ಆ್ಯಪ್ನಗರ

ಯೋಗ ಕೇಂದ್ರದಲ್ಲಿ ಗುರುಪೂರ್ಣಿಮೆ

ಗದಗ: ನಗರದ ಸಚ್ಚಿದಾನಂದ ಮಠದಲ್ಲಿ ನಿತ್ಯಂ ಮಹಿಳಾ ಯೋಗ ಕೇಂದ್ರದಲ್ಲಿ ಗುರು ಪೂರ್ಣಿಮೆ ಕಾರ್ಯಕ್ರಮ ನಡೆಯಿತು. ಮಾಜಿ ಅಧ್ಯಕ್ಷೆ ರಾಜೇಶ್ವರಿ ಹಿರೇಮಠ ಮಾತನಾಡಿ, ಅಂಧಕಾರವನ್ನು ಕಳೆದು ಜ್ಞಾನದ ದೀವಿಗೆಯನ್ನು ಕೊಡುವಂಥ ಗುರುವಿಗೆ ನಮನ ಸಲ್ಲಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದರು.

Vijaya Karnataka 21 Jul 2019, 5:00 am
ಗದಗ: ನಗರದ ಸಚ್ಚಿದಾನಂದ ಮಠದಲ್ಲಿ ನಿತ್ಯಂ ಮಹಿಳಾ ಯೋಗ ಕೇಂದ್ರದಲ್ಲಿ ಗುರು ಪೂರ್ಣಿಮೆ ಕಾರ್ಯಕ್ರಮ ನಡೆಯಿತು. ಮಾಜಿ ಅಧ್ಯಕ್ಷೆ ರಾಜೇಶ್ವರಿ ಹಿರೇಮಠ ಮಾತನಾಡಿ, ಅಂಧಕಾರವನ್ನು ಕಳೆದು ಜ್ಞಾನದ ದೀವಿಗೆಯನ್ನು ಕೊಡುವಂಥ ಗುರುವಿಗೆ ನಮನ ಸಲ್ಲಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದರು.
Vijaya Karnataka Web gurupurnima at yoga center
ಯೋಗ ಕೇಂದ್ರದಲ್ಲಿ ಗುರುಪೂರ್ಣಿಮೆ


ಶ್ರೀದೇವಿ ಗುಡ್ಡಿಮಠ ಮಾತನಾಡಿ, ಹುಟ್ಟಿದ ಮೇಲೆ ತಾಯಿ ಗುರುವಾಗಿ ನಂತರ ಪ್ರಾಥಮಿಕ ಶಿಕ್ಷ ಣ. ಪ್ರೌಢಶಾಲೆಯಲ್ಲಿ ಗುರುವಿನ ಪಾತ್ರ ವಹಿಸುತ್ತಾರೆ. ಹೀಗಾಗಿ ನಮ್ಮ ಜೀವನ ರೂಪಿಸುವ ಗುರುವಿಗೆ ನಮನ ತಿಳಿಸಿದರು.

ನಿತ್ಯಂ ಯೋಗ ಕೇಂದ್ರದ ಗುರುಮಾತೆಯರಾದ ಸುಮಂಗಲಾ ಹದ್ಲಿಯವರಿಗೆ ಯೋಗ ಬಂಧುಗಳಿಂದ ಗೌರವಪೂರ್ವಕ ಸನ್ಮಾನವನ್ನು ಮಾಡಿದರು.

ಭಾಗೀರಥಿ ಪೂಜಾರಿ ಮಾತನಾಡಿ, ಪ್ರತಿಯೊಬ್ಬರು ಆರೋಗ್ಯದಿಂದ ಇರಲು ಯೋಗವನ್ನು ಜೀವನದಲ್ಲಿ ಕಡ್ಡಾಯ ಅಳವಡಿಸಿಕೊಳ್ಳಬೇಕು ಎಂದರು.

ವಿಜಯಲಕ್ಷ್ಮೀ ಪಾಟೀಲ ಮಾತನಾಡಿ, ಜೀವನದಲ್ಲಿ ಶರೀರ ಮತ್ತು ಮನಸ್ಸನ್ನು ಕೂಡಿಸುವಂತಹ ಕೆಲಸವನ್ನು ಯೋಗ ಮಾಡುತ್ತದೆ. ಆದ್ದರಿಂದ ಯೋಗವನ್ನು ನಿತ್ಯ ಮಾಡಬೇಕು ಎಂದರು.

ಅಶ್ವಿನಿ ಹೊಸಮಠ, ವಿಜಯಲಕ್ಷ್ಮಿ ಬಿರಾದಾರ, ರೇಣುಕಾ ಗುಡ್ಲಾನೂರ, ಸುಶಿಲಾ ಪತ್ತಾರ, ಲಕ್ಷ್ಮಿ ಅಳಗವಾಡಿ, ಶಶಿಕಲಾ ಅವಾರಿ, ಆರತಿ, ಕಲಾವತಿ ವಿನಿಗೇರ, ಪೂರ್ಣಿಮಾ, ಪ್ರೀತಿ, ಕವಿತಾ ಬುಳ್ಳಾ, ಸಹನಾ, ವಿಜಯಲಕ್ಷ್ಮಿ ಹಳ್ಳಿಕೇರಿ, ಸರೋಜಾ ಸೋಲವನ್ನವರ, ದೀಪಾ ಪಾಂಡ್ರೆ, ಗಂಗಮ್ಮ, ಮಧು, ಚೈತ್ರಾ, ಸುಮಾ ಚುರ್ಚಿಹಾಳ, ಕಮಲಾ ಬೆಳಕೊಪ್ಪ ಇದ್ದರು. ಚೈತ್ರಾ ಅವಾರಿ ನಿರೂಪಿಸಿದರು. ಅಶ್ವಿನಿ ಹೊಸಮಠ ಪ್ರಾರ್ಥಿಸಿದರು. ವಿಜಯಲಕ್ಷ್ಮಿ ಬಿರಾದಾರ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ