ಆ್ಯಪ್ನಗರ

ಜಾಗೃತ ವೀರಭದ್ರೇಶ್ವರ ದೇವರು

ಮುಂಡರಗಿ : ತುಂಗಭದ್ರ ನದಿ ತೀರದ ಸುಕ್ಷೇತ್ರ ಸಿಂಗಟಾಲೂರಿನ ನಂದಿ ಬೆಟ್ಟದಲ್ಲಿ ಪ್ರಾಚೀನ ಕಾಲದ ಶ್ರೀ ವೀರಭದ್ರೇಶ್ವರ ದೇವರು ಈ ಭಾಗದ ಭಕ್ತರ ಮನದಲ್ಲಿ ಮನೆ ಮಾಡಿದೆ. ಎತ್ತರದ ವೀರಭದ್ರೇಶ್ವರ ದೇವಸ್ಥಾನದ ಮುಂದೆ ಜುಳು..ಜುಳು ಹರಿಯುವ ತುಂಗಭದ್ರಾ ನದಿ ಸುತ್ತಲೂ ಹಚ್ಚಹಸಿರಿನಿಂದ ತುಂಬಿದ ನಿಸರ್ಗ ಮಡಿಲಲ್ಲಿ ಈ ಬೆಟ್ಟದ ಸಾಲಿನಲ್ಲಿ ಕಂಗೊಳಿಸುವ ವೀರಭದ್ರೇಶ್ವರ ದೇವರಿಗೆ ರಾಜ್ಯದ ನಾನಾ ಕಡೆಗೆ ಭಕ್ತರು ಇದ್ದಾರೆ.

Vijaya Karnataka 17 Aug 2019, 5:00 am
ಮುಂಡರಗಿ : ತುಂಗಭದ್ರ ನದಿ ತೀರದ ಸುಕ್ಷೇತ್ರ ಸಿಂಗಟಾಲೂರಿನ ನಂದಿ ಬೆಟ್ಟದಲ್ಲಿ ಪ್ರಾಚೀನ ಕಾಲದ ಶ್ರೀ ವೀರಭದ್ರೇಶ್ವರ ದೇವರು ಈ ಭಾಗದ ಭಕ್ತರ ಮನದಲ್ಲಿ ಮನೆ ಮಾಡಿದೆ. ಎತ್ತರದ ವೀರಭದ್ರೇಶ್ವರ ದೇವಸ್ಥಾನದ ಮುಂದೆ ಜುಳು..ಜುಳು ಹರಿಯುವ ತುಂಗಭದ್ರಾ ನದಿ ಸುತ್ತಲೂ ಹಚ್ಚಹಸಿರಿನಿಂದ ತುಂಬಿದ ನಿಸರ್ಗ ಮಡಿಲಲ್ಲಿ ಈ ಬೆಟ್ಟದ ಸಾಲಿನಲ್ಲಿ ಕಂಗೊಳಿಸುವ ವೀರಭದ್ರೇಶ್ವರ ದೇವರಿಗೆ ರಾಜ್ಯದ ನಾನಾ ಕಡೆಗೆ ಭಕ್ತರು ಇದ್ದಾರೆ.
Vijaya Karnataka Web GDG-16MDR1A SHIN SRAVA


ಶ್ರೀ ವೀರಭದ್ರೇಶ್ವರ ಮೂರ್ತಿಯನ್ನು ಸಿಂಗಟಾಲೂರು ಕ್ಷೇತ್ರದ ಹತ್ತಿರ ಗುಡ್ಡದಲ್ಲಿಯೇ ಪ್ರತಿಷ್ಠಾಪಿಸಲು ತನ್ನದೇ ಆದ ಐತಿಹ್ಯ ಇದೆ. ಈ ಜಾಗೆಗೆ ಪ್ರತಿದಿನ ಒಂದು ಆಕಳು ಬಂದು ಅಲ್ಲಿದ್ದ ಹುತ್ತದ ಮೇಲೆ ಹಾಲು ಕರೆಯುತ್ತಿದ್ದು. ಅದರ ಪಕ್ಕದ ಗವಿಯಲ್ಲಿ ತಪಸ್ಸು ಮಾಡುತ್ತಿದ್ದ ಋುಷಿಯೊಬ್ಬರು ಈ ಸ್ಥಳದ ಮಹತ್ವ ಅರಿತು, ಇಲ್ಲಿಯೇ ವೀರಭದ್ರೇಶ್ವರ ಮೂರ್ತಿ ಸ್ಥಾಪಿಸಿದರೆಂದು ಐತಿಹ್ಯ ಇದೆ. ಎಡಭಾಗದಲ್ಲಿ ಭದ್ರಕಾಳಮ್ಮನ ದೇವಾಲಯ, ಮಧ್ಯದಲ್ಲಿರುವ ಗವಿಯಲ್ಲಿ ಈಶ್ವರ ಲಿಂಗಗಳಿವೆ. ಈ ಗವಿಯಿಂದ ಸುಮಾರು 18 ಕಿಮೀ ದೂರದಲ್ಲಿರುವ ಕಪ್ಪತ್ತಮಲ್ಲಿಕಾರ್ಜುನನ ದೇವಾಲಯ ಹತ್ತಿರವಿರುವ ಕಾರಿಸಿದ್ದಪ್ಪನ ಪಡೆಗೆ ಒಳದಾರಿ ಇದೆ.

ನಂದಿಬೆಟ್ಟದ ಮಧ್ಯದಲ್ಲಿ ಸುಮಾರು 400 ವರ್ಷಗಳಷ್ಟು ಪುರಾತನದ್ದು ಎಂದು ಹೇಳಲಾಗುತ್ತಿರುವ ಕಲ್ಲಿನ ದೇವಸ್ಥಾನದಲ್ಲಿ ವೀರಭದ್ರೇಶ್ವರನ ಸುಂದರ ಉದ್ಭವ ಮೂರ್ತಿ ನೋಡುಗರ ಗಮನ ಸೆಳೆಯುತ್ತಿದೆ. ದೇವಸ್ಥಾನದ ಎಡ ಭಾಗದಲ್ಲಿ ಗುಡ್ಡ ಕೊರೆದು ನಿರ್ಮಿಸಿದ ಗವಿಸಿದ್ದೇಶ್ವರನ ದೇವಸ್ಥಾನವಿದೆ. ಗವಿಸಿದ್ದೇಶ್ವರನ ದೇವಸ್ಥಾನದಲ್ಲಿ ಎರಡು ಈಶ್ವರ ಲಿಂಗಗಳು ಹಾಗೂ ಅವುಗಳ ಮುಂದೆ ನಂದಿ ವಿಗ್ರಹಗಳಿವೆ.

ದೇವಸ್ಥಾನ ಅಭಿವೃದ್ಧಿ ಕಾರ್ಯ ಸುಮಾರು 4 ಕೋಟಿ ರೂ. ವೆಚ್ಚದಲ್ಲಿ ಭರದಿಂದ ಸಾಗಿದೆ.ವರ್ಷ ಪೂರ್ತಿ ಭಕ್ತರಿಗೆ ನಿತ್ಯ ಪ್ರಸಾದ ಮತ್ತು ವೀರಭದ್ರೇಶ್ವರ ದೇವರಿಗೆ ಪೂಜೆ ಅಭಿಷೇಕ ನಡೆಯುತ್ತದೆ. ಶ್ರಾವಣದಲ್ಲಿ ವಿಶೇಷ ಪೂಜೆ ನಡೆಯುತ್ತದೆ.

ವೀರಭದ್ರೇಶ್ವರ ದೇವಸ್ಥಾನ ಈಚೆಗೆ 2 ಕೋಟಿ ರೂ. ವೆಚ್ಚದಲ್ಲಿ ಸುಂದರ ಕಲ್ಲಿನಿಂದ ನಿರ್ಮಾಣವಾಗಿದೆ. ಈ ದೇವಸ್ಥಾನದ ಜೀರ್ಣೋದ್ದಾರ ಆರಂಭಗೊಂಡ ಮೇಲೆ ಮತ್ತು ದೇವಸ್ಥಾನ ಅಧ್ಯಕ್ಷ ಕರಬಸಪ್ಪ ಹಂಚಿನಾಳ ಭಕ್ತರೊಂದಿಗೆ ವಿದಾಯಕ ಕಾರ್ಯ ಕೈಗೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ