ಆ್ಯಪ್ನಗರ

ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ:ಶಾಂತಲಿಂಗ ಶ್ರೀ

ನರಗುಂದ : ನಮ್ಮಲ್ಲಿ ಅನೇಕ ಪ್ರತಿಭಾವಂತರಿದ್ದು ಅವರಿಗೆ ಸೂಕ್ತ ವೇದಿಕೆ ಕಲ್ಪಿಸಿಕೊಡುವುದರ ಜತೆಗೆ ನಮ್ಮ ಸಂಸ್ಕಾರ, ಸಂಸ್ಕೃತಿ ಕಲಿಸಿಕೊಡುವುದು ಅವಶ್ಯವಾಗಿದ್ದು ಈ ನಿಟ್ಟಿನಲ್ಲಿ ಶಿಕ್ಷ ಕರು, ಪಾಲಕರು ಮಕ್ಕಳನ್ನು ಸುಂಸ್ಕೃತರನ್ನಾಗಿ ಮಾಡಿ ಎಂದು ಭೈರನಹಟ್ಟಿ ದೊರೆಸ್ವಾಮಿಮಠದ ಶಾಂತಲಿಂಗ ಸ್ವಾಮೀಜಿ ಸಲಹೆ ನೀಡಿದರು.

Vijaya Karnataka 25 Feb 2019, 5:00 am
ನರಗುಂದ : ನಮ್ಮಲ್ಲಿ ಅನೇಕ ಪ್ರತಿಭಾವಂತರಿದ್ದು ಅವರಿಗೆ ಸೂಕ್ತ ವೇದಿಕೆ ಕಲ್ಪಿಸಿಕೊಡುವುದರ ಜತೆಗೆ ನಮ್ಮ ಸಂಸ್ಕಾರ, ಸಂಸ್ಕೃತಿ ಕಲಿಸಿಕೊಡುವುದು ಅವಶ್ಯವಾಗಿದ್ದು ಈ ನಿಟ್ಟಿನಲ್ಲಿ ಶಿಕ್ಷ ಕರು, ಪಾಲಕರು ಮಕ್ಕಳನ್ನು ಸುಂಸ್ಕೃತರನ್ನಾಗಿ ಮಾಡಿ ಎಂದು ಭೈರನಹಟ್ಟಿ ದೊರೆಸ್ವಾಮಿಮಠದ ಶಾಂತಲಿಂಗ ಸ್ವಾಮೀಜಿ ಸಲಹೆ ನೀಡಿದರು.
Vijaya Karnataka Web GDG-24NRD2
ನರಗುಂದ ಲಿಟಲ್‌ ಸ್ಟಾರ್‌ ಶಾಲೆ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಶ್ರೀ ಶಾಂತಲಿಂಗ ಸ್ವಾಮಿಗಳು ಮಾತನಾಡಿದರು.


ನಗರದ ಗುಡಾರದ ಶಿಕ್ಷ ಣ ಸಂಸ್ಥೆಯ ಲಿಟಲ್‌ ಸ್ಟಾರ್‌ ಆಂಗ್ಲ ಮಾಧ್ಯಮ ಪೂರ್ವ ಪ್ರಾಥಮಿಕ ಶಾಲೆಯ 6ನೇ ವಾರ್ಷಿಕ ಸ್ನೇಹ ಸಮ್ಮೇಳ ಉದ್ಘಾಟಿಸಿ ಮಾತನಾಡಿದರು. ಮಕ್ಕಳಲ್ಲಿ ನಮ್ಮ ನಾಡಿನ ಕಲೆ, ಸಂಸ್ಕೃತಿಯ ಅರಿವು ಮೂಡಿಸಿ, ಅವರ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಬೇಕು ಎಂದರು.

ಬೆಳಗಾವಿಯ ಪ್ರೊ. ಪೈರ್‌ ಎನ್‌ಜಿಒ ವ್ಯವಸ್ಥಾಪಕ ನಿರ್ದೇಶಕ ಮಹೇಶ ಕೊಳ್ಳಿಯವರ ಮಾತನಾಡಿ, ಮಕ್ಕಳ ಕೈಗೆ ಮೊಬೈಲ್‌ ಕೊಡಬೇಡಿ, ಟಿವಿಯಿಂದ ದೂರವಿಟ್ಟು ಪಾಠದಲ್ಲಿ ಗಮನ ಹರಿಸುವಂತೆ ನೋಡಿಕೊಳ್ಳಿ. ಮೊಬೈಲ್‌, ಟಿವಿಗಳು ಮಕ್ಕಳ ಭವಿಷ್ಯವನ್ನು ಹಾಳುಮಾಡುತ್ತವೆ. ಈಗಿನಿಂದಲೆ ಅವುಗಳಿಂದ ದೂರವಿಟ್ಟರೆ ಮಕ್ಕಳು ಭವಿಷ್ಯ ಉಜ್ಜಲವಾಗಲಿದೆ ಎಂದರು.

ಸಂಸ್ಥೆ ಅಧ್ಯಕ್ಷ ಪ್ರಭು ಗುಡಾರದ,ನಿರ್ದೇಶಕ ರಾಜಶೇಖರ ಗುಡಾರದ , ಟಿಎಪಿಸಿಎಂಎಸ್‌ ಅಧ್ಯಕ್ಷ ಎಫ್‌.ಆರ್‌.ಪಾಟೀಲ, ನಿವೃತ್ತ ಶಿಕ್ಷ ಕ ಜಿ.ಎಫ್‌.ಆಯಟ್ಟಿ ಮಾತನಾಡಿದರು.

ವಿವಿಧ ಕ್ರೀಡೆ, ಸ್ಪರ್ಧೆಗಳಲ್ಲಿ ವಿಜೇತ ಮಕ್ಕಳಿಗೆ ಹಾಗೂ ಮಕ್ಕಳ ಪಾಲಕರಿಗೆ ಬಹುಮಾನ ವಿತರಿಸಲಾಯಿತು. ವೇದಿಕೆಯಲ್ಲಿ ಲಯನ್ಸ್‌ ಕಾಲೇಜು ಪ್ರಾ. ಎಸ್‌.ಜಿ.ಜಕ್ಕಲಿ, ಯೋಗೀಶ ಗುಡಾರದ ಉಪಸ್ಥಿತರಿದ್ದರು. ಕವಿತಾ ಆಯಟ್ಟಿ ಸ್ವಾಗತಿಸಿದರು. ಮುಖ್ಯ ಶಿಕ್ಷ ಕಿ ಜಯಶ್ರೀ ಗುಡಾರದ ವಾರ್ಷಿಕ ವರದಿ ವಾಚಿಸಿದರು. ನಾರಾಯಣ ವಡ್ಡರ,ಐನಾಪೂರ ನಿರೂಪಿಸಿದರು. ಮಗತುಂಬಿ ನದಾಫ ವಂದಿಸಿದರು. ನಂತರ ಮಕ್ಕಳಿಂದ ಸಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ