ಆ್ಯಪ್ನಗರ

ಗ್ಯಾಲರಿ ಛಾವಣಿ ವರ್ಕ್ ಸ್ಲೊ

​ಗದಗ: ಜಿಲ್ಲೆಯ ಕ್ರೀಡಾ ಕ್ಷೇತ್ರದ ಮುಕುಟವಾಗಬೇಕಿದ್ದ ನಗರದ ಜಿಲ್ಲಾಕ್ರೀಡಾಂಗಣದ ಪ್ರೇಕ್ಷಕರ ಗ್ಯಾಲರಿಗೆ ಛಾವಣಿ ಹಾಕುವ ಕಾಮಗಾರಿ ಕುಂಟುತ್ತ ಸಾಗಿದೆ. ಸುಮಾರು 7.8 ಕೋಟಿ ರೂ. ವೆಚ್ಚದಲ್ಲಿನಿರ್ಮಾಣಗೊಳ್ಳುತ್ತಿರುವ ವೀಕ್ಷಕರ ಗ್ಯಾಲರಿಯ ಛಾವಣಿ ಕಾಮಗಾರಿ ಟೆಂಡರ್‌ ಕರೆದು 3 ವರ್ಷ ಕಳೆದರೂ ಕಾಮಗಾರಿ ಭರದಿಂದ ಸಾಗುವ ಲಕ್ಷಣ ಕಾಣುತ್ತಿಲ್ಲ.

Vijaya Karnataka 22 Sep 2019, 5:00 am
ಸಲೀಮ್‌ ಬಳಬಟ್ಟಿ
Vijaya Karnataka Web 20SALIM10A_25
ಗದಗ ಜಿಲ್ಲಾಕ್ರೀಡಾಂಗಣದಲ್ಲಿಛಾವಣಿ ಹಾಕಲು ತಂದಿಟ್ಟ ಕಬ್ಬಿಣದ ಪೈಪುಗಳು ತುಕ್ಕು ಹಿಡಿದಿವೆ.

ಗದಗ: ಜಿಲ್ಲೆಯ ಕ್ರೀಡಾ ಕ್ಷೇತ್ರದ ಮುಕುಟವಾಗಬೇಕಿದ್ದ ನಗರದ ಜಿಲ್ಲಾಕ್ರೀಡಾಂಗಣದ ಪ್ರೇಕ್ಷಕರ ಗ್ಯಾಲರಿಗೆ ಛಾವಣಿ ಹಾಕುವ ಕಾಮಗಾರಿ ಕುಂಟುತ್ತ ಸಾಗಿದೆ.
ಸುಮಾರು 7.8 ಕೋಟಿ ರೂ. ವೆಚ್ಚದಲ್ಲಿನಿರ್ಮಾಣಗೊಳ್ಳುತ್ತಿರುವ ವೀಕ್ಷಕರ ಗ್ಯಾಲರಿಯ ಛಾವಣಿ ಕಾಮಗಾರಿ ಟೆಂಡರ್‌ ಕರೆದು 3 ವರ್ಷ ಕಳೆದರೂ ಕಾಮಗಾರಿ ಭರದಿಂದ ಸಾಗುವ ಲಕ್ಷಣ ಕಾಣುತ್ತಿಲ್ಲ.

ಒಟ್ಟು 8.37 ಎಕರೆ ಪ್ರದೇಶದಲ್ಲಿರುವ ಜಿಲ್ಲಾಕ್ರೀಡಾಂಗಣದಲ್ಲಿಸಿಂಥೆಟಿಕ್‌ ಟ್ರ್ಯಾಕ್‌, ಉದ್ದ ಜಿಗಿತ, ಎತ್ತರ ಜಿಗಿತ, ಹಾಕಿ,ಫುಟ್ಬಾಲ್‌ ಆಟಗಳಿಗೆ ಅನುಕೂಲಕರ ಅಂಕಣ ಇದೆ. ಆದರೆ ಕ್ರೀಡೆಗಳನ್ನು ವೀಕ್ಷಿಸಲು ಇರುವ ವೀಕ್ಷಕರ ಗ್ಯಾಲರಿಗೆ ಸುಸಜ್ಜಿತ ಛಾವಣಿ ಕೊರತೆ ಇದೆ.

ಕ್ರೀಡಾಂಗಣದಲ್ಲಿರುವ 8 ಪ್ರೇಕ್ಷಕರ ಗ್ಯಾಲರಿಗೆ ಛಾವಣಿ ಅಳವಡಿಸಲು ಲೋಕೋಪಯೋಗಿ ಇಲಾಖೆಯಿಂದ ಸುಮಾರು 7.80 ಕೋಟಿ ರೂ. ಮೊತ್ತದಲ್ಲಿಅಂದಾಜು ಪಟ್ಟಿ ತಯಾರಿಸಲಾಗಿತ್ತು. ಅದರಂತೆ 2016ರಲ್ಲಿಗೋವಾ ಮೂಲದ ಸಂಸ್ಥೆಗೆ ಗುತ್ತಿಗೆ ನೀಡಿ, ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಆದರೆ ಕಾಮಗಾರಿ ಮಾತ್ರ ಆರಂಭವಾಗಿದ್ದಿಲ್ಲ. ತಾಂತ್ರಿಕ ಅಡೆತಡೆಗಳು ನಿವಾರಣೆ ಆದ ನಂತರ ಒಂದು ತಿಂಗಳಿಂದ ಆಮೆ ಗತಿಯಲ್ಲಿಕಾಮಗಾರಿ ನಡೆಯುತ್ತಿದೆ.

ಗುತ್ತಿಗೆ ಪಡೆದ ಸಂಸ್ಥೆ ಪರಿಕರಗಳನ್ನು ಕ್ರೀಡಾಂಗಣದಲ್ಲಿತಂದಿಟ್ಟಿದೆ. ಟೆನ್ರೈಲ್‌ ಮುಂಬ್ರೇನ್‌ ಮೇಲ್ಛಾವಣಿ ಅಳವಡಿಕೆಗೆ ಅಗತ್ಯವಿರುವ ಪೈಪ್‌ಗಳು, ತಂದಿಟ್ಟಿದ್ದು, ವರ್ಷಗಳಿಂದ ಧೂಳು ತಿನ್ನುತ್ತಿವೆ. ಮೇಲ್ಛಾವಣಿ ಅಳವಡಿಕೆಗೆ ಪೂರಕವಾಗಿ ಪ್ರೇಕ್ಷಕರ ಗ್ಯಾಲರಿಯಲ್ಲಿರುವ ಸಿಂಮೆಂಟ್‌ ಕಂಬಗಳನ್ನು ಅರ್ಧಮರ್ಧ ಧ್ವಂಸಗೊಂಡಿದ್ದು, ಅವುಗಳ ಅವಶೇಷಗಳು ಹಾಗೇ ಉಳಿದಿವೆ.

ಸರಕಾರದ ಮಟ್ಟದಲ್ಲಿಕಾಮಗಾರಿ ಅಗ್ರಿಮೆಂಟ್‌ ಆಗಿದ್ದರಿಂದ ಕಾಮಗಾರಿ ಕಾಲಮಿತಿ ಬಗ್ಗೆ ಮಾಹಿತಿ ಇಲ್ಲ. ಆದರೆ, ಸರಕಾರದಿಂದಲೇ ಅನುದಾನ ಬಿಡುಗಡೆಯಾಗದ ಕಾರಣ ಕಾಮಗಾರಿ ಆರಂಭಗೊಂಡಿದ್ದಿಲ್ಲ. ಈ ಬಗ್ಗೆ ಹಲವು ಬಾರಿ ಇಲಾಖೆ ಮಟ್ಟದಲ್ಲಿಪತ್ರ ಬರೆದು, ಮೇಲಾಧಿಕಾರಿಗಳ ಗಮನ ಸೆಳೆಯಲಾಗಿದೆ. ಸಧ್ಯ ಕಾಮಗಾರಿ ಆರಂಭಗೊಂಡಿದೆ ಎನ್ನುತ್ತಾರೆ ಕ್ರೀಡಾ ಇಲಾಖೆ ಅಧಿಕಾರಿಗಳು.

ನೆರಳಿಗಾಗಿ ಹುಡುಕಾಟ :
ಜಿಲ್ಲಾಮಟ್ಟದ ರಾಷ್ಟ್ರೀಯ ಹಬ್ಬಗಳು, ಕ್ರೀಡಾಕೂಟಗಳು ಇದೇ ಕ್ರೀಡಾಂಗಣದಲ್ಲಿನಡೆಯುತ್ತವೆ. ಮಕ್ಕಳು, ಮಹಿಳೆಯರು ಸೇರಿದಂತೆ ಸಾರ್ವಜನಿಕರು ಅಪಾರ ಸಂಖ್ಯೆಯಲ್ಲಿಆಗಮಿಸುತ್ತಾರೆ. ಒಂದೊಮ್ಮೆ ಮಳೆ, ಬಿಸಿಲು ಬಂದರೆ ಮಕ್ಕಳು ನೆರಳಿಗಾಗಿ ಪರಿತಪಿಸುವ ಸ್ಥಿತಿ ಇದೆ. ಇದೆಲ್ಲಅಧಿಕಾರಿಗಳಿಗೆ ಗೊತ್ತಿದ್ದರೂ ಕ್ರಮ ಕೈಗೊಳ್ಳದಿರುವುದು ದುರ್ದೈವವೆ ಸರಿ.

ಕಾಮಗಾರಿಗೆ ಕಾಲಮಿತಿ ಇಲ್ಲ:
ಕ್ರೀಡಾಂಗಣದ ಮೇಲ್ಛಾವಣಿಗೆ ಸಂಬಂಧಿಸಿದಂತೆ ಎಫೆಕ್ಟಿವ್‌ ಆರ್ಕಿಟೆಕ್ಸ್‌ ಸವೀರ್‍ಸ್‌ ಹಾಗೂ ಕಾರ್ಯನಿರ್ವಾಹಕ ಅಭಿಯಂತರ ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಗದಗ ಮಧ್ಯೆ 2016ರ ಡಿ. 20 ರಂದು ಒಪ್ಪಂದ ಮಾಡಿಕೊಳ್ಳಲಾಗಿದೆ. ಇದರಲ್ಲಿಕಾಮಗಾರಿ ಮೊತ್ತ ಹಾಗೂ ವಿವರಗಳಿದ್ದರೂ, ಅವಧಿ ನಿಗದಿಗೊಳಿಸಿಲ್ಲ. ಕೆಲಸದ ಅವಧಿಯನ್ನು ಕಾಮಗಾರಿ ಪೂರ್ಣಗೊಳ್ಳುವವರೆಗೆ ಎಂದು ಉಲ್ಲೇಖಿಸಿರುವುದು ಅನುಮಾನಕ್ಕೆ ಕಾರಣವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ