ಆ್ಯಪ್ನಗರ

ಕಾಲಕಾಲೇಶ್ವರದಲ್ಲಿ ಪುಣ್ಯ ಸ್ನಾನ

ಗಜೇಂದ್ರಗಡ : ಸಮೀಪದ ದಕ್ಷಿಣ ಕಾಶಿ ಪ್ರಸಿದ್ದಿಯ ಐತಿಹಾಸಿಕ ಕಾಲಕಾಲೇಶ್ವರ ದೇಗುಲದಲ್ಲಿ ಮಕರ ಸಂಕ್ರಮಣ ಅಂಗವಾಗಿ ನಾಡಿನ ವಿವಿಧ ಊರುಗಳಿಂದ ಆಗಮಿಸಿದ ಸಹಸ್ರಾರು ಭಕ್ತರು ಮಂಗಳವಾರ ಪುಷ್ಕರಣಿ ತೀರ್ಥದಲ್ಲಿ ಪುಣ್ಯಸ್ನಾನ ಮಾಡಿದರು.

Vijaya Karnataka 16 Jan 2019, 5:00 am
ಗಜೇಂದ್ರಗಡ : ಸಮೀಪದ ದಕ್ಷಿಣ ಕಾಶಿ ಪ್ರಸಿದ್ದಿಯ ಐತಿಹಾಸಿಕ ಕಾಲಕಾಲೇಶ್ವರ ದೇಗುಲದಲ್ಲಿ ಮಕರ ಸಂಕ್ರಮಣ ಅಂಗವಾಗಿ ನಾಡಿನ ವಿವಿಧ ಊರುಗಳಿಂದ ಆಗಮಿಸಿದ ಸಹಸ್ರಾರು ಭಕ್ತರು ಮಂಗಳವಾರ ಪುಷ್ಕರಣಿ ತೀರ್ಥದಲ್ಲಿ ಪುಣ್ಯಸ್ನಾನ ಮಾಡಿದರು.
Vijaya Karnataka Web GDG-15GJD1
ಗಜೇಂದ್ರಗಡ ಬಳಿಯ ದಕ್ಷಿಣ ಕಾಶಿ ಪ್ರಸಿದ್ದಿಯ ಶ್ರೀ ಕಾಲಕಾಲೇಶ್ವರ ದೇಗುಲದಲ್ಲಿ ಮಂಗಳವಾರ ಮಕರ ಸಂಕ್ರಮಣ ಪ್ರಯುಕ್ತ ಭಕ್ತರು ಪುಷ್ಕರಣಿಯಲ್ಲಿ ಪುಣ್ಯಸ್ನಾನ ಮಾಡಿದರು.


ಉತ್ತರಾಯಣ ಸಂಕ್ರಾಂತಿ ಹೊಂಗಿರಣಗಳು ಪಸರಿಸುತ್ತಿದ್ದಂತೆ ಸುತ್ತಲಿನ ಗ್ರಾಮಗಳ ಯುವಕರ ತಂಡ, ರೈತ ಕುಟುಂಬದ ಮಹಿಳೆಯರು, ಮಕ್ಕಳು, ಹಿರಿಯರು, ಪರ ಊರುಗಳ ಜನ ವಾಹನದಲ್ಲಿ ಆಗಮಿಸಿ ಪುಣ್ಯ ಸ್ನಾನ ಮಾಡಿದರು.

ಬೆಟ್ಟದ ಮೇಲಿರುವ ದೇವಸ್ಥಾನದಲ್ಲಿ ಸ್ವಂಯಭು ಲಿಂಗಸ್ವರೂಪಿ ದೇವರಿಗೆ ಭಕ್ತರು ವಿಶೇಷ ಪೂಜೆ ಸಲ್ಲಿಸಿದರು.

ಸಂಕ್ರಾಂತಿ ಎಂದರೆ ಉಜ್ವಲವಾದ ಬೆಳಕು. ಸಂಕ್ರಮಣವು ಪ್ರಗತಿಯ, ಪರಿವರ್ತನೆಯ ದಿವ್ಯ ಸಂಕೇತವಾಗಿದೆ. ದೇಶದಲ್ಲಿ ಶಾಂತಿ, ಐಕ್ಯ, ಸಾಮರಸ್ಯ ಉಂಟಾಗುವುದರ ಜತೆ ದಿವ್ಯ ಜ್ಞಾನ, ಪರಿವರ್ತನೆ ಕ್ರಿಯಾಶೀಲತೆ ಎಲ್ಲರ ಬಾಳಲ್ಲಿ ಮೂಡಲಿ ಎಂದು ದೇವಸ್ಥಾನದ ಅರ್ಚಕ ಕಲ್ಲಂಭಟ್ಟ ಪೂಜಾರ ಮತ್ತು ಮಲ್ಲಯ್ಯ ಹಿರೇಮಠ ಹೇಳಿದರು.

ಸಂಜೆ ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳ ಜನರು ಎಳ್ಳು ಬೆಲ್ಲ ಪರಸ್ಪರ ವಿತರಿಸಿಶುಭ ಕೋರಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ