ಆ್ಯಪ್ನಗರ

ಗಜೇಂದ್ರಗಡ: ಮೊಬೈಲ್‌ ಮರಳಿಸಿದ ಪೊಲೀಸರು

ಗಜೇಂದ್ರಗಡ: ಸ್ಥಳೀಯ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿಕಳೆದುಕೊಂಡಿದ್ದ ಅಂದಾಜು 3 ಲಕ್ಷ ರೂ. ಮೊತ್ತದ ವಿವಿಧ ಪ್ರಕರಣಗಳಲ್ಲಿನ 26 ಮೊಬೈಲ್‌ಗಳನ್ನು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌.ಯತೀಶ್‌ ನೇತೃತ್ವದಲ್ಲಿಸಂಬಂಧಪಟ್ಟವರಿಗೆ ನೀಡಲಾಯಿತು.

Vijaya Karnataka 24 Aug 2020, 5:00 am
ಗಜೇಂದ್ರಗಡ: ಸ್ಥಳೀಯ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿಕಳೆದುಕೊಂಡಿದ್ದ ಅಂದಾಜು 3 ಲಕ್ಷ ರೂ. ಮೊತ್ತದ ವಿವಿಧ ಪ್ರಕರಣಗಳಲ್ಲಿನ 26 ಮೊಬೈಲ್‌ಗಳನ್ನು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌.ಯತೀಶ್‌ ನೇತೃತ್ವದಲ್ಲಿಸಂಬಂಧಪಟ್ಟವರಿಗೆ ನೀಡಲಾಯಿತು.
Vijaya Karnataka Web 23GJD-2_25
ಗಜೇಂದ್ರಗಡ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿವಶಪಡಿಸಿಕೊಂಡಿದ್ದ ಮೊಬೈಲ್‌ಗಳನ್ನು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌.ಯತೀಶ್‌ ಕಳೆದುಕೊಂಡವರಿಗೆ ನೀಡಿದರು


ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌.ಯತೀಶ ಮಾತನಾಡಿ, ಜಿಲ್ಲೆಯಲ್ಲಿಶಾಂತಿ ಸುವ್ಯವಸ್ಥೆ ಕಾಪಾಡುವುದರ ಜತೆಗೆ ಜನಸ್ನೇಹಿಯಾಗಿ ಕಾರ್ಯ ನಿರ್ವಹಿಸುವುದು ಇಲಾಖೆ ಮುಖ್ಯ ಧ್ಯೇಯ. ಕಾನೂನು ಮತ್ತು ಸಂಚಾರಿ ನಿಯಮಗಳ ಪಾಲನೆ ಜತೆಗೆ ಅಪರಾಧ ಮುಕ್ತ ಸಮಾಜ ನಿರ್ಮಾಣಕ್ಕೆ ಜಾಗೃತಿ ಕಾರ್ಯಕ್ರಮ ನಡೆಸಲಾಗುತ್ತಿದೆ. ಈ ನಿಟ್ಟಿನಲ್ಲಿಸಂಶಯಾಸ್ಪದವಾಗಿ ಸಂಚರಿಸುವ ವ್ಯಕ್ತಿಗಳ ಹಾಗೂ ಘಟನೆಗಳ ಬಗ್ಗೆ ಸಾರ್ವಜನಿಕರು ಇಲಾಖೆಗೆ ಮಾಹಿತಿ ನೀಡುವ ಮೂಲಕ ಜಿಲ್ಲೆಯಲ್ಲಿಕಾನೂನು ಸುವ್ಯವಸ್ಥೆ ಕಾಪಾಡಲು ಸಹಕರಿಸಬೇಕು ಎಂದರು.

ಸಿಪಿಐ ಸುನೀಲ್‌ ಸವದಿ, ಪಿಎಸ್‌ಐ ಗುರುಶಾಂತ ದಾಶ್ಯಾಳ, ಎಎಸ್‌ಐ ಎಚ್‌.ಎಲ್‌.ಭಜಂತ್ರಿ, ಮಹೇಶ ಬಳ್ಳಾರಿ, ಸುರೇಶ ಮಂತಾ, ದಾದಾಖಲಂದರ ಆಶೇಖಾನ, ನಾರಾಯಣ ವೆಂಕರೆಡ್ಡಿ, ಶರಣಪ್ಪ ಭಜಂತ್ರಿ, ವೀರೇಶ ಪಾಟೀಲ, ಜಗದೀಶ ಪೂಜಾರ, ಚಂದ್ರು, ಲಮಾಣಿ, ಬಿ.ಆರ್‌.ನದಾಫ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ