು.

Vijaya Karnataka 2 Nov 2021, 2:42 pm
ಗದಗ: ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳ ವ್ಯಾಪ್ತಿಯಲ್ಲಿ ನಡೆದ ಕಳ್ಳತನ, ಮೋಸ, ವಂಚನೆ ಪ್ರಕರಣಗಳ ತನಿಖೆಯಿಂದ ವಶಪಡಿಸಿಕೊಳ್ಳಲಾದ ಸ್ವತ್ತನ್ನು ದೂರುದಾರರಿಗೆ ಮರಳಿಸಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ಹೇಳಿದರು.
Vijaya Karnataka Web police


ಸೋಮವಾರ ನಗರದ ಪೊಲೀಸ್‌ ಭವನದಲ್ಲಿ ಸ್ವತ್ತುಗಳ ಹಸ್ತಾಂತರದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2020 ನ.21ರಿಂದ 2021 ಅ.25ರ ಅವಧಿಯಲ್ಲಿನ 77 ಪ್ರಕರಣಗಳ ತನಿಖೆ ಕೈಗೊಂಡು 89 ಜನರನ್ನು ಬಂಧಿಸಲಾಗಿದೆ. ಕಳ್ಳತನವಾದ ಒಟ್ಟು 33.65 ಲಕ್ಷ ರೂ. ಮೌಲ್ಯದ 1.38 ಕೆಜಿ ಬಂಗಾರದ ಪೈಕಿ 29.78 ಲಕ್ಷ ರೂ. ಮೌಲ್ಯದ 887 ಗ್ರಾಂ ಬಂಗಾರ ವಶಪಡಿಸಿಕೊಂಡು ದೂರುದಾರರಗೆ ನೀಡಲಾಗಿದೆ ಎಂದು ತಿಳಿಸಿದರು. ಅದೇ ರೀತಿ 2,65,854 ರೂ. ಮೌಲ್ಯದ 5.27 ಕೆಜಿ ಬೆಳ್ಳಿ ವಸ್ತುಗಳ ಪೈಕಿ 2,63,654 ರೂ. ಮೌಲ್ಯದ 5.23 ಕೆಜಿ ಬೆಳ್ಳಿ ಜಪ್ತಿ ಮಾಡಲಾಗಿದೆ. 18 ಲಕ್ಷ ರೂ. ಮೌಲ್ಯದ 35 ವಾಹನಗಳ ಪೈಕಿ 16.16 ಲಕ್ಷ ರೂ. ಮೌಲ್ಯದ 30 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕುಖ್ಯಾತ ಮನೆಗಳ್ಳನನ್ನು ಬಂಧಿಸಿ ₹36.5 ಲಕ್ಷ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡ ಮಾಗಡಿ ಪೊಲೀಸರು
ಇನ್ನು 5,49,125 ಮೌಲ್ಯದ ಬೆಲೆ ಬಾಳುವ ವಸ್ತುಗಳ ಪೈಕಿ 3,89,950 ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದು ಮೂಲ ಮಾಲೀಕರಿಗೆ ನೀಡಲಾಗಿದೆ. ಜತೆಗೆ 8.79 ಲಕ್ಷ ರೂ. ನಗದು ಪೈಕಿ 2.27 ಲಕ್ಷ ರೂ. ಜಪ್ತಿ ಮಾಡಲಾಗಿದೆ. ಮೋಸ ವಂಚನೆಯಿಂದ ಕಳೆದುಕೊಂಡ 12.51 ಲಕ್ಷ ರೂ. ಪೈಕಿ 9.79 ಲಕ್ಷ ರೂ. ಮರಳಿ ಪಡೆಯಲಾಗಿದೆ ಎಂದು ಮಾಹಿತಿ ನೀಡಿದರು. ಜಿಲ್ಲೆಯ ಎಲ್ಲ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಶ್ರಮದಿಂದ ಅತ್ಯಲ್ಪ ಅವಧಿಯಲ್ಲೇ ಪ್ರಕರಣಗಳ ತನಿಖೆ ನಡೆಸಿ, ತಪ್ಪಿತಸ್ಥರನ್ನು ಬಂಧಿಸಿದ್ದಲ್ಲದೆ ಕಳುವಾದ ವಸ್ತುಗಳು, ನಗದು, ಆಭರಣಗಳನ್ನು ಜನರಿಗೆ ಹಸ್ತಾಂತರಿಸಲಾಗಿದೆ. ಪೊಲೀಸ್‌ ಇಲಾಖೆ ಬಗ್ಗೆ ಜನರಲ್ಲಿ ವಿಶ್ವಾಸ ಮೂಡಿಸುವ ಸಂಬಂಧ ಈ ರೀತಿ ಎಲ್ಲ ಠಾಣೆಗಳ ವ್ಯಾಪ್ತಿಯಲ್ಲಿ ವಶಪಡಿಸಿ ಕೊಳ್ಳಲಾದ ಸ್ವತ್ತುಗಳನ್ನು ಜನರಿಗೆ ಹಸ್ತಾಂತರಿಸಲಾಗಿದೆ ಎಂದು ತಿಳಿಸಿದರು.

ಡಿವೈಎಸ್ಪಿ ಪವಾಡಶೆಟ್ಟರ್‌, ಡಿವೈಎಸ್ಪಿ ನರಗುಂದ ವಿಭಾಗ ಎಸ್‌.ಎಂ.ರಾಗಿ, ವಿವಿಧ ಠಾಣೆಗಳ ಸಿಪಿಐಗಳಾದ ರವಿ ಕಪ್ಪತನ್ನವರ, ಸುಧೀರ ಬೆಂಕಿ, ಸುನೀಲ ಸವದಿ, ಪಿ.ವಿ. ಸಾಲಿಮಠ, ವಿಕಾಸ ಲಮಾಣಿ, ಸುಬ್ಬಾಪುರಮಠ ಇತರರು ಉಪಸ್ಥಿತರಿದ್ದರು.
ಬೆಂಗಳೂರು: ಹುಡುಗಿ ವಿಚಾರಕ್ಕಾಗಿ ಸೂಪರ್‌ವೈಸರ್‌ಗಳ ಮಧ್ಯೆ ನಡೆದ ಜಗಳ ಕೊಲೆಯಲ್ಲಿ ಅಂತ್ಯ!
112 ನೆರವು ಪಡೆಯಿರಿನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಕಳ್ಳತನ ಹೆಚ್ಚಾಗುತ್ತಿದೆ. ಕಳ್ಳತನ ತಡೆಗೆ ಜನರ ಸಹಕಾರ ಅಗತ್ಯವಾಗಿದೆ. ತುಂಬಾ ದಿನಗಳ ವರೆಗೆ ಮನೆಗೆ ಬೀಗ ಹಾಕುವ ಅನಿವಾರ್ಯತೆ ಎದುರಾದಲ್ಲಿ ಸಮೀಪದ ಪೊಲೀಸ್‌ ಠಾಣೆಗೆ ಮಾಹಿತಿ ನೀಡಬೇಕು. ಆಗ ಬೀಟ್‌ ಪೊಲೀಸರು ಅಲ್ಲಿಗಸ್ತು ನಡೆಸುವುದರಿಂದ ಕಳ್ಳತನ ತಡೆಯಲು ಸಾಧ್ಯ. ಅದೇ ರೀತಿ ಎಲ್ಲರೀತಿಯ ತುರ್ತು ಸೇವೆಗೆ 112 ಸೇವೆಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಕರೆ ಮಾಡಿದ ಕೆಲವೇ ನಿಮಿಷಗಳಲ್ಲಿ 112 ನೆರವಿಗೆ ಬರಲಿದೆ ಎಂದು ಎಸ್ಪಿ ಶಿವಪ್ರಕಾಶ ದೇವರಾಜ್‌ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ