ಆ್ಯಪ್ನಗರ

ಗ್ರಾಪಂ ಮಟ್ಟದ ಗಣಿತ ಸ್ಪರ್ಧೆ

ಗದಗ: ರೋಣ ತಾಲೂಕಿನ ಮಾರನಬಸರಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿಸಮುದಾಯದ ಸಹಭಾಗಿತ್ವದಲ್ಲಿಗಣಿತ ಕಲಿಕಾ ಅಂದೋಲನ ಗ್ರಾಪಂ ಮಟ್ಟದ ಮಕ್ಕಳ ಗಣಿತ ಸ್ಪರ್ಧೆ ಗ್ರಾಪಂ, ಶಿಕ್ಷಣ ಇಲಾಖೆ, ಸಮುದಾಯ ಮತ್ತು ಶೈಕ್ಷಣಿಕ ಸ್ವಯಂ ಸೇವಕರು ಹಾಗೂ ಅಕ್ಷರ ಫೌಂಡೇಶನ್‌ ಆಶ್ರಯದಲ್ಲಿಮಕ್ಕಳ ಗಣಿತ ಸ್ಪರ್ಧೆ ಜರುಗಿತು.

Vijaya Karnataka 28 Nov 2019, 5:00 am
ಗದಗ: ರೋಣ ತಾಲೂಕಿನ ಮಾರನಬಸರಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿಸಮುದಾಯದ ಸಹಭಾಗಿತ್ವದಲ್ಲಿಗಣಿತ ಕಲಿಕಾ ಅಂದೋಲನ ಗ್ರಾಪಂ ಮಟ್ಟದ ಮಕ್ಕಳ ಗಣಿತ ಸ್ಪರ್ಧೆ ಗ್ರಾಪಂ, ಶಿಕ್ಷಣ ಇಲಾಖೆ, ಸಮುದಾಯ ಮತ್ತು ಶೈಕ್ಷಣಿಕ ಸ್ವಯಂ ಸೇವಕರು ಹಾಗೂ ಅಕ್ಷರ ಫೌಂಡೇಶನ್‌ ಆಶ್ರಯದಲ್ಲಿಮಕ್ಕಳ ಗಣಿತ ಸ್ಪರ್ಧೆ ಜರುಗಿತು.
Vijaya Karnataka Web grapham level math competition
ಗ್ರಾಪಂ ಮಟ್ಟದ ಗಣಿತ ಸ್ಪರ್ಧೆ

ಅಕ್ಷರ ಫೌಂಡೇಶನ್‌ ಅಧ್ಯಕ್ಷ ಮಾರುತಿ ಮಲ್ಲಾಪೂರ ಮಾತನಾಡಿ, ಈ ಗಣಿತ ಸ್ಪರ್ಧೆ ಮಕ್ಕಳಿಗೆ ಸ್ಪರ್ಧೆ ಆಗಿದೆ. ಈ ಸ್ಪರ್ಧೆಯಿಂದ ಮಕ್ಕಳಲ್ಲಿಸ್ಪರ್ಧಾ ಮನೋಭಾವ ಮತ್ತು ಮಕ್ಕಳ ಕಲಿಕಾ ಮಟ್ಟ ತಿಳಿಯಲು ಸಹಾಯಕಾರಿಯಾಗಿದೆ ಹಾಗೂ ಪ್ರಶ್ನೆ ಪತ್ರಿಕೆಯ ಬಗ್ಗೆ ಮಕ್ಕಳಿಗೆ ತಿಳಿಸಿದರು.

ಈ ಸ್ಪರ್ಧೆಯಲ್ಲಿ141 ಮಕ್ಕಳು ಭಾಗವಹಿಸಿದ್ದರು. 10 ಸ್ವಯಂ ಸೇವಕರು ಸ್ಪರ್ಧೆ ನಡೆಸಿ ನಂತರ ಮೌಲ್ಯಮಾಪನ ಮಾಡಿ ಫಲಿತಾಂಶ ನೀಡಿದರು. ನಂತರ ಮಕ್ಕಳಿಗೆ ಗ್ರಾಪಂನಿಂದ ಬಹುಮಾನ ವಿತರಿಸಲಾಯಿತು.

ಎಸ್‌ಡಿಎಂಸಿ ಅಧ್ಯಕ್ಷೆ ಉಮಕ್ಕ ತಳವಾರ ಅಧ್ಯಕ್ಷತೆ ವಹಿಸಿದ್ದರು. ಪರಶುರಾಮ ಅಬ್ಬಿಗೇರಿ, ಪರಸಪ್ಪ ತಳವಾರ, ಶೇಖಪ್ಪ ಮಾದರ, ನಿರ್ಮಲ ಗಡಾದ, ಮಾರುತಿ ಮಲ್ಲಾಪುರ ಇದ್ದರು.ಎಸ್‌.ಪಿ. ಹೊರಪೇಟಿ ನಿರೂಪಿಸಿದರು. ಎಸ್‌.ಬಿ. ಅಂಗಡಿ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ