ಆ್ಯಪ್ನಗರ

ಮಕ್ಕಳಿಗೆ ಪೌಷ್ಟಿಕ ಆಹಾರ ನೀಡಿ

ಗದಗ: ರೋಟರಿ ಸೆಂಟ್ರಲ್‌ ಪೂರ್ವಪ್ರಾಥಮಿಕ, ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿಮಕ್ಕಳ ಹಬ್ಬ ಆಚರಿಸಲಾಯಿತು. ಲೆಕ್ಕ ಪರಿಶೋಧಕ ಆನಂದ ಪೋತ್ನಿಸ ಕಾರ್ಯಕ್ರಮ ಉದ್ಘಾಟಿಸಿ, ಮಕ್ಕಳು ಅಭ್ಯಾಸ ಮಾಡಲು ಅವರ ಆರೋಗ್ಯ ಚೆನ್ನಾಗಿರಬೇಕು. ಆದ್ದರಿಂದ ಮಕ್ಕಳಿಗೆ ಪೌಷ್ಟಿಕ ಆಹಾರ ನೀಡಿ ಸದೃಢರನ್ನಾಗಿ ಮಾಡಿ ಎಂದರು.

Vijaya Karnataka 14 Jan 2020, 5:00 am
ಗದಗ: ರೋಟರಿ ಸೆಂಟ್ರಲ್‌ ಪೂರ್ವಪ್ರಾಥಮಿಕ, ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿಮಕ್ಕಳ ಹಬ್ಬ ಆಚರಿಸಲಾಯಿತು. ಲೆಕ್ಕ ಪರಿಶೋಧಕ ಆನಂದ ಪೋತ್ನಿಸ ಕಾರ್ಯಕ್ರಮ ಉದ್ಘಾಟಿಸಿ, ಮಕ್ಕಳು ಅಭ್ಯಾಸ ಮಾಡಲು ಅವರ ಆರೋಗ್ಯ ಚೆನ್ನಾಗಿರಬೇಕು. ಆದ್ದರಿಂದ ಮಕ್ಕಳಿಗೆ ಪೌಷ್ಟಿಕ ಆಹಾರ ನೀಡಿ ಸದೃಢರನ್ನಾಗಿ ಮಾಡಿ ಎಂದರು.
Vijaya Karnataka Web give children nutritious food
ಮಕ್ಕಳಿಗೆ ಪೌಷ್ಟಿಕ ಆಹಾರ ನೀಡಿ


ಸದೃಢ ದೇಶ ಒಳ್ಳೆಯ ಜ್ಞಾನ ನೀಡುವುದರಿಂದ ಮಕ್ಕಳನ್ನು ಉತ್ತಮ ಪ್ರಜೆಗಳನ್ನಾಗಿ ಮಾಡಬಹುದು. ಅಲ್ಲದೆ ಪಾಲಕರು ತಮ್ಮ ಮಕ್ಕಳು ಏನು ಓದುತ್ತಾರೆ ? ಏನನ್ನು ಬರೆಯುತ್ತಾರೆ ? ಎನ್ನುವುದನ್ನು ಗಮನವಿಟ್ಟು ನೋಡಬೇಕು. ಪಾಲಕರು ಹಾಗೂ ಶಿಕ್ಷಕರು ಇಬ್ಬರೂ ಸೇರಿದಾಗ ಮಕ್ಕಳ ಬೆಳವಣಿಗೆ ಉತ್ತಮವಾಗಿರುತ್ತದೆ ಎಂದರು. ರೋಟರಿ ಸೆಂಟ್ರಲ್‌ ಶಾಲೆಯಲ್ಲಿಮಕ್ಕಳು ಕಲಿತರೆ ಉತ್ತಮ ಅಭಿವೃದ್ಧಿ ಹೊಂದುವುದರಲ್ಲಿಎರಡು ಮಾತಿಲ್ಲ. ವಿದ್ಯಾರ್ಥಿಗಳು ಹೆಚ್ಚು ಅಂಕ ಗಳಿಸುವುದರ ಜತೆಗೆ ಸಂಸ್ಥೆಯ ಉತ್ತರೋತ್ತರ ಅಭಿವೃದ್ಧಿ ಹೊಂದಲಿ ಎಂದರು.

ಶಾಲೆಯ ವರ್ಷದಲ್ಲಿನಡೆದ ಚಟುವಟಿಕೆಗಳ ಕಿರುನೋಟ 'ಸಂಕಲನ ಸೌರಭ' ಬಿಡುಗಡೆ ಮಾಡಿದರು. ಪ್ರತಿಯೊಂದು ತರಗತಿಯಿಂದ ಉತ್ತಮ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿ ಎಂದು ಗುರುತಿಸಿ ಪ್ರಶಸ್ತಿ ನೀಡಲಾಯಿತು. ಅಂತರ ಶಾಲಾ ಕ್ರೀಡಾಕೂಟ ಸ್ಪರ್ಧೆಗಳಲ್ಲಿವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು. ಎಸ್‌ಎಸ್‌ಎಲ್‌ಸಿಯಲ್ಲಿಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಗಳಿಸಿದ ವಿದ್ಯಾರ್ಥಿನಿಯರಿಗೆ ತಲಾ 10,000 ರೂ, 7,500 ಹಾಗೂ 5,000 ರೂ.ನೀಡಲಾಯಿತು. ಪ್ರತಿ ವಿಷಯದಲ್ಲೂಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಹಾಗೂ ಪಾರಿತೋಷಕ ನೀಡಲಾಯಿತು.

ಸೆಂಟ್ರಲ್‌ ಅಧ್ಯಕ್ಷ ಶರಣಬಸಪ್ಪ ಗುಡಿಮನಿ, ಚೇತನ ಅಂಗಡಿ, ಮಲ್ಲಿಕಾರ್ಜುನ ಚಂದಪ್ಪನವರ, ಎಂ.ಎಸ್‌. ಹುಲಕೋಟಿ, ಬಿ. ಐ. ಬಂಗಾರಶೆಟ್ಟರ, ಪ್ರೊ.ಅನಿಲ ಜೋಶಿ, ಮುತ್ತುರಾಜ ಬಡಿಗೇರ, ಶಾರದಾ ಅಳಗವಾಡಿ, ಸುಜಾತಾ ಡಿ.ಕೆ., ಸೂರಜ ಜಾಧವ, ಮಹಾಲಕ್ಮೀ ಬಿಜ್ಜಳ, ಕವನಾ ಕೊಣ್ಣೂರ, ಸುಮೇಧಾ ಬಾಗಲಕೋಟ, ಮಾನಸ ಕರಿಸಿದ್ದಮಠ, ಗುರುಕಿರಣ ನಿಗಡೆ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ