ಆ್ಯಪ್ನಗರ

ಅವಳಿ ನಗರದಲ್ಲಿ ಗಣಪ ಇನ್ನು 9 ದಿನ

ಗದಗ : ಅವಳಿ ನಗರದಲ್ಲಿ ಸಾರ್ವಜನಿಕ ಗಣೇಶೋತ್ಸವವನ್ನು ಐದು ದಿನಗಳಿಂದ ಒಂಬತ್ತು ದಿನಗಳಿಗೆ ವಿಸ್ತರಿಸಿ ಸಾರ್ವಜನಿಕ ಗಣೇಶೋತ್ಸವ ಮಹಾಮಂಡಳಿ ಐತಿಹಾಸಿಕ ನಿರ್ಣಯ ಅಂಗೀಕರಿಸಿದೆ. ನಗರದಲ್ಲಿ ಸಾರ್ವಜನಿಕ ಗಣೇಶೋತ್ಸವ ಮಹಾಮಂಡಳಿಯ ಸಭೆಯಲ್ಲಿ ಈ ನಿರ್ಣಯ ಅಂಗೀಕರಿಸಲಾಯಿತು.

Vijaya Karnataka 22 Aug 2019, 5:00 am
ಗದಗ : ಅವಳಿ ನಗರದಲ್ಲಿ ಸಾರ್ವಜನಿಕ ಗಣೇಶೋತ್ಸವವನ್ನು ಐದು ದಿನಗಳಿಂದ ಒಂಬತ್ತು ದಿನಗಳಿಗೆ ವಿಸ್ತರಿಸಿ ಸಾರ್ವಜನಿಕ ಗಣೇಶೋತ್ಸವ ಮಹಾಮಂಡಳಿ ಐತಿಹಾಸಿಕ ನಿರ್ಣಯ ಅಂಗೀಕರಿಸಿದೆ. ನಗರದಲ್ಲಿ ಸಾರ್ವಜನಿಕ ಗಣೇಶೋತ್ಸವ ಮಹಾಮಂಡಳಿಯ ಸಭೆಯಲ್ಲಿ ಈ ನಿರ್ಣಯ ಅಂಗೀಕರಿಸಲಾಯಿತು.
Vijaya Karnataka Web GDG-21RUDRAGOUD11
ಗದಗನಲ್ಲಿ ನಡೆದ ಸಾರ್ವಜನಿಕ ಗಣೇಶೋತ್ಸವ ಮಹಾಮಂಡಳಿ ಸಭೆಯಲ್ಲಿ ಮಹಾಮಂಡಳಿಅಧ್ಯಕ್ಷ ರಾಜೂ ಖಾನಪ್ಪನವರ ಮಾತನಾಡಿದರು.


ಅವಳಿ ನಗರದಲ್ಲಿ ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳು ಕಳೆದ ನಾಲ್ಕು ದಶಕಗಳಿಂದ ಗಣೇಶ ವಿಗ್ರಹಗಳನ್ನು ಐದು, ಏಳು, ಒಂಭತ್ತು ದಿನಕ್ಕೆ ವಿಸರ್ಜಿಸುವ ಪದ್ಧತಿ ಪಾಲಿಸಿಕೊಂಡು ಬಂದಿದ್ದವು. ಇಂದಿನ ನಿರ್ಣಯದಿಂದ ಸಾರ್ವಜನಿಕ ಗಣೇಶೋತ್ಸವ ಮಂಡಳಿಯಲ್ಲಿ ಭಾರೀ ಒಮ್ಮತ ಮೂಡಿ ಹೊಸ ಇತಿಹಾಸಕ್ಕೆ ನಾಂದಿ ಹಾಡಿತು.

ಅಧ್ಯಕ್ಷ ತೆ ವಹಿಸಿದ್ದ ಮಹಾಮಂಡಳಿ ಅಧ್ಯಕ್ಷ ರಾಜೂ ಖಾನಪ್ಪನವರ ಮಾತನಾಡಿ, ಅವಳಿ ನಗರದಲ್ಲಿ ಕೆಲ ಸಾರ್ವಜನಿಕ ಗಜಾನನೋತ್ಸವ ಮಂಡಳಿಗಳು ಐದು ದಿನ, ಒಂಭತ್ತು ದಿನಗಳ ಕಾಲ ಪ್ರತಿಷ್ಠಾಪಿಸುತ್ತಿವೆ. ಈ ರೀತಿಯಾಗಿ ಬೇರೆ ಬೇರೆ ದಿನಗಳಂದು ಗಣೇಶ ಮೂರ್ತಿಗಳನ್ನು ವಿಸರ್ಜಿಸುವುದರಿಂದ ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡುವದು ಪೊಲೀಸರಿಗೆ ಕಿರಿಕಿರಿಯಾಗುತ್ತಿದೆ. ಈ ದಿಸೆಯಲ್ಲಿ ಪ್ರಸಕ್ತ ಸಾಲಿನಿಂದ ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳು ಐದು ದಿನದ ಬದಲಿಗೆ ಒಂಭತ್ತು ದಿನ ಪ್ರತಿಷ್ಠಾಪಿಸಲು ನಿರ್ಣಯ ಅಂಗೀಕರಿಸಬೇಕೆಂದು ಮನವಿ ಮಾಡಿದರು. ಸಭೆಯಲ್ಲಿ ಸೇರಿದ್ದ ನೂರಾರು ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳು ಭಾರೀ ಕರತಾಡನದ ಮೂಲಕ ಈ ಪ್ರಸ್ತಾವನೆಯನ್ನು ಸ್ವಾಗತಿಸಿದವು.

ಡಿಎಸ್ಪಿ ಟಿ.ವಿಜಯಕುಮಾರ ಮಾತನಾಡಿ, ಧಾರ್ಮಿಕ ಹಬ್ಬವಾಗಿರುವ ಗಣೇಶೋತ್ಸವವನ್ನು ಎಲ್ಲರೂ ಶಾಂತಿ, ಸೌಹಾರ್ದದಿಂದ ಆಚರಿಸಬೇಕು. ಯಾವುದೇ ಮಂಡಳಿಗಳು ಹಚ್ಚುವ ಮೈಕ್‌ ವಿದ್ಯಾರ್ಥಿ, ವೃದ್ಧರು, ರೋಗಿಗಳಿಗೆ ಕಿರಿಕಿರಿಯನ್ನುಂಟು ಮಾಡಬಾರದು. ಗಣೇಶ ಮೂರ್ತಿಗಳ ವಿಸರ್ಜನೆ ಮೆರವಣಿಗೆಯನ್ನು ಶಾಂತ ರೀತಿಯಿಂದ ನಡೆಸಬೇಕು. ಮೆರವಣಿಗೆಯಲ್ಲಿ ಶಾಂತಿ, ಸುವ್ಯಸ್ಥೆ ಹಾಳುಗೆಡವಲು ಪ್ರಯತ್ನಿಸುವವರ ಮೇಲೆ ಪೊಲೀಸ್‌ ಇಲಾಖೆ ಉಗ್ರ ಕ್ರಮ ಕೈಗೊಳ್ಳಲಿದೆಯೆಂದು ಎಚ್ಚರಿಸಿದರು.

ಶಹರ ಪಿಎಸೈ ಸೋಮೇಶ ಗೆಜ್ಜಿ, ಬಡಾವಣೆ ಪೊಲೀಸ್‌ ಠಾಣೆಯ ಪಿಎಸೈ ಎಸ್‌.ಎಸ್‌.ಪವಾರ, ವಾಸು ಜೋಗಿನ, ಮಾರುತಿ ಜಾಧವ, ಬಾಬು ಶಿದ್ಲಿಂಗ, ಹನುಂತಸಾ ಕಲಬುರ್ಗಿ, ಸುರೇಶ ಚಿತ್ತರಗಿ, ಮುತ್ತಣ್ಣ ಭರಡಿ, ಈರಣ್ಣ ಗಾಣಿಗೇರ, ಸುರೇಶ ಹೆಬಸೂರ, ರಾಕೇಶ ನವಲಗುಂದ, ಮಹಾಂತೇಶ ಪಾಟೀಲ ಇದ್ದರು.

ಪ್ರಶಸ್ತಿಗೆ ಸಮಿತಿ ರಚನೆ:
ಅವಳಿ ನಗರದಲ್ಲಿ ವಿವಿಧ ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳು ಪ್ರತಿಷ್ಠಾಪಿಸುವ ಗಣೇಶ ವಿಗ್ರಹಗಳಲ್ಲಿ ಅತ್ಯುತ್ತಮ ಮೂರು ಮಂಡಳಿಗೆ ಪ್ರಶಸ್ತಿ ನೀಡಲು ನಿರ್ಧರಿಸಿದೆ. ಅತ್ಯುತ್ತಮ ಮೂರ್ತಿ ಪ್ರತಿಷ್ಠಾಪನೆ, ಪೆಂಡಾಲ ಅಲಂಕಾರ, ವೇದಿಕೆ ಅಲಂಕಾರಗಳಿಗೆ ಸಂಬಂಧಿಸಿದಂತೆ ತಲಾ ಮೂರು ಬಹುಮಾನ ನೀಡಲು ಮಹಾಮಂಡಳಿ ಉದ್ದೇಶಿಸಿದೆ. ವಿವಿಧ ವಿಭಾಗಗಳಲ್ಲಿ ಪಾರಿತೋಷಕ ನೀಡಲು ವಿವಿಧ ಸಮಿತಿ ರಚಿಸಿದೆ. ಈ ಸಮಿತಿಯಲ್ಲಿ ವೀರಣ್ಣ ಮುಳ್ಳಾಳ ಗೌರವಾಧ್ಯಕ್ಷ , ಅಜ್ಜಣ್ಣ ಮಲ್ಲಾಡದ ಕಾರ್ಯಾಧ್ಯಕ್ಷ , ಅನೀಲ ಅಬ್ಬಿಗೇರಿ ಉಪಾಧ್ಯಕ್ಷ , ಕಿಶನ್‌ ಮೆರವಾಡೆ, ರಾಜೂ ಮಲ್ಲಾಡದ, ಚಂದ್ರು ವೇರ್ಣೇಕರ, ರವಿ ಕರಬಸಣ್ಣವರ, ರಾಘವೆಂದ್ರ ಪವಾರ, ವಿಶ್ವನಾಥ ಸಿರಿ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ