ಆ್ಯಪ್ನಗರ

ನೆರೆಯಿಂದ ಗ್ಯಾಸ್‌ ಟ್ರಬಲ್‌ !

​ಮುಂಡರಗಿ: ಕಳೆದ ಒಂದು ತಿಂಗಳಿಂದ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿಅಡುಗೆ ಅನಿಲದ (ಸಿಲಿಂಡರ್‌ ) ಕೊರತೆಯಿಂದ ಗ್ರಾಹಕರು ತತ್ತರಿಸುತ್ತಿದ್ದಾರೆ. ಮುಂಡರಗಿ ತಾಲೂಕಿನಲ್ಲಿಒಂದು ವಾರದಿಂದ ಈ ಸಮಸ್ಯೆ ವಿಪರೀತವಾಗಿದ್ದು ಗ್ರಾಹಕರು, ಅಕ್ಷರದಾಸೋಹದ ಮೇಲೆಯೂ ದುಷ್ಪರಿಣಾಮ ಬೀರಿದೆ.

Vijaya Karnataka 25 Sep 2019, 5:00 am
ಸಿ.ಕೆ.ಗಣಪ್ಪನವರ
Vijaya Karnataka Web gas trouble from victims
ನೆರೆಯಿಂದ ಗ್ಯಾಸ್‌ ಟ್ರಬಲ್‌ !


ಮುಂಡರಗಿ: ಕಳೆದ ಒಂದು ತಿಂಗಳಿಂದ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿಅಡುಗೆ ಅನಿಲದ (ಸಿಲಿಂಡರ್‌ ) ಕೊರತೆಯಿಂದ ಗ್ರಾಹಕರು ತತ್ತರಿಸುತ್ತಿದ್ದಾರೆ. ಮುಂಡರಗಿ ತಾಲೂಕಿನಲ್ಲಿಒಂದು ವಾರದಿಂದ ಈ ಸಮಸ್ಯೆ ವಿಪರೀತವಾಗಿದ್ದು ಗ್ರಾಹಕರು, ಅಕ್ಷರದಾಸೋಹದ ಮೇಲೆಯೂ ದುಷ್ಪರಿಣಾಮ ಬೀರಿದೆ.

ಪ್ರಾಥಮಿಕ, ಪ್ರೌಢಶಾಲೆಗಳು, ಅಂಗನವಾಡಿ ಕೇಂದ್ರ, ಮತ್ತು ಹಾಸ್ಟೆಲ್‌, ಹೊಟೆಲ್‌, ಬೇಕರಿಗಳಲ್ಲಿನಿರೀಕ್ಷಿತ ಸಿಲಿಂಡರ್‌ ದೊರೆಯದ ಕಾರಣ ಅಡುಗೆ ಮಾಡಲು ತೊಂದರೆಪಡುವಂತಾಗಿದೆ.

ಗ್ಯಾಸ್‌ ಏಜೆನ್ಸಿಯವರು ಸಿಲಿಂಡರ್‌ ಅಭಾವಕ್ಕೆ ಈಚೆಗೆ ಸಂಭವಿಸಿದ ನೆರೆಪ್ರಭಾವ ಕಾರಣದಿಂದ ಸಿಲಿಂಡರ್‌ ಪೂರೈಕೆಯಲ್ಲಿವ್ಯತ್ಯಯವಾಗುತ್ತಿದೆ ಎಂದು ಹೇಳುತ್ತಿದ್ದಾರೆ.

ಮುಂಡರಗಿ ಪಟ್ಟಣಕ್ಕೆ ನಿತ್ಯ ಒಂದು ಲೋಡ್‌ ಅಂದರೆ 280 ಸಿಲಿಂಡರ್‌ ಬೇಕಾಗುತ್ತದೆ. ಉಳಿದ ಗ್ರಾಮೀಣ ಭಾಗಗಳಲ್ಲಿನೂರಕ್ಕೂ ಹೆಚ್ಚು ಸಿಲಿಂಡರ್‌ ಅವಶ್ಯ ಇರುತ್ತದೆ. ಆದರೆ ಕಳೆದ ಸೋಮವಾರದಿಂದ ಸಿಲಿಂಡರ್‌ ಲೋಡ್‌ ಬಂದಿಲ್ಲ, ಗುರುವಾರ ಲೋಡ್‌ ಬಂದರೂ ಅದು ಪಟ್ಟಣ ಮತ್ತು ಗ್ರಾಮೀಣ ಭಾಗಕ್ಕೆ ಸಾಕಾಗಲಿಲ್ಲ, ಹೀಗಾಗಿ ಬುಕ್‌ ಮಾಡಿದ ಗ್ರಾಹಕರು ಸಿಲಿಂಡರ್‌ ಆಫೀಸಿಗೆ ಅಲೆದಾಡುವಂತಾಗಿದೆ. ಮನೆ, ಮನೆಗೆ ಸಿಲಿಂಡರ್‌ ಪೂರೈಕೆ ಮಾಡುವುದು ಸಾಮಾನ್ಯ, ಆದರೆ ಅಭಾವದಿಂದ ಗ್ರಾಹಕರು ಏಜೆನ್ಸಿ ಬಳಿ ಬಂದು ನಿತ್ಯ ಸಿಲಿಂಡರ್‌ ತೆಗೆದುಕೊಂಡು ಹೋಗುವ ಪರಿಸ್ಥಿತಿ ಸಾಮಾನ್ಯವಾಗಿದೆ. ಬುಕ್‌ ಮಾಡಿದ ಗ್ರಾಹಕರು ಸಿಲಿಂಡರ್‌ಗಾಗಿ ಏಜೆನ್ಸಿ ಅವರ ಜತೆಗೆ ನಿತ್ಯ ವಾಗ್ವಾದ ನಡೆಯುತ್ತಿದೆ. ತಾಲೂಕಿನಲ್ಲಿ15 ಸಾವಿರಕ್ಕೂ ಹೆಚ್ಚು ಗ್ರಾಹಕರಿದ್ದಾರೆ. ಎಚ್‌ಪಿ ಮತ್ತು ಭಾರತ ಗ್ಯಾಸ್‌ ನಾಲ್ಕು ಏಜೆನ್ಸಿಗಳಿವೆ.

ಕೆಲವು ಪ್ರಾಥಮಿಕ, ಪ್ರೌಢಶಾಲೆಗಳಲ್ಲಿಅನ್ನಸಾರು ಮಾಡುವ ಬದಲು ಸಿಲಿಂಡರ್‌ ಉಳಿತಾಯಕ್ಕೆ ಕೇವಲ ಒಂದೇ ಪದಾರ್ಥ ಪಲಾವ್‌ ಮಾಡಲಾಗುತ್ತಿದೆ. ಇನ್ನು ಹೊಟೆಲ್‌ಗಳು, ಹಾಸ್ಟೆಲ್‌ನಲ್ಲಿಯೂ ಈ ಅಭಾವ ಸಾಕಷ್ಟಿದೆ.

ಅಭಾವಕ್ಕೆ ಕಾರಣವೇನು ? :
ಈಚೆಗೆ ಕರಾವಳಿ ಭಾಗದಲ್ಲಿಪ್ರವಾಹ ಬಂದು ಮುಖ್ಯರಸ್ತೆ ಬಂದ್‌ ಆಗಿ ಮತ್ತು ಹಡಗುಗಳ ಸಂಚಾರ ಸ್ಥಗಿತಗೊಂಡು ಸಾಗಣೆಯಲ್ಲಿತೊಂದರೆಯಾಗಿದೆ. ಇದರಿಂದ ಮಂಗಳೂರಿಗೆ ಬರುವ ಸಿಲಿಂಡರ್‌ಗಳು ಸಂಗ್ರಹ ಕೊರತೆಯಿಂದ ನಿಗದಿತ ಮತ್ತು ನಿರ್ಧಿಷ್ಟ ಸ್ಥಳಕ್ಕೆ ಪೂರೈಕೆ ಮಾಡಲು ಸಾಧ್ಯವಾಗಿಲ್ಲ. ಇದು ಹಲವು ಜಿಲ್ಲೆಗಳ ಮೇಲೆ ಸಿಲಿಂಡರ್‌ ಅಭಾವ ಸೃಷ್ಟಿಸಲು ಕಾರಣ. ಹೀಗಾಗಿ ನಗರ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗಗಲ್ಲಿಯೂ ಸಿಲಿಂಡರ್‌ ಸಮಸ್ಯೆ ತಲೆದೋರಿದೆ.

ವಾರದಲ್ಲಿಸರಿಯಾಗುವ ನಿರೀಕ್ಷೆ :
ಬೇರೆ ಕಡೆಗೆ ಒಂದೂವರೆ ತಿಂಗಳಿಂದ ಸಿಲಿಂಡರ್‌ ಸಮಸ್ಯೆ ಇದೆ. ಮುಂಡರಗಿಯಲ್ಲಿಹೇಗೋ ನಿರ್ವಹಣೆ ಮಾಡಲಾಗಿತ್ತು. ಆದರೆ ಒಂದು ವಾರದಿಂದ ಸಿಲಿಂಡರ್‌ ಪೂರೈಕೆ ಬೆಳಗಾವಿ,ಮಂಗಳೂರಿನಿಂದಲೇ ಪೂರೈಕೆಯಾಗುತ್ತಿಲ್ಲ. ಹೀಗಾಗಿ ಗ್ರಾಹಕರಿಗೆ ತೀರಾ ತೊಂದರೆಯಾಗಿದೆ. ವಾಸ್ತವ ಸಮಸ್ಯೆ ಗ್ರಾಹಕರಿಗೆ ಅರ್ಥವಾಗುತ್ತಿಲ್ಲ. ಇರುವುದರಲ್ಲಿಯೇ ಒದಗಿಸಲಾಗುತ್ತಿದೆ ಇದು ಅನಿವಾರ್ಯ. ಇನ್ನು ವಾರದಲ್ಲಿಅಭಾವ ಸಮಸ್ಯೆ ಬಗೆಹರಿಯುವ ಸಾಧ್ಯತೆ ಇದೆ ಎಂದು ಸ್ಥಳೀಯ ಗ್ಯಾಸ್‌ ಎಜೆನ್ಸಿಯವರು ಹೇಳುತ್ತಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ