ಆ್ಯಪ್ನಗರ

ಸರಕಾರದಿಂದ ಮಠಗಳಿಗೆ ಅನುದಾನ ಶ್ರೀ ದಿಂಗಾಲೇಶ್ವರ ಶ್ರೀಗಳು ಸ್ವಾಗತ

ಲಕ್ಷ್ಮೇಶ್ವರ: ಜ್ಞಾನ, ಅನ್ನ, ಅಕ್ಷರ ತ್ರಿವಿಧ ದಾಸೋಹ ಸೇವೆ ಮಾಡುವ ಜತೆಗೆ ಧರ್ಮ, ಸಂಸ್ಕಾರ, ಮೌಲ್ಯ ಬಿತ್ತಿ ಉತ್ತಮ ಸಮಾಜ ನಿರ್ಮಾಣದ ಸೇವೆ ಮಾಡುತ್ತಿರುವ ಮಠಮಾನ್ಯಗಳಿಗೆ ಸರಕಾರ ಅನುದಾನ ನೀಡಿರುವುದನ್ನು ಬಾಲೇಹೊಸೂರಿನ ಶ್ರೀ ದಿಂಗಾಲೇಶ್ವರ ಸ್ವಾಮೀಜಿ ಸ್ವಾಗತಿಸಿದ್ದಾರೆ.

Vijaya Karnataka 15 Nov 2020, 5:00 am
ಲಕ್ಷ್ಮೇಶ್ವರ: ಜ್ಞಾನ, ಅನ್ನ, ಅಕ್ಷರ ತ್ರಿವಿಧ ದಾಸೋಹ ಸೇವೆ ಮಾಡುವ ಜತೆಗೆ ಧರ್ಮ, ಸಂಸ್ಕಾರ, ಮೌಲ್ಯ ಬಿತ್ತಿ ಉತ್ತಮ ಸಮಾಜ ನಿರ್ಮಾಣದ ಸೇವೆ ಮಾಡುತ್ತಿರುವ ಮಠಮಾನ್ಯಗಳಿಗೆ ಸರಕಾರ ಅನುದಾನ ನೀಡಿರುವುದನ್ನು ಬಾಲೇಹೊಸೂರಿನ ಶ್ರೀ ದಿಂಗಾಲೇಶ್ವರ ಸ್ವಾಮೀಜಿ ಸ್ವಾಗತಿಸಿದ್ದಾರೆ.
Vijaya Karnataka Web 14 LXR 1_25
ಬಾಲೆಹೊಸೂರಿನ ಶ್ರೀ ದಿಂಗಾಲೇಶ್ವರ ಸ್ವಾಮೀಜಿ


ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿದ ಶ್ರೀಗಳು ಕೊರೊನಾ, ಅತಿವೃಷ್ಟಿಯಿಂದ ತ್ರಿವಿಧ ದಾಸೋಹ ಮಾಡುತ್ತಿರುವ ಬಹುತೇಕ ಮಠಗಳು ಸೇವೆ ನೀಡಲಾಗದೇ ಸಂಕಷ್ಟದ ಸ್ಥಿತಿಯಲ್ಲಿವೆ. ಈ ವೇಳೆ ಮಠಗಳಿಗೆ ಅನುದಾನ ಬಿಡುಗಡೆಗೊಳಿಸಿದ್ದರಿಂದ ಮಠಗಳಲ್ಲಿಸಾಮಾಜಿಕ ಸೇವೆ ಮುಂದುವರೆಸಲು ಪ್ರೋತ್ಸಾಹ ನೀಡಿದಂತಾಗಿದೆ. ಎಚ್‌.ಡಿ.ಕುಮಾರಸ್ವಾಮಿ ಸಿಎಂ ಆಗಿದ್ದ ವೇಳೆ ಮಠಗಳಿಗೆ ಅನುದಾನ ಘೋಷಿಸಿದ್ದರೂ ರಾಜ್ಯದಲ್ಲಿಎದುರಾದ ನೆರೆ, ಪ್ರವಾಹ, ಕೊರೊನಾ ಹಾವಳಿ ಹಾಗೂ ಆರ್ಥಿಕ ಮುಗ್ಗಟ್ಟಿನಿಂದ ಅನುದಾನ ಬಿಡುಗಡೆ ವಿಳಂಬವಾಗಿತ್ತು. ಆದರೆ, ಕಷ್ಟದ ಕಾಲದಲ್ಲಿಮಠಗಳ ಬಗ್ಗೆ ಅಪಾರ ಗೌರವ, ಸೇವೆ, ಉದಾರ ಮನೋಭಾವದ ಸಿಎಂ ಬಿ.ಎಸ್‌.ಯಡಿಯೂರಪ್ಪನವರು ಅನುದಾನದ ಮೊತ್ತ ಮತ್ತಷ್ಟು ಹೆಚ್ಚಿಸಿ ರಾಜ್ಯದಲ್ಲಿನ ಚಿಕ್ಕ ಮಠಗಳಿಗೂ ಅನುದಾನ ನೀಡಿರುವುದು ಭಕ್ತರಲ್ಲಿಸಂತಸ ತಂದಿದೆ ಎಂದರು.

ಮಠಗಳು ಸಮಾಜದ ಆಸ್ತಿಯಾಗಿದ್ದು, ಸಮಾಜ ಸೇವೆಗೆ ಸಮರ್ಪಿಸಿಕೊಂಡಿರುವ ಮಠಗಳಿಗೆ ಸಹಾಯ-ಸಹಕಾರ ನೀಡುವದರಿಂದ ಸಾಮಾಜಿಕ ಸೇವೆ ಮುಂದುವರೆಸಲು ಮಠಗಳಿಗೆ ಸಹಾಯ ಕಲ್ಪಿಸಿದಂತಾಗಿದೆ. ಮಠಗಳಿಗೆ ಅನುದಾನ ನೀಡುವ ಪರಂಪರೆಗೆ ನಾಂದಿ ಹಾಡಿದ ಯಡಿಯೂರಪ್ಪನವರ ನೇತೃತ್ವದ ಸರಕಾರದಿಂದ ಮಠಗಳಿಗೆ ನೀಡಿದ ದೀಪಾವಳಿ ಕೊಡುಗೆ ಇದಾಗಿದೆ. ರಾಜ್ಯದಲ್ಲಿನ ಎಲ್ಲಮಠಾಧೀಶರ, ಭಕ್ತರ ಪರವಾಗಿ ಸರಕಾರವನ್ನು ಅಭಿನಂದಿಸುತ್ತೇನೆ. ದೀಪಾವಳಿ ಹಬ್ಬದಲ್ಲಿಹಚ್ಚಿದ ದೀಪಗಳ ಬೆಳಕಿನಿಂದ ಎಲ್ಲಕಷ್ಟ ಸಂಕಷ್ಟಗಳು ದೂರವಾಗಲಿ. ರಾಜ್ಯದಲ್ಲಿಶಾಂತಿ, ಸಮೃದ್ಧಿ ನೆಲೆಸಲಿ ಎಂದು ಆಶಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ