ಆ್ಯಪ್ನಗರ

ಬಸ್‌ ಮೇಲೆ ಸರಕಾರಿ ನಾಮಫಲಕ

ಮುಂಡರಗಿ : ರಾಜ್ಯದಲ್ಲಿ ಭಾನುವಾರವೇ ಲೋಕಸಭೆ ಚುನಾವಣೆ ನೀತಿ ಸಂಹಿತೆ ಜಾರಿಗೊಂಡಿದೆ. ನಾನಾ ಸರಕಾರಿ ಕಚೇರಿ ಎದುರು ಸರಕಾರದ ಪ್ರಚಾರದ ನಾಮಫಲಕಗಳನ್ನು ಭಾನುವಾರದಿಂದಲೇ ತೆರವುಗೊಳಿಸುವ ಪ್ರಕ್ರಿಯೆ ನಡೆದಿದೆ. ಮುಂಡರಗಿ ಪುರಸಭೆ, ತಹಸೀಲ್ದಾರ ಕಚೇರಿ, ಸಮಾಜ ಕಲ್ಯಾಣ ಇಲಾಖೆ, ಸಿಡಿಪಿಒ ಸೇರಿದಂತೆ ಅನೇಕ ಕಡೆಗೆ ಸರಕಾರದ ಯೋಜನೆಗಳ ಪ್ರಚಾರದ ನಾಮಫಲಕಗಳನ್ನು ತೆರವುಗೊಳಿಸಲಾಗಿದೆ.

Vijaya Karnataka 12 Mar 2019, 5:00 am
ಮುಂಡರಗಿ : ರಾಜ್ಯದಲ್ಲಿ ಭಾನುವಾರವೇ ಲೋಕಸಭೆ ಚುನಾವಣೆ ನೀತಿ ಸಂಹಿತೆ ಜಾರಿಗೊಂಡಿದೆ. ನಾನಾ ಸರಕಾರಿ ಕಚೇರಿ ಎದುರು ಸರಕಾರದ ಪ್ರಚಾರದ ನಾಮಫಲಕಗಳನ್ನು ಭಾನುವಾರದಿಂದಲೇ ತೆರವುಗೊಳಿಸುವ ಪ್ರಕ್ರಿಯೆ ನಡೆದಿದೆ. ಮುಂಡರಗಿ ಪುರಸಭೆ, ತಹಸೀಲ್ದಾರ ಕಚೇರಿ, ಸಮಾಜ ಕಲ್ಯಾಣ ಇಲಾಖೆ, ಸಿಡಿಪಿಒ ಸೇರಿದಂತೆ ಅನೇಕ ಕಡೆಗೆ ಸರಕಾರದ ಯೋಜನೆಗಳ ಪ್ರಚಾರದ ನಾಮಫಲಕಗಳನ್ನು ತೆರವುಗೊಳಿಸಲಾಗಿದೆ.
Vijaya Karnataka Web GDG-9 RON 1
ಮುಂಡರಗಿ ತಾಪಂ ಆವರಣದಲ್ಲಿರುವ ಸರಕಾರಿ ಪ್ರಚಾರದ ನಾಮಫಲಕ ತೆರವುಗೊಳಿಸಲಾಗಿದೆ.

ಆದರೆ ಮುಂಡರಗಿ ಕೊಪ್ಪಳ ಸಾರಿಗೆ ಸಂಸ್ಥೆ ಬಸ್‌ಗಳಲ್ಲಿ ಕೈಗಾರಿಕೆಗಳ ಕುರಿತು, ಮುಖ್ಯಮಂತ್ರಿ ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಅವರ ಭಾವಚಿತ್ರ ಮತ್ತು ಕೈಗಾರಿಕೆಗಳ ಕ್ಲಸ್ಟರ್‌ ಸ್ಥಾಪನೆ ಮಾಹಿತಿ, ನಿರುದ್ಯೋಗಗಳಿಗೆ ಉದ್ಯೋಗ ನೀಡುವ ಭರವಸೆ ಕುರಿತು ಹಾಕಿದ ಪ್ರಚಾರ ಫಲಕಗಳು ಸೋಮವಾರ ದಿನವೂ ರಾರಾಜಿಸಿದ್ದವು. ಉಳಿದ ಬಸ್‌ಗಳಿಗೆ ಹಾಕಿದ ಫಲಕಗಳು ಮಾಯವಾಗಿವೆ. ಆದರೆ ಈ ಮಾರ್ಗದಲ್ಲಿ ಸಂಚರಿಸುವ ಬಸ್‌ಗಳಲ್ಲಿ ಫಲಕ ಹಾಗೆ ಇವೆ. ನೀತಿ ಸಂಹಿತೆ ಸಾರಿಗೆ ಸಂಸ್ಥೆಗೆ ಅನ್ವಯವಾಗುವುದಿಲ್ಲವೆ ಎಂದು ಸಾರ್ವಜನಿಕರು ಚರ್ಚೆಯಲ್ಲಿ ತೊಡಗಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ