ಆ್ಯಪ್ನಗರ

ಗಣೇಶ, ಮೊಹರಂ ಹಬ್ಬ ಶಾಂತಿ ಸಭೆ

ಮುಳಗುಂದ: ಗಣೇಶ ಚತುರ್ಥಿ ಹಾಗೂ ಮೊಹರಂ ಹಬ್ಬ ಜತೆಯಲ್ಲಿಬಂದಿದ್ದು ಎರಡು ಹಬ್ಬಗಳನ್ನು ಶಾಂತಿ ಸೌಹಾರ್ದದಿಂದ ಆಚರಣೆಮಾಡಬೇಕು ಎಂದು ಗದಗ ಗ್ರಾಮೀಣ ಸಿಪಿಐ ಸಿದ್ದಲಿಂಗಪ್ಪಗೌಡ ಪಾಟೀಲ ಹೇಳಿದರು.

Vijaya Karnataka 30 Aug 2019, 5:00 am
ಮುಳಗುಂದ: ಗಣೇಶ ಚತುರ್ಥಿ ಹಾಗೂ ಮೊಹರಂ ಹಬ್ಬ ಜತೆಯಲ್ಲಿಬಂದಿದ್ದು ಎರಡು ಹಬ್ಬಗಳನ್ನು ಶಾಂತಿ ಸೌಹಾರ್ದದಿಂದ ಆಚರಣೆಮಾಡಬೇಕು ಎಂದು ಗದಗ ಗ್ರಾಮೀಣ ಸಿಪಿಐ ಸಿದ್ದಲಿಂಗಪ್ಪಗೌಡ ಪಾಟೀಲ ಹೇಳಿದರು.
Vijaya Karnataka Web ganesh moharram festival peace meeting
ಗಣೇಶ, ಮೊಹರಂ ಹಬ್ಬ ಶಾಂತಿ ಸಭೆ


ಪಟ್ಟಣದ ಪೊಲೀಸ್‌ ಠಾಣೆಯಲ್ಲಿನಡೆದ ಶಾಂತಿಸಭೆಯಲ್ಲಿಮಾತನಾಡಿದ ಅವರು, ಗಣೇಶ ಪ್ರತಿಷ್ಠಾಪನೆ ಮಾಡುವ ಸಂಘ, ಸಂಸ್ಥೆಗಳು ಕಡ್ಡಾಯವಾಗಿ ಪರವಾನಗಿ ಪಡೆದುಕೊಳ್ಳಬೇಕು. ಡಿಜೆ ಹಚ್ಚಬಾರದು ಹಾಗೂ ಪಿಒಪಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಬಾರದು ಎಂದರು.

ಪಿಎಸ್‌ಐ ಶಿವರಾಜ ಧರೆಗೋಣ ಮಾತನಾಡಿ, ಪಟ್ಟಣದಲ್ಲಿಎಲ್ಲರೂ ಶಾಂತಿ ಸೌಹಾರ್ದದಿಂದ ಹಬ್ಬ ಆಚರಿಸಬೇಕು. ಅಹಿತಕರ ಘಟನೆಗೆ ಕಾರಣರಾದ ವ್ಯಕ್ತಿಗಳ ವಿರುದ್ಧ ಪೊಲೀಸ್‌ ಇಲಾಖೆ ಕಠಿಣ ಕ್ರಮಕೈಗೊಳ್ಳಲಿದೆ ಎಂದರು.

ಈ ಸಂದರ್ಭದಲ್ಲಿಪಪಂ ಸದಸ್ಯ ಕೆ.ಎಲ್‌.ಕರಿಗೌಡರ.ವಿಜಯ ನೀಲಗುಂದ. ಕಣವಿ ಗ್ರಾ.ಪಂ ಸದಸ್ಯ ಬಾಪುಸಾಬ್‌ ಕಿಲ್ಲೇದಾರ, ಮುಖಂಡರಾದ ಎ.ಡಿ.ಮುಜಾವಾರ, ಅಶೋಕ ಹುಣಸಿಮರದ, ಎಂ.ಎಸ್‌.ಕಣವಿ ಬುದ್ದಪ್ಪ, ಮಾಡಳ್ಳಿ ರಫಿಕ್‌ ದಲೀಲ, ಪತ್ರಕರ್ತ ಸಂಘದ ಅಧ್ಯಕ್ಷ ವಿರುಪಾಕ್ಷಪ್ಪ ಕಣವಿ, ಸುಭಾಷ ದೊಡ್ಡಮನಿ ಮೊದಲಾದವರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ