ಆ್ಯಪ್ನಗರ

ಸುವರ್ಣ ಮಹೋತ್ಸವ, ಸದ್ಬಾವನಾ ದಿನಾಚರಣೆ

ಮುಂಡರಗಿ : ಇಲ್ಲಿಯ ಕೆ.ಆರ್‌.ಬೆಲ್ಲದ ಕಲಾ ಮತ್ತು ವಾಣಿಜ್ಯ ವಿದ್ಯಾಯಲಯದಲ್ಲಿ ಮಂಗಳವಾರ ರಾಷ್ಟ್ರೀಯ ಸೇವಾ ಯೋಜನೆ ಘಟಕ ವತಿಯಿಂದ ಸುವರ್ಣ ಮಹೋತ್ಸವ ಹಾಗೂ ಸದ್ಬಾವನಾ ದಿವಸ ಆಚರಿಸಲಾಯಿತು.

Vijaya Karnataka 21 Aug 2019, 5:00 am
ಮುಂಡರಗಿ : ಇಲ್ಲಿಯ ಕೆ.ಆರ್‌.ಬೆಲ್ಲದ ಕಲಾ ಮತ್ತು ವಾಣಿಜ್ಯ ವಿದ್ಯಾಯಲಯದಲ್ಲಿ ಮಂಗಳವಾರ ರಾಷ್ಟ್ರೀಯ ಸೇವಾ ಯೋಜನೆ ಘಟಕ ವತಿಯಿಂದ ಸುವರ್ಣ ಮಹೋತ್ಸವ ಹಾಗೂ ಸದ್ಬಾವನಾ ದಿವಸ ಆಚರಿಸಲಾಯಿತು.
Vijaya Karnataka Web GDG-20MDR3 SDBHA


ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನಿವೃತ್ತ ಪ್ರೊ.ಬಿ.ಎಫ್‌.ಈಟಿ, ಇಂದಿನ ಯುಗದಲ್ಲಿ ವಿದ್ಯಾರ್ಥಿಗಳು ಜಾತಿ, ಧರ್ಮ ವಿಚಾರದಲ್ಲಿ ತಾರತಮ್ಯ ಮಾಡದೇ ಸಂತರ ಜೀವನದ ಆದರ್ಶಗಳನ್ನು ಆಳವಡಿಸಿಕೊಳ್ಳಲು ತಿಳಿಸಿದರು.

ಪ್ರೊ.ಎಸ್‌.ಆರ್‌ ಬಸಾಪುರ ಅವರು ಮಾತನಾಡಿ, ದಿ.ರಾಜೀವಗಾಂಧಿಯವರ ಜೀವನದ ಉತ್ತಮ ನಾಯಕತ್ವದ ಗುಣಗಳನ್ನು ತಿಳಿಸಿದರು.

ಅಧ್ಯಕ್ಷ ತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ.ಡಿ.ಸಿ ಮಠ, ಜಾತಿಯ ವಿಷಬೀಜ ಬಿತ್ತುವ ವ್ಯವಸ್ಥೆಯನ್ನು ಕೈಬಿಟ್ಟು ದೇಶ ಮೊದಲು ಎಂಬ ನೀತಿ ಅಳವಡಿಸಿಕೊಂಡು ಭಾವೈಕ್ಯತೆ ಮೆರೆಯಬೇಕು ಎಂದರು. ಹನುಮಂತಪ್ಪ.ಎನ್‌ ವಿದ್ಯಾರ್ಥಿಗಳಿಗೆ ಸದ್ಭಾವನಾ ದಿವಸದ ಪ್ರತಿಜ್ಞೆ ಬೋಧಿಸಿದರು. ಎನ್‌.ಎಸ್‌.ಎಸ್‌ ಘಟಕದ ಯೋಜನಾಧಿಕಾರಿ ಡಾ.ಆರ್‌.ಹೆಚ್‌ ಜಂಗನವಾರಿ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿ ಪ್ರಕಾಶ ಭಂಡಾರಿ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ